ETV Bharat / state

ವಾಡಾ ಅಧ್ಯಕ್ಷ ಸ್ಥಾನ ನನಗೆ ಅವಶ್ಯಕತೆ ಇಲ್ಲ: ಕೆ. ರಾಮಲಿಂಗಪ್ಪ - ಫೆ.07 ರಂದು ಕುರುಬರನ್ನು ಎಸ್ಟಿಗೆ ಸೇರಿಸಲು ಬೃಹತ್ ಸಮಾವೇಶ

ಬುಡಾ ಅಧ್ಯಕ್ಷ ಸ್ಥಾನ ರದ್ದು ಮಾಡಿ. ಬಳಿಕ ವಾಡಾ ಅಧ್ಯಕ್ಷರನ್ನಾಗಿ ಆದೇಶವನ್ನು ಹೊರಡಿಸಿದರು. ಅಧಿಕಾರ ದೊಡ್ಡದಲ್ಲ. ಪಕ್ಷ ದೊಡ್ಡದು. ಹಾಗಾಗಿ ವಾಡಾ ಅಧ್ಯಕ್ಷ ಸ್ಥಾನ ನನಗೆ ಅವಶ್ಯತೆ ಇಲ್ಲ. ಇದನ್ನು ಸೊಕ್ಕಿನಿಂದ ದಿಕ್ಕರಿಸುತ್ತಿಲ್ಲ , ಬದಲಾಗಿ‌ ಪ್ರೀತಿಯಿಂದ ಬೇಡ ಎನ್ನುತ್ತಿದ್ದೇನೆ ಎಂದು ಹಾಲಿ ವಾಡಾ ಅಧ್ಯಕ್ಷ ಕೆ. ರಾಮಲಿಂಗಪ್ಪ ಹೇಳಿದ್ದಾರೆ.

K. Ramalingappa
ಹಾಲಿ ವಾಡಾ ಅಧ್ಯಕ್ಷ ಕೆ. ರಾಮಲಿಂಗಪ್ಪ
author img

By

Published : Feb 3, 2021, 7:52 PM IST

Updated : Feb 3, 2021, 8:22 PM IST

ಹೊಸಪೇಟೆ: ನನ್ನನ್ನು ಬುಡಾ ಅಧ್ಯಕ್ಷನ್ನಾಗಿ ಆಯ್ಕೆ ಮಾಡಿ ಆದೇಶ ಹೊರಡಿಸಿ, ಬಳಿಕ ರದ್ದು ಮಾಡಿರುವುದರಿಂದ ನನಗೆ ನೋವಾಗಿದೆ. ನಾನು ಕೇಳಿದ್ದಿಲ್ಲ. ಅವರೇ ಅಧ್ಯಕ್ಷರನ್ನಾಗಿ ಮಾಡಿದ್ದರು ಎಂದು ಮಾಜಿ ಬುಡಾ ಅಧ್ಯಕ್ಷ ಹಾಗೂ ಹಾಲಿ ವಾಡಾ ಅಧ್ಯಕ್ಷ ಕೆ. ರಾಮಲಿಂಗಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರ, ಬುಡಾ ಅಧ್ಯಕ್ಷ ಸ್ಥಾನ ರದ್ದು ಮಾಡಿ. ಬಳಿಕ ವಾಡಾ ಅಧ್ಯಕ್ಷರನ್ನಾಗಿ ಆದೇಶವನ್ನು ಹೊರಡಿಸಿದರು. ಅಧಿಕಾರ ದೊಡ್ಡದಲ್ಲ. ಪಕ್ಷ ದೊಡ್ಡದು. ಹಾಗಾಗಿ ವಾಡಾ ಅಧ್ಯಕ್ಷ ಸ್ಥಾನ ನನಗೆ ಅವಶ್ಯತೆ ಇಲ್ಲ. ಇದನ್ನು ಸೊಕ್ಕಿನಿಂದ ದಿಕ್ಕರಿಸುತ್ತಿಲ್ಲ, ಬದಲಾಗಿ‌ ಪ್ರೀತಿಯಿಂದ ಬೇಡ ಎನ್ನುತ್ತಿದ್ದೇನೆ. ವಾಡಾ ಅಧ್ಯಕ್ಷ ಸ್ಥಾನವನ್ನ ಸ್ಥಳೀಯರಿಗೆ ಒಳ್ಳೆಯ ಕಾರ್ಯಕರ್ತರಿಗೆ ನೀಡಲಿ. ಈ‌ ಮಟ್ಟಕ್ಕೆ ಬಂದಿದ್ದು ಪಕ್ಷದಿಂದ. ಪಕ್ಷಕ್ಕೆ ಮೋಸ ಮಾಡುವುದಿಲ್ಲ ಎಂದರು.

ಹಾಲಿ ವಾಡಾ ಅಧ್ಯಕ್ಷ ಕೆ. ರಾಮಲಿಂಗಪ್ಪ

ಹುದ್ದೆಗಳು ಬದಲಾವಣೆ ಆಗುತ್ತವೆ. ನನ್ನದು ಸಣ್ಣ ಹುದ್ದೆ. ವ್ಯಕ್ತಿ ಪೂಜೆ ಮಾಡಲು ಕೆಲವರು ಮಾಡಿಕೊಂಡು ಬಂದಿದ್ದಾರೆ. ಯಡಿಯೂರಪ್ಪ ಅವರು ಯಾವ ಒತ್ತಡಕ್ಕೆ ಮಣಿದ್ದಾರೆ ಎಂಬುದು ತಿಳಿದಿಲ್ಲ. ಆದರೆ, ಸರ್ಕಾರ ಉಳಿಯಬೇಕಾಗಿದೆ. ನನ್ನನ್ನು ಕೆಳಗಡೆ ಇಳಿಸಿದವರಿಗೆ ಕೋಟಿ ಕೋಟಿ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ಅವರಿಗೆ ಹೂವಿನ ಹಾರವನ್ನು ಹಾಕಲಾಗುವುದು ಎಂದರು.

ಎಸ್​ಟಿ ಹೋರಾಟದಲ್ಲಿ ಬಿಜೆಪಿಯ ಸ್ವಾರ್ಥವಿದೆ:

ಬೆಂಗಳೂರಿನಲ್ಲಿ ಫೆ.07 ರಂದು ಕುರುಬರನ್ನು ಎಸ್ಟಿಗೆ ಸೇರಿಸಲು ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಸಮುದಾಯದವರು ಮನೆಯಿಂದ ಪ್ರತಿಯೊಬ್ಬರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಮುದಾಯ ವಿದ್ಯಾರ್ಥಿಗಳಿಂದ ಉತ್ತಮ ಅಂಕಗಳಿಸಿದರೇ ಉನ್ನತ ಹುದ್ದೆ ಅಲಂಕರಿಸುತ್ತಿಲ್ಲ ಎಂಬ ಕೊರತೆ ಅವರಲ್ಲಿದೆ ಎಂದು ಬಿಜೆಪಿ ಮುಖಂಡ ಹಾಗೂ ಎಸ್ಟಿ ಹೋರಾಟ ಸಮಿತಿಯ ರಾಜ್ಯ ಕಾರ್ಯದರ್ಶಿ ಕೆ.ರಾಮಲಿಂಗಪ್ಪ ಹೇಳಿದ್ದಾರೆ.

ಓದಿ:ಗಡಿ ಸರ್ವೇಗೆ ನಕ್ಷೆ ವಿವಾದ: ತರಾತುರಿಯಲ್ಲಿ ಗಡಿ ಗುರುತು ಕಾರ್ಯ ನಡೆದಿರುವ ಶಂಕೆ

ಎಸ್ಟಿ ಹೋರಾಟದಲ್ಲಿ ಸಿದ್ದರಾಮಯ್ಯ ಬೆಂಬಲವಿದೆ. ಹೋರಾಟದಲ್ಲಿ ಅವರು ಭಾಗವಹಿಸದೇ ಇರಬಹುದು. ಆದರೆ, ಬೆಂಬಲವಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಸ್ವಯಂ ಪ್ರೇರಿತರಾಗಿ ಸಹಾಯ ಮಾಡುತ್ತಿದ್ದಾರೆ. ಇಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷ ಬರುವುದಿಲ್ಲ. ಇನ್ನೂ ಸಮಯವಿದೆ ಎಲ್ಲೂರು ಹೋರಾಟಕ್ಕೆ ಸಹಾಯ ಮಾಡಲಿದ್ದಾರೆ.‌ ಇದು‌ ನಿನ್ನೆಯ ಮೊನ್ನೆಯ ಹೋರಾಟವಲ್ಲ ಎಂದರು.

Last Updated : Feb 3, 2021, 8:22 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.