ETV Bharat / state

ಅಕ್ರಮ ಸಂಬಂಧದ ಶಂಕೆ: ಪತ್ನಿ ಕೊಲೆ ಮಾಡಿದ ಪತಿ - ವಿಜಯನಗರದಲ್ಲಿ ಪತ್ನಿ ಕೊಲೆ

ಪತ್ನಿ ಸಂಬಂಧಿಯೊಬ್ಬನ ಜತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಪತಿ, ಆಕೆಯನ್ನು ಕೊಲೆ ಮಾಡಿರುವ ಘಟನೆ ವಿಜಯನಗರದ ಹಗರಿಬೊಮ್ಮನಹಳ್ಳಿಯಲ್ಲಿ ನಡೆದಿದೆ. ಕಳೆದ 10 ತಿಂಗಳ ಹಿಂದೆ ಇಬ್ಬರು ವಿವಾಹವಾಗಿದ್ದರು.

Husband who killed his wife
ಪತ್ನಿಯನ್ನು ಕೊಲೆಗೈದ ಪತಿ
author img

By

Published : Sep 27, 2022, 7:49 PM IST

ವಿಜಯನಗರ: ಪತಿಯೇ ಪತ್ನಿಯನ್ನು ಕೊಲೆ ಮಾಡಿರುವ ಅಮಾನವೀಯ ಘಟನೆ ಹಗರಿಬೊಮ್ಮನಹಳ್ಳಿ ತಾಲೂಕಿನ ಬ್ಯಾಸಿಗಿದೇರಿ ಗ್ರಾಮದಲ್ಲಿ ನಡೆದಿದೆ. ಎಲಿಗಾರ ದೀಪಾ (22) ಕೊಲೆಯಾದವರು. ಬ್ಯಾಸಿಗಿದೇರಿ ಗ್ರಾಮದ ನಿವಾಸಿ ಎಲಿಗಾರ ರವಿ (27) ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ.

ಕಳೆದ 10 ತಿಂಗಳ ಹಿಂದೆ ವಿವಾಹವಾಗಿದ್ದ ಈ ದಂಪತಿ ನಡುವೆ ಆಗಾಗ ಮನಸ್ತಾಪ ಉಂಟಾಗುತಿತ್ತು. ಪತ್ನಿ ತಮ್ಮ ಸಂಬಂಧಿಯೊಬ್ಬನ ಜತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಪತಿ ಪತ್ನಿ ಶೀಲ ಶಂಕಿಸಿ ಆಗಾಗ ಜಗಳ ಮಾಡುತ್ತಿದ್ದ. ಮಂಗಳವಾರ ಮಧ್ಯಾಹ್ನ ಜಗಳ ತಾರಕಕ್ಕೇರಿದ ಪರಿಣಾಮ, ಪತ್ನಿಯ ಕತ್ತು ಹಿಸುಕಿ ಪತಿಯೇ ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ.

ನಂತರ ತನ್ನ ಬೈಕ್‌ನಲ್ಲಿ ಮೃತದೇಹವನ್ನು ನಂದಿಪುರದ ಸಂಬಂಧಿಗಳ ಮನೆ ಮುಂದೆ ಇಟ್ಟು ಬಂದಿದ್ದಾನೆ. ಮೃತಳ ತಾಯಿ ನೀಡಿರುವ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ತಂಬ್ರಳ್ಳಿ ಪೊಲೀಸರು ಆರೋಪಿ ಎಲಿಗಾರ ರವಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಅನೈತಿಕ ಸಂಬಂಧ : ಪತ್ನಿ ಕೊಲೆಗೈದ ಪತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.