ಬಳ್ಳಾರಿ: ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಬೈಕ್ ಸವಾರರಿಗೆ ಗುಲಾಬಿ ಹೂವನ್ನು ನೀಡಿ ಜಿಲ್ಲಾ ಪೊಲೀಸ್ ಅಧಿಕಾರಿಗಳು ಜಾಗೃತಿ ಮೂಡಿಸಿದರು.
ನಗರದ ರಾಯಲ್ ವೃತ್ತದಿಂದ ಆರಂಭವಾಗಿ, ಬೆಂಗಳೂರು ರಸ್ತೆ, ಬ್ರೂಸ್ ಪೇಟೆ ವೃತ್ತ, ಜೈನ್ ಮಾರ್ಕೆಟ್, ಮೋತಿ ಮಾರ್ಗವಾಗಿ ರಾಯಲ್ ವೃತ್ತದವರೆಗೂ ಸಾರ್ವಜನಿಕರಿಗೆ ಹೆಲ್ಮೆಟ್ ಜಾಗೃತಿ ಮೂಡಿಸಿದ ಜಿಲ್ಲಾ ಪೊಲೀಸರು, ಬೈಕ್ ಸಂಚಾರ ಮಾಡುವ ವಾಹನ ಸವಾರರು ಹೆಲ್ಮೆಟ್ ಧರಿಸದೇ ನಿಯಮ ಉಲ್ಲಂಘಿಸಿದರೆ 500 ರೂ. ವರೆಗೆ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದರು.
ಈ ಸಮಯದಲ್ಲಿ ನಗರ ಡಿವೈಎಸ್ಪಿ ಹೆಚ್. ಬಿ ರಮೇಶ್ ಕುಮಾರ್, ಸಂಚಾರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಂ. ನಾಗರಾಜ್, ಬ್ರೂಸ್ ಪೇಟೆ ಠಾಣೆಯ ಇನ್ಸ್ಪೆಕ್ಟರ್ ನಾಗರಾಜ್, ಕೌಲ್ ಬಜಾರ್ ಠಾಣೆಯ ಇನ್ಸ್ಪೆಕ್ಟರ್ ಸುಭಾಷ್ ಚಂದ್ರ, ಎಪಿಎಂಸಿ ಠಾಣೆಯ ಇನ್ಸ್ಪೆಕ್ಟರ್ ಪರಶುರಾಮ್, ಮಹಿಳಾ ಠಾಣೆಯ ಇನ್ಸ್ಪೆಕ್ಟರ್ ವಸಂತ ಕುಮಾರ್ ಭಾಗವಹಿಸಿದ್ದರು.
ಪಿ.ಎಸ್.ಐ ಗಳಾದ ಲಕ್ಷ್ಮೀಪತಿ, ಬೇಬಿ ಮರಿಯಾ, ವೆಂಕಟೇಶ್, ನಗರದ ಠಾಣೆಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.