ಬಳ್ಳಾರಿ:ವಿಜಯನಗರ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಯಲ್ಲಿ (ವಿಮ್ಸ್) ಹೋಂ ಗಾರ್ಡ್ಸ್ಗಳ ಕಿರಿಕ್ ಶುರುವಾಗಿದ್ದು, ರೋಗಿಯ ಸಂಬಂಧಿಯೊಬ್ಬರಿಗೆ ಬಾಸುಂಡೆ ಬರೋವರರಿಗೂ ಥಳಿಸಿದ ಆರೋಪ ಕೇಳಿ ಬಂದಿದೆ.
ವಿಮ್ಸ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಇರಿಸಲಾಗಿದ್ದ ತನ್ನ ಮಗನ ಶಸ್ತ್ರಚಿಕಿತ್ಸೆಗೆ ಅಗತ್ಯವಾದ ರಕ್ತ ಕೊಡಲು ಹೋಗುತ್ತಿದ್ದ ದಮ್ಮೂರು ಗ್ರಾಮದ ಮಲ್ಲಯ್ಯ ಎಂಬಾತನಿಗೆ ಹೋಂ ಗಾರ್ಡ್ಸ್ ಪ್ರಕಾಶ ಎಂಬಾತನು ಥಳಿಸಿರುವ ಆರೋಪ ಕೇಳಿ ಬಂದಿದೆ. ತನ್ನ ಮಗನಿಗೆ ರಕ್ತ ಕೊಡಲು ಹೋಗಿದ್ದ ನನ್ನನ್ನ ತಡೆದ ಹೋಂ ಗಾರ್ಡ್ಸ್ ಪ್ರಕಾಶ ಅವರು, ಏಕಾಏಕಿ ಕೊರಳ ಪಟ್ಟಿ ಹಿಡಿದುಕೊಂಡು ಹೊರಗಡೆ ತಳ್ಳಿದಲ್ಲದೇ, ನನಗೆ ಬಾಸುಂಡೆ ಬರೋ ಹಾಗೆ ಥಳಿಸಿದ್ದಾರೆ ಎಂದು ದೂರಿದ್ದಾರೆ.
ಕೆಲಕಾಲ ಮಾತಿನ ಚಕಮಕಿ: ರೋಗಿಗಳ ಸಂಬಂಧಿಕರ ಹಾಗೂ ಹೋಂ ಗಾರ್ಡ್ಸ್ಗಳ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಹೋಂಗಾರ್ಡ್ಸ್ ಗಳ ದುಂಡಾವರ್ತನೆಯನ್ನ ರೋಗಿಗಳ ಸಂಬಂಧಿಕರು ತೀವ್ರವಾಗಿ ಖಂಡಿಸಿದ್ದಾರೆ.
ಓದಿ : 6 ಮಂಗಗಳ ಮೃತ ದೇಹ ಪತ್ತೆ.. ಜನರಲ್ಲಿ ಆತಂಕ
ಈ ಹಿಂದೆ ವಿಮ್ಸ್ ಆಸ್ಪತ್ರೆಯಲಿ ವ್ಹೀಲ್ ಚೇರ್ ಅನ್ನು ಸಕಾಲದಲ್ಲಿ ಒದಗಿಸದ ಕಾರಣ ತಂದೆಯೇ ಮಗಳನ್ನ ಹೆಗಲ ಮೇಲೆ ಹೊತ್ತೊಯ್ದ ಘಟನೆಯೊಂದು ವಿಶೇಷ ಗಮನ ಸೆಳೆದು ರಾಜ್ಯ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿತ್ತು. ಆದರೀಗ, ಹೋಂ ಗಾರ್ಡ್ಸ್ಗಳ ದುಂಡಾವರ್ತನೆ ಕೂಡ ಮಿತಿ ಮೀರಿದ ಆರೋಪವು ಕೂಡ ವ್ಯಾಪಕವಾಗಿ ಕೇಳಿ ಬರುತ್ತಿದೆ.