ETV Bharat / state

ಕೆಆರ್​ಪಿ ಸೇರುವಂತೆ ಜನಾರ್ದನ ರೆಡ್ಡಿಯಿಂದ ಬೆದರಿಕೆ: ಸೋಮಶೇಖರ ರೆಡ್ಡಿ - ಜನಾರ್ದನ ರೆಡ್ಡಿ ಬೆದರಿಕೆ

ಕೆಆರ್​ಪಿ ಪಕ್ಷಕ್ಕೆ ಸೇರುವಂತೆ ಬಿಜೆಪಿ ಮುಖಂಡರಿಗೆ ಜನಾರ್ದನ ರೆಡ್ಡಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಹೋದರ ಸೋಮಶೇಖರ ರೆಡ್ಡಿ ಆರೋಪಿಸಿದ್ದಾರೆ.

BJP Candidate Somashekhara reddy pressmeet
ಬಿಜೆಪಿ ಅಭ್ಯರ್ಥಿ ಸೋಮಶೇಖರ ರೆಡ್ಡಿ ಸುದ್ದಿಗೋಷ್ಠಿ
author img

By

Published : May 8, 2023, 1:03 PM IST

ಬಿಜೆಪಿ ಅಭ್ಯರ್ಥಿ ಸೋಮಶೇಖರ ರೆಡ್ಡಿ ಸುದ್ದಿಗೋಷ್ಠಿ

ಬಳ್ಳಾರಿ: ಬಿಜೆಪಿಯ ಪಾಲಿಕೆ ಸದಸ್ಯರು ಹಾಗೂ ಮುಖಂಡರಿಗೆ ಜನಾರ್ದನ ರೆಡ್ಡಿ ಅವರು ಬೆದರಿಕೆ ಹಾಕಿ ಕೆಆರ್​ಪಿ ಪಕ್ಷ ಸೇರುವಂತೆ ಒತ್ತಡ ಹೇರಲಾಗುತ್ತಿದೆ ಎಂದು ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸೋಮಶೇಖರ ರೆಡ್ಡಿ ಆರೋಪ ಮಾಡಿದ್ದಾರೆ. ಬಿಜೆಪಿ ಜಿಲ್ಲಾ ಹಳೇಯ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿಂದು ಅವರು ಮಾತನಾಡಿದರು.

ನನ್ನ ಚುನಾವಣೆಗೆ ಸಂಬಂಧಿಸಿ ಕೆಆರ್​ಪಿ ಪಕ್ಷದವರು ವದಂತಿ ಹಬ್ಬಿಸುತ್ತಿದ್ದಾರೆ. ಕೊನೇ ಕ್ಷಣದಲ್ಲಿ ಕೆಆರ್​ಪಿ ಪಕ್ಷ ಸೇರುತ್ತಾರೆ ಎಂದು ವದಂತಿ ಹರಡುತ್ತಿದ್ದಾರೆ. ಆದರೆ ನಾನು ಮಾತ್ರ ನನ್ನ ಕೊನೇ ಕ್ಷಣದವರೆಗೂ ಬಿಜೆಪಿ ಪಕ್ಷದಲ್ಲೇ ಇರುತ್ತೇನೆ ಎಂದು ಹೇಳಿದರು.

ನಮ್ಮ ಬಳಿ ಹಣ ಇಲ್ಲ, ಅವರ ಬಳಿ ಹಣ ಇದೆ. ಹೀಗಾಗಿ ಅವರು ಜೋರಾಗಿ ಚುನಾವಣೆ ಮಾಡುತ್ತಾರೆ. ಆದರೆ ನಾನು ಪ್ರತಿಯೊಬ್ಬ ಸಾಮಾನ್ಯ ಮನುಷ್ಯನಿಗೆ ದೊರಕುವ ಮನುಷ್ಯ, ಜನರ ಬಳಿ ಇರವವನು. ಜನರಿಗೆ ಸಮಸ್ಯೆ ಹೇಳಿಕೊಳ್ಳಲು ಲಭ್ಯ ಆಗುತ್ತೇನೆ, ನನ್ನ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇನೆ. ಹೀಗಾಗಿ ನನಗೆ ಜನರು ಮತ ನೀಡಬೇಕು ಎಂದು ಸೋಮಶೇಖರ ರೆಡ್ಡಿ ಮನವಿ ಮಾಡಿಕೊಂಡರು.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶಾಲು ಹಾಕಿದವರೇ ಕೆಆರ್​ಪಿ ಪಕ್ಷನ್ನು ಸೇರಿದ್ದಾರೆ. ಅಶೋಕ್ ಕೆಆರ್​ಪಿ ಪಕ್ಷಕ್ಕೆ ಸೇರುವಂತೆ ಜನಾರ್ದನ ರೆಡ್ಡಿ ಅವರು ಬೆದರಿಸಿದ್ದಾರೆ. ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ದಿವಾಕರ ಬಾಬು ಅವರು ಕೂಡ ಕೆಆರ್​ಪಿ ಪಕ್ಷಕ್ಕೆ ಬೆಂಬಲಿಸುತ್ತಾರೆಂದರೆ ಅವರಿಗೂ ಒತ್ತಡ, ಬೆದರಿಕೆ ಇರಬಹುದು ಎಂಬುದು ನನ್ನ ಅನಿಸಿಕೆ. ಕಾಂಗ್ರೆಸ್​ನಲ್ಲಿದ್ದ ದಿವಾಕರ ಬಾಬು ಅವರು ಎರಡು ಸಲ ಶಾಸಕರಾದವರು. ಅಂಥವರು ಕೆಆರ್​ಪಿ ಪಕ್ಷವನ್ನು ಸೇರುತ್ತಾರೆಂದರೆ ನಾವೆಲ್ಲ ಅರ್ಥ ಮಾಡಿಕೊಳ್ಳಬೇಕು, ಅವರೆಲ್ಲ ಒಂದು ಕಡೆಯಾದರೆ ಮತ್ತೊಂದು ಕಡೆ ನಾನಿರುವೆ ಎಂದರು.

ಫಾರ್ಮ್ ಹೌಸ್​ನಲ್ಲಿ ಕಾಂಗ್ರೆಸ್​ನ ಒಬ್ಬ ನಾಯಕ ಹಾಗೂ ಬಿಜೆಪಿ ನಾಯಕರು ಒಬ್ಬರು ಸೇರಿ ಸಭೆ ಮಾಡಿದ್ದಾರೆಂಬ ವದಂತಿ ಇದೆ. ಇದರ ಬಗ್ಗೆ ತಿಳಿದಿದೆಯೇ? ಎಂದು ಕೇಳಿದ ಪ್ರಶ್ನೆಗೆ ಶಾಸಕ ರೆಡ್ಡಿ ಅವರು ಉತ್ತರಿಸಲು ನಿರಾಕರಿಸಿದ್ದು, ಮೋದಿ ಅವರು ಬಂದ ಹೋದ ಮೇಲೆ ಕಮಲ ಅರಳಲೇಬೇಕು ಎಂದು ವಿಶ್ವಾಸ ವ್ಯಕ್ತಪಡಿಸಿದರು. ನನ್ನ ಬಗ್ಗೆ ಹಬ್ಬಿಸಲಾಗುತ್ತಿರುವ ವದಂತಿಗಳನ್ನು ಸಾರ್ವಜನಿಕರು ನಂಬಬಾರದು. ನಾನು ಬಿಜೆಪಿಯಲ್ಲೇ ಇರುವೆ. ನನ್ನನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯ ವೈ.ಎಂ. ಸತೀಶ್, ಅನಿಲ್ ನಾಯ್ಡು, ಮಾಜಿ ಮೇಯರ್ ಪಾರ್ವತಿ ಇಂದೂಶೇಖರ್, ಮಲ್ಲನಗೌಡ ಸೇರಿದಂತೆ ಹಲವರು ಹಾಜರಿದ್ದರು.

ಇದನ್ನೂ ಓದಿ: ಜನಾರ್ದನರೆಡ್ಡಿ ಬೆಳೆಸಿದವರು ಈಗ ಅವರನ್ನೇ ನಡು ನೀರಿನಲ್ಲಿ ಕೈಬಿಟ್ಟು ಹೋಗಿದ್ದಾರೆ: ಗಾಲಿ ಲಕ್ಷ್ಮೀ ಅರುಣಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.