ETV Bharat / state

ನೀತಿ ಸಂಹಿತೆ ಜಾರಿಯಿದ್ದರೂ ಅಕ್ರಮ ಮದ್ಯ ಸಾಗಣೆ: ಇಬ್ಬರು ವಶಕ್ಕೆ - ಬಳ್ಳಾರಿ ನೀತಿ ಸಂಹಿತೆ ಜಾರಿ ಸುದ್ದಿ

ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿದ್ದ ಮದ್ಯ ವಶಪಡಿಸಿಕೊಳ್ಳಲಾಗಿದೆ.

ಅಕ್ರಮ ಮದ್ಯ ಸಾಗಾಟ ಪತ್ತೆ ಹಚ್ಚಿದ ಅಧಿಕಾರಿಗಳು

author img

By

Published : Dec 2, 2020, 7:02 PM IST

ಬಳ್ಳಾರಿ: ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಎಲ್ಲೆಡೆ ಅಬಕಾರಿ ಇಲಾಖೆ ಅಧಿಕಾರಿಗಳು ಗಸ್ತು ತಿರುಗುತ್ತಿದ್ದಾರೆ. ಈ ಸಂದರ್ಭದಲ್ಲಿ ಸಿರಗುಪ್ಪ ತಾಲೂಕಿನ ನಾಡಂಗ ಮತ್ತು ವೆಂಕಟಾಪುರ ಗ್ರಾಮಗಳ ಮಧ್ಯದಲ್ಲಿರುವ ನಾಳಾ ಹತ್ತಿರ ಅನುಮಾನಸ್ಪದವಾಗಿ ಲಾರಿ ಮತ್ತು ಟ್ರ್ಯಾಕ್ಟರ್​ ನಿಂತಿದ್ದು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ, ಅಕ್ರಮ ಮದ್ಯ ಮತ್ತು ವಾಹನಗಳು ಸೇರಿ ಒಟ್ಟು 35,12,900 ರೂ.ಗಳ ಸ್ವತ್ತುಗಳನ್ನು ವಶಪಡಿಸಿಕೊಂಡು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಹೊಸಪೇಟೆ ಅಬಕಾರಿ ಜಂಟಿ ಆಯುಕ್ತ ಎಲ್.ಮೋಹನಕುಮಾರ್, ಬಳ್ಳಾರಿ ಅಬಕಾರಿ ಉಪ ಆಯುಕ್ತ ನರೇಂದ್ರಕುಮಾರ್ ಅವರ ಆದೇಶದ ಮೇರೆಗೆ ಅಬಕಾರಿ ನಿರೀಕ್ಷಕರಾದ ತುಕಾರಾಂ ನಾಯ್ಕ್, ಪಿ.ಗಿರೀಶ್ ಮತ್ತು ಸಿಬ್ಬಂದಿಗಳಾದ ಸಿ.ದಕ್ಷಿಣಾಮೂರ್ತಿ ಮತ್ತು ಹರೀಶ್ ಸಿಂಗ್ ಅವರು ಮಂಗಳವಾರ ಸಂಜೆ ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಅಕ್ರಮ ಮದ್ಯ ಸಾಗಾಟ ಪತ್ತೆ ಹಚ್ಚಿದ ಅಧಿಕಾರಿಗಳು
ಅಕ್ರಮ ಮದ್ಯ ಸಾಗಣೆ ಪತ್ತೆ ಹಚ್ಚಿದ ಅಧಿಕಾರಿಗಳು

ಲಾರಿ ಮತ್ತು ಟ್ರ್ಯಾಕ್ಟರ್​​ ಪರಿಶೀಲಿಸಿದ ವೇಳೆ, ಲಾರಿಯು ರಹದಾರಿ ಪರವಾನಗಿ ಹೊಂದಿದೆ. ಸದರಿ ಲಾರಿ ಮತ್ತು ಟ್ರ್ಯಾಕ್ಟರ್​ನಲ್ಲಿರುವ ಮದ್ಯದ ಪೆಟ್ಟಿಗೆಗಳನ್ನು ಏಣಿಕೆ ಮಾಡಿದಾಗ ಲಾರಿಯಲ್ಲಿ ರಹದಾರಿ ಪತ್ರದಲ್ಲಿರುವ ಮದ್ಯಕ್ಕಿಂತ 103.68 ಲೀ (90 ಮಿ.ಲೀಟರ್​ನ ಒ.ಸಿ ವಿಸ್ಕಿಯ 12 ಪೆಟ್ಟಿಗೆಗಳು) ಮದ್ಯವು ಹೆಚ್ಚಿರುವುದು ಹಾಗೂ ಟ್ರ್ಯಾಕ್ಟರ್​ನಲ್ಲಿ ಪರವಾನಗಿ ಇಲ್ಲದ 241.92 ಲೀ (90 ಮಿ.ಲೀಟರ್​ನ ಒ.ಸಿ ವಿಸ್ಕಿಯ 28 ಪೆಟ್ಟಿಗೆಗಳು) ಒಟ್ಟು 345.60 ಲೀ ಅಕ್ರಮ ಮದ್ಯ ಕಂಡು ಬಂದಿದೆ.

ವಿವಿಧ ಬ್ರಾಂಡ್ ಹಾಗೂ ಅಳತೆಯ ಒಟ್ಟು 4982.400 ಲೀ (574 ಪೆಟ್ಟಿಗೆಗಳು) ಮದ್ಯ, 8.640 ಲೀ (1 ಪೆಟ್ಟಿಗೆ) ವೈನ್, 495.240 ಲೀ(58 ಪೆಟ್ಟಿಗೆಗಳು) ಬೀಯರ್, ಲಾರಿ ಮತ್ತು ಟ್ರ್ಯಾಕ್ಟರ್ ಹಾಗೂ ಟ್ರಾಲಿಯನ್ನು ವಶಪಡಿಸಿಕೊಳ್ಳಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.