ಹೊಸಪೇಟೆ: ಪತ್ನಿಯನ್ನು ಕಾಲುವೆಗೆ ತಳ್ಳಿ ಕೊಲೆ ಮಾಡಿರುವ ಘಟನೆ ತಾಲೂಕಿನ ಗಾಳೆಮ್ಮಗುಡಿಯಲ್ಲಿ ನಡೆದಿದೆ.
ಕಳೆದ ಒಂಬತ್ತು ತಿಂಗಳ ಹಿಂದೆ ಗಾಳೆಮ್ಮ ಗುಡಿಯ ನಿವಾಸಿ ಲತಾ ಜೊತೆ ಹೊನ್ನೂರುಸ್ವಾಮಿ ವಿವಾಹವಾಗಿತ್ತು. ಬಳಿಕ ಪತ್ನಿಯ ಶೀಲದ ಬಗ್ಗೆ ಅನುಮಾನಪಡುತ್ತಿದ್ದ ಆರೋಪಿ ಪತಿ ಇದೀಗ ಆಕೆಯನ್ನು ಕೊಲೆ ಮಾಡಿದ್ದಾನೆ.
ಸುದ್ದಿ ತಿಳಿದ ತಕ್ಷಣವೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಬಳಿಕ ಪೊಲೀಸರು ಆರೋಪಿ ಹೊನ್ನೂರುಸ್ವಾಮಿ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಈ ಕುರಿತು ಹಂಪಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.