ETV Bharat / state

ಜಿಲ್ಲಾ ಆಸ್ಪತ್ರೆಗಳ ಅಭಿವೃದ್ಧಿಗೆ ಆರೋಗ್ಯ ಸಚಿವ ಶ್ರೀರಾಮುಲು ಒಂದ್‌ ಐಡಿಯಾ ಮಾಡಿದಾರಂತೆ.. ಅದೇನದು? - ಬಳ್ಳಾರಿ ಕಾಮಗಾರಿ ಯೋಜನೆಗೆ ಚಾಲನೆ

ನರೇಂದ್ರ ಮೋದಿ ಅವರ ಇಚ್ಛೆಯಂತೆ ದೇಶದ ಜನ ಆರೋಗ್ಯವಂತರಾಗಿರಬೇಕು, ಯಾವುದೇ ಬೇದ ಭಾವವಿಲ್ಲದೇ ಎಲ್ಲರಿಗೂ ಸೌಲಭ್ಯಗಳು ಸಿಗುವ ಕೆಲಸ ಮಾಡುತ್ತೇನೆ. ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲೂ 500 ಬೆಡ್ ವ್ಯವಸ್ಥೆ ಮಾಡಲು ಮುಂದಾಗುತ್ತೇನೆ ಎಂದು ಸಚಿವ ಬಿ.ಶ್ರೀರಾಮುಲು ಭರವಸೆ ನೀಡಿದರು.

ಜಿಲ್ಲಾ ಆಸ್ಪತ್ರೆಗಳ ಅಭಿವೃದ್ಧಿಗೆ ಶ್ರಮಿಸುವೆ: ಸಚಿವ ಬಿ.ಶ್ರೀರಾಮುಲು ಭರವಸೆ
author img

By

Published : Oct 5, 2019, 9:07 PM IST

ಬಳ್ಳಾರಿ: ನರೇಂದ್ರ ಮೋದಿ ಅವರ ಇಚ್ಛೆಯಂತೆ ದೇಶದ ಎಲ್ಲಾ ಜನರು ಆರೋಗ್ಯವಂತರಾಗಿರಬೇಕು. ಯಾವುದೇ ಬೇದ ಭಾವವಿಲ್ಲದೇ ಎಲ್ಲರಿಗೂ ಸೌಲಭ್ಯಗಳು ಸಿಗುವಂತೆ ಕೆಲಸ ಮಾಡುತ್ತೇನೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಭರವಸೆ ನೀಡಿದರು.

ಜಿಲ್ಲಾ ಆಸ್ಪತ್ರೆಗಳ ಅಭಿವೃದ್ಧಿಗೆ ಶ್ರಮಿಸುವೆ.. ಸಚಿವ ಬಿ.ಶ್ರೀರಾಮುಲು ಭರವಸೆ

ನಗರದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಇಂದು 'ಸಿ' ಮತ್ತು 'ಡಿ' ಗ್ರೂಪ್ ನೌಕರರ ವಸತಿ ಗೃಹಗಳು, ಸ್ಕೂಲ್ ಆಫ್​ ನರ್ಸಿಂಗ್ ವಿದ್ಯಾರ್ಥಿಗಳ ವಸತಿ ನಿಲಯ ಹಾಗೂ ಡಿಎನ್‌ಬಿ ಸೆಮಿನಾರ್ ಹಾಲ್ ಕಟ್ಟಡ ಕಾಮಗಾರಿಯ ಭೂಮಿ ಪೂಜೆ ಕಾರ್ಯಕ್ರಮ ನಡೆಯಿತು. ಬಳ್ಳಾರಿಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬಳ್ಳಾರಿ ಕೆಕೆಆರ್‌ಡಿಬಿ ಯೋಜನೆ ಅಡಿಯಲ್ಲಿ ಈ ಸಮಾರಂಭ ಜರುಗಿತು.

7 ಕೋಟಿ 64 ಲಕ್ಷ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಸಚಿವ ಶ್ರೀರಾಮುಲು ಮಾತನಾಡಿದರು. ನರೇಂದ್ರ ಮೋದಿ ಅವರ ಇಚ್ಛೆಯಂತೆ ದೇಶದ ಜನರು ಆರೋಗ್ಯವಂತರಾಗಿರಬೇಕು. ಯಾವುದೇ ಬೇದ ಭಾವವಿಲ್ಲದೇ ಎಲ್ಲರಿಗೂ ಸೌಲಭ್ಯಗಳು ಸಿಗುವ ಕೆಲಸ ಮಾಡುತ್ತೇನೆ. ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲೂ 500 ಬೆಡ್ ವ್ಯವಸ್ಥೆ ಮಾಡಲು ಮುಂದಾಗುತ್ತೇನೆ. ಕಲ್ಯಾಣ ಕರ್ನಾಟಕ ಆರು ಜಿಲ್ಲೆಗಳ ಆಸ್ಪತ್ರೆಯಲ್ಲಿನ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡು ಅದಕ್ಕೆ ಬೇಕಾದ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವಿಕೆ ಮತ್ತು ಮೇಲ್ದರ್ಜೆಗೇರಿಸುವಿಕೆಗೆ ಸಂಭಂಧಿಸಿದಂತೆ ಬಜೆಟ್​ನಲ್ಲಿ ಸೇರ್ಪಡೆ ಮಾಡಿ ಅನುಷ್ಠಾನಕ್ಕೆ ಕ್ರಮವಹಿಸಲಾಗುವುದು ಎಂದರು.

ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಜನರಿಕ್ ಔಷಧ ಕೇಂದ್ರ ಆರಂಭಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಬಳ್ಳಾರಿಯಲ್ಲೂ ಶೀಘ್ರವಾಗಿ ಜನರಿಕ್ ಔಷಧ ಕೇಂದ್ರ ಆರಂಭಿಸಲಾಗುತ್ತದೆ. ಹೀಗಾಗಿ ಇನ್ನುಮುಂದೆ ರೋಗಿಗಳಿಗೆ ಔಷಧಿಗಾಗಿ ಹೊರಚೀಟಿ ಬರೆದುಕೊಡಬಾರದು ಎಂದು ಸೂಚಿಸಿದರು.

ರೋಗಿಯ ಸಹಾಯಕರಿಗೆ ವಸತಿಗೃಹ ನಿರ್ಮಾಣ ಅಗತ್ಯ:

ರೋಗಿಯ ಸಹಾಯಕರಿಗೆ ರಾತ್ರಿ ಹತ್ತರ ನಂತರ ಊಟ ಸಿಗುವುದಿಲ್ಲ ಅದಕ್ಕಾಗಿಯೇ ಜಿಲ್ಲಾ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಕ್ಯಾಂಟಿನ್ ಒಪನ್ ಮಾಡಬೇಕು. ಜೊತೆಗೆ ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ವಸತಿ ಗೃಹಗಳ ನಿರ್ಮಾಣ ಮಾಡುತ್ತೇನೆ ಎಂದು ತಿಳಿಸಿದರು.

ಇದೇ ವೇಳೆ ಬಳ್ಳಾರಿ‌ ನಗರ ಶಾಸಕ‌ ಜಿ.ಸೋಮಶೇಖರ್ ರೆಡ್ಡಿ ಮಾತನಾಡಿ, ಜಿಲ್ಲಾ ಆಸ್ಪತ್ರೆ ಅಧಿವೃದ್ಧಿಗಾಗಿ 17 ರಿಂದ 18 ಎಕರೆ ಸ್ಥಳ ಇದೆ. ಅದನ್ನು ಆಸ್ಪತ್ರೆಗೆ ಸೂಕ್ತವಾಗಿ ಬಳಸಿಕೊಳ್ಳಬೇಕೆಂದು ಸಚಿವರಲ್ಲಿ ಮನವಿ ಮಾಡಿದರು.

ಕಾದು ಕಾದು ಬಿಸಿಲಿಗೆ ಕಾದುಹೋದ ಆಶಾ‌ಕಾರ್ಯಕರ್ತರು:

ಸಚಿವ, ಬಿ. ಶ್ರೀರಾಮುಲು, ಶಾಸಕರು ಮತ್ತು ಅಧಿಕಾರಿಗಳು ಕಾರ್ಯಕ್ರಮಕ್ಕೆ 2 ತಾಸು ತಡವಾಗಿ ಬಂದ ಹಿನ್ನಲೆ ಆಶಾಕಾರ್ಯಕರ್ತರು ಮತ್ತು ಸಾರ್ವಜನಿಕರು ಬಿಸಿಲಿನ ಬೇಗೆಯಲ್ಲಿ ತೊಂದರೆ ಅನುಭವಿಸುವಂತಾಯಿತು. ಕುರ್ಚಿಗಳೇ ಇಲ್ಲದೆ ನರ್ಸ್​ಗಳು, ಆಶಾ ಕಾರ್ಯಕರ್ತರು ನಿಂತೇ ಕಾರ್ಯಕ್ರಮ ನೋಡುವ ಪರಿಸ್ಥಿತಿ ಉಂಟಾಯಿತ್ತು.

Intro:
ಗುಣಮಟ್ಟದ ಚಿಕಿತ್ಸೆಗಾಗಿ ಬಳ್ಳಾರಿ ಹೆಸರುವಾಸಿಯಾಗಿದೆ ಆದ್ದರಿಂದ 300 ರಿಂದ 500 ಹಾಸಿಗೆಗೆ ಮೆಲ್ದರ್ಜೆಗೆರಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ತಿಳಿಸಿದರು.

Body:.

ನಗರದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬಳ್ಳಾರಿ ಕೆ.ಕೆ.ಆರ್.ಡಿ.ಬಿ ಯೋಜನೆ ಅಡಿಯಲ್ಲಿ ಬಳ್ಳಾರಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ 'ಸಿ' ಮತ್ತು 'ಡಿ' ಗ್ರೂಪ್ ನೌಕರರ ವಸತಿ ಗೃಹಗಳು ಮತ್ತು ಸ್ಕೂಲ್ ಆಪ್ ನರ್ಸಿಂಗ್ ವಿದ್ಯಾರ್ಥಿಗಳ ವಸತಿ ನಿಲಯ ಹಾಗೂ ಡಿ.ಎನ್.ಬಿ ಸೆಮಿನಾರ್ ಹಾಲ್ ನಿರ್ಮಾಣ ಕಟ್ಟಡ ಕಾಮಗಾರಿಗಳು ಭೂಮಿ ಪೂಜೆ ಸಮಾರಂಭದ ಕಾರ್ಯಕ್ರಮ ನಡೆಯಿತು.

ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಬಿ‌.ಶ್ರೀರಾಮುಲು 7 ಕೋಟಿ 64 ಲಕ್ಷ ರೂಪಾಯಿ ವಿವಿಧ ಕಾಮಗಾರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ಶ್ರೀರಾಮುಲು ಚಾಲನೆಯನ್ನು ನೀಡಿದರು.

ನಂತರ ಮಾತನಾಡಿದ ಆರೋಗ್ಯ ಸಚಿವ ಶ್ರೀರಾಮುಲು
ನರೇಂದ್ರ ಮೋದಿ ಅವರು ಸಲಹೆಯಂತೆ ಭಾರತದಲ್ಲಿನ ಜನರ ಆರೋಗ್ಯವಂತ ಆಗಿರುವ ಬೇಕು, ಯಾವುದೇ ಬೇದ ಭಾವವಿಲ್ಲದೇ ಎಲ್ಲರಿಗೂ ಸೌಲಭ್ಯಗಳನ್ನು ಸಿಗುವ ಕೆಲಸ ಮಾಡುತ್ತೆನೆ ಎಂದು ತಿಳಿಸಿದರು‌‌.

ಮತ್ತು ರಾಜ್ಯದ ಎಲ್ಲಾ ಆಸ್ಪತ್ರೆಯ ಕೇಂದ್ರದಲ್ಲಿ 500 ಬೆಡ್ ಆಸ್ಪತ್ರೆ ಮಾಡಲು ಮುಂದಾಗುತ್ತೇನೆ ಎಂದು ಭರವಸೆಯನ್ನು ನೀಡಿದರು. ಕಲ್ಯಾಣ ಕರ್ನಾಟಕ ಆರು ಜಿಲ್ಲೆಗಳ ಆಸ್ಪತ್ರೆಯಲ್ಲಿನ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡು ಅದಕ್ಜೆ ಬೇಕಾದ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಿಕೆ ಮತ್ತು ಮೇಲ್ದರ್ಜೆಗೇರಿಸುವಿಕೆಗೆ ಸಂಭಂಧಿಸಿದಂತೆ ಬಜೆಟ್ ನಲ್ಲಿ ಸೇರ್ಪಡೆ ಮಾಡಿ ಅನುಷ್ಠಾನಕ್ಕೆ ಕ್ರಮವಹಿಸಲಾಗುವುದು ಎಂದರು.

ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಜನರಿಕ್ ಔಷಧೀ ಆರಂಭಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಬಳ್ಳಾರಿ ಯಲ್ಲಿ ಶೀಘ್ರವಾಗಿ ಆಂಭಸಲಾಗುತ್ತದೆ. ರೋಗಿಗಳಿಗೆ ಔಷಧಿಗಾಗಿ ಹೊರಚೀಟಿ ಬರೆದುಕೊಡದಂತೆ ಸೂಚಿಸಲಾಗಿದೆ ಎಂದರು.

ರೋಗಿಯ ಸಹಾಯಕರಿಗೆ ವಸತಿಗೃಹ ನಿರ್ಮಾಣ ಅಗತ್ಯ :-

ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ವಸತಿ ಗೃಹಗಳ ನಿರ್ಮಾಣ ಮಾಡುತ್ತೇನೆ ಎಂದು ತಿಳಿಸಿದರು. ರೋಗಿಯ ಸಹಾಯಕರಿಗೆ ರಾತ್ರಿ ಹತ್ತರ ನಂತರ ಊಟ ಸಿಗುವುದಿಲ್ಲ ಅದಕ್ಕಾಗಿಯೇ ಜಿಲ್ಲಾ ಆಸ್ಪತ್ರೆ ಗಳಲ್ಲಿ ಕಡ್ಡಾಯವಾಗಿ ಕ್ಯಾಂಟಿನ್ ಒಪನ್ ಮಾಡಬೇಕು ಎಂದು ತಿಳಿಸಿದರು.

ಜರ್ನಾಧನ ರೆಡ್ಡಿಯನ್ನು ನೆನೆದ ಬಿ.ಶ್ರೀರಾಮುಲು :-

ಈ ಹಿಂದೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಇದ್ದಾಗ ಜಿಲ್ಲಾ ಮಂತ್ರಿಯಾಗಿ ಜರ್ನಾಧನ ರೆಡ್ಡಿ ಆಗಿದ್ದರು, ನಾನು ಸಹ ( ಶ್ರೀರಾಮುಲು ) ಆರೋಗ್ಯಮಂತ್ರಿಯಾಗಿದ್ದೆ, ಸೋಮಶೇಖರ್ ರೆಡ್ಡಿ, ಕರುಣಾಕರ ರೆಡ್ಡಿ ಎಲ್ಲಾರೂ ಸೇರಿ‌ಒಂದು ನಿರ್ಧಾರಕ್ಕೆ ಬಂದಿವಿ ಅದು ಸಾರ್ವಜನಿಕರಿಗೆ ಉತ್ತಮ ಆಸ್ಪತ್ರೆ ಬೇಕು ಅಂತ, ಅದು ಇಲ್ಲಿಯವರೆಗೆ ಬಂದಿದೆ

ಸಿಟಿ ಸ್ಕ್ಯಾನ್ ಮತ್ತು ಎಂ.ಆರ್.ಐ ನಿರ್ಮಾಣ ಮಾಡಿದರೇ ನಗರ ಭಾಗದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಬಸರೆಡ್ಡಿ ಅವರು ಶ್ರೀರಾಮುಲು ಮನವಿ ಮಾಡಿಕೊಂಡರು.

ಬಳ್ಳಾರಿ‌ ನಗರ ಶಾಸಕ‌ ಜಿ.ಸೋಮಶೇಖರ್ ರೆಡ್ಡಿ ಮಾತನಾಡಿ ಜಿಲ್ಲಾ ಆಸ್ಪತ್ರೆ ಅಧಿವೃದ್ಧಿಗಾಗಿ 17 ರಿಂದ 18 ಎಕರೆ ಸ್ಥಳ ಇದೆ. ಅದನ್ನು ಬಳಸಿಕೊಂಡು ಅಭಿವೃದ್ಧಿಗಾಗಿ ಪ್ರಯತ್ನ ಮಾಡಬೇಕೆಂದು ಸಚಿವರಲ್ಲಿ ಮನವಿ ಮಾಡಿದರು.

ಬಿಸಿಲಿಗೆ ಕಾದು ಆಶಾ‌ಕಾರ್ಯಕರ್ತರು :-

ಕಾರ್ಯಕ್ರಮ ಎರಡು ತಾಸುಗಳು ಕಾಲ ತಡವಾಗಿ ಬಂದ ಸಚಿವ, ಶಾಸಕರು ಮತ್ತು ಅಧಿಕಾರಿಗಳು, ಬಿಸಿಲಿಗೆ ಕಾದು ಆಶಾಕಾರ್ಯಕರ್ತರು ಮತ್ತು ಸಾರ್ವಜನಿಕ ತೊಂದರೆ ಅನುಭವಿಸಿದರು. ಕುರ್ಚಿಗಳ ಇಲ್ಲದೆ ನರ್ಸ್ ಗಳು ಮತ್ತು ಆಶಾ ಕಾರ್ಯಕರ್ತರು ನಿಂತು ಕಾರ್ಯಕ್ರಮ ನೋಡುವ ಪರಿಸ್ಥಿತಿ ಉಂಟಾಯಿತ್ತು.

Conclusion:ಈ ಸಮಾರಂಭದಲ್ಲಿ ಆರೋಗ್ಯ ಸಚಿವ ಶ್ರೀರಾಮುಲು, ಜಿಲ್ಲಾಧಿಕಾರಿ ಎಸ್.ಎಸ್ ನಕುಲ್, ಅಪರ
ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್, ವಿಧಾನ ಪರಿಷತ್ ಸದಸ್ಯ ಕೆ.ಸಿ ಕೊಂಡ್ಯಯ, ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೆ.ನಿತೀಶ್,
ಶಾಸಕ ಜಿ.ಸೋಮಶೇಖರ್ ರೆಡ್ಡಿ, ಸಂಸದ ವೈ.ದೇವೆಂದ್ರಪ್ಪ,
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಿವರಾಜ ಹೆಡೆ ಇನ್ನಿತರರು ಹಾಜರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.