ETV Bharat / state

ಯಡಿಯೂರಪ್ಪ ಸರ್ಕಾರ ರಚಿಸುವಾಗ ನನಗೂ ಕರೆ ಬಂದಿತ್ತು: ಕಾಂಗ್ರೆಸ್​ ಶಾಸಕ ಭೀಮಾನಾಯ್ಕ

ಬಿಜೆಪಿ ಸೇರಲು ನನಗೂ ಆಹ್ವಾನ ಬಂದಿತ್ತು. ಆದರೆ, ನಾನು ಸಿದ್ದರಾಮಯ್ಯನವರ ಮುಖ ನೋಡಿಕೊಂಡು ಪಕ್ಷ ಬಿಡಲಿಲ್ಲ ಎಂದು ಕಾಂಗ್ರೆಸ್ ಶಾಸಕ ಭೀಮಾನಾಯ್ಕ ಹೇಳಿದ್ದಾರೆ.

I too was invited to join the BJP, say's Congress MLA
ಕಾಂಗ್ರೆಸ್​ ಶಾಸಕ ಭೀಮಾನಾಯ್ಕ
author img

By

Published : Aug 16, 2021, 12:19 PM IST

Updated : Aug 16, 2021, 12:32 PM IST

ಹೊಸಪೇಟೆ: ಸಮ್ಮಿಶ್ರ ಸರ್ಕಾರವನ್ನು ಉರುಳಿಸಿ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚಿಸುವಾಗ ನನಗೂ ಕರೆ ಬಂದಿತ್ತು ಎಂದು ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ಕಾಂಗ್ರೆಸ್​ ಶಾಸಕ ಭೀಮಾನಾಯ್ಕ ಹೇಳಿದ್ದಾರೆ.

ನಗರದಲ್ಲಿ ಖಾಸಗಿ ಹೋಟೆಲ್​ನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವೇಳೆ ಬಿಜೆಪಿಗೆ ಹೋಗಿದ್ದರೆ ಈಗ ಸಚಿವನಾಗಿರುತ್ತಿದ್ದೆ.‌ ಸಿದ್ದರಾಮಯ್ಯನವರ ಮುಖ ನೋಡಿಕೊಂಡು ನಾನು ಕಾಂಗ್ರೆಸ್ ಪಕ್ಷದಲ್ಲಿ ಮುಂದುವರೆದೆ ಎಂದರು.

ಶಾಸಕ ಭೀಮಾನಾಯ್ಕ

ಇದನ್ನೂ ಓದಿ: ಸಿಎಂ ಬೊಮ್ಮಾಯಿ ನಿವಾಸಕ್ಕೆ ಸಾರ್ವಜನಿಕರು ಮೊಬೈಲ್ ಕೊಂಡೊಯ್ಯುವುದಕ್ಕೆ ನಿಷೇಧ

ಬಿಜೆಪಿ ಪಕ್ಷಕ್ಕೆ ಸೇರಲು ನನಗೆ ಆಹ್ವಾನ ನೀಡಿದ್ದರು. ಆದರೆ, ನಾನು ಕಾಂಗ್ರೆಸ್ ಬಿಡುವ ಯೋಚನೆ ಮಾಡಲಿಲ್ಲ. ಯಾಕೆಂದರೆ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದಾಗ ಹಗರಿಬೊಮ್ಮನಹಳ್ಳಿ ಕ್ಷೇತ್ರಕ್ಕೆ ಅನುದಾನ‌ ನೀಡಿದ್ದರು. ಹಾಗಾಗಿಯೇ ನಾನು ಕಾಂಗ್ರೆಸ್ ಪಕ್ಷದಿಂದ ಗೆಲ್ಲಲು ಸಾಧ್ಯವಾಯಿತು ಎಂದು ನೆನಪಿಸಿಕೊಂಡರು.

Last Updated : Aug 16, 2021, 12:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.