ಬಳ್ಳಾರಿ: ನನ್ನ ಹೆಸರಿನ ನಕಲಿ ಪತ್ರ ರಾಜ್ಯದೆಲ್ಲೆಡೆ ಹರಿದಾಡುತ್ತಿದೆ. ಅದರಿಂದ ನಾನು ಧೃತಿಗೆಡೋದಿಲ್ಲ. ಕೂಡಲೇ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಲು ನಿರ್ಧರಿಸಿರುವೆ ಎಂದು ಶಾಸಕ ಗಾಲಿ ಸೋಮಶೇಖರ ರೆಡ್ಡಿ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ಕಿಡಿಗೇಡಿಗಳು ಆನಂದ್ ಸಿಂಗ್ ಹೆಸರಿನ ಲೆಟರ್ ಹೆಡ್‌ನಲ್ಲಿ ನನ್ನ ಸಹಿಯನ್ನು ನಕಲಿ ಮಾಡಿ ಮಸೀದಿಗಳಿಗೆ ಬೆದರಿಕೆ ಪತ್ರ ಬರೆದಿದ್ದಾರೆ.
ಈ ಬಗ್ಗೆ ತನಿಖೆ ನಡೆಸಲು ಬಳ್ಳಾರಿ ವಲಯ ಐಜಿ ನಜುಂಡ ಸ್ವಾಮಿಯವರು ರಾಯಚೂರು ಎಸ್ಪಿ ನೇತೃತ್ವದ ತಂಡ ರಚಿಸಿದ್ದಾರೆ. ನಾನು ಕೂಡ ಈ ಬಗ್ಗೆ ಗೃಹ ಸಚಿವ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ದೂರು ನೀಡುವೆ ಎಂದು ಮಾಹಿತಿ ಹೇಳಿದರು.
ಇದೇ ವೇಳೆ ಚಕ್ರವರ್ತಿ ಸೂಲಿಬೆಲೆ, ಸಂಸದ ತೇಜಸ್ವಿ ಸೂರ್ಯ ಹತ್ಯೆ ಯತ್ನ ವಿಚಾರವಾಗಿ ಪ್ರತಿಕ್ರಿಯಿಸಿದ ಶಾಸಕ ಸೋಮಶೇಖರ ರೆಡ್ಡಿ, 'ಧರ್ಮೋ ರಕ್ಷತಿ ರಕ್ಷಿತಃ'. ಧರ್ಮದ ಪರ ಹೋರಾಡುವವರನ್ನ ಧರ್ಮವೇ ಕಾಪಾಡುತ್ತೆ. ಅವರಿಗೆ ಏನೂ ಆಗಲ್ಲ ಎಂದರು.