ಬಳ್ಳಾರಿ: ತಂದೆಯೇ ಕೈ-ಕಾಲು ಕಟ್ಟಿ ಕಾಲುವೆಗೆ ಎಸೆದು ಕೊಂದ ಬಳ್ಳಾರಿ ನಗರದ ಬಂಡಿಹಟ್ಟಿ ಪ್ರದೇಶದ ಯುವತಿ ಪಲ್ಲವಿ (19) ನಿಧನಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅತೀವ ದುಃಖ ವ್ಯಕ್ತಪಡಿಸಿದ್ದಾರೆ.
![health minister sriramulu Condolences for typist pallavi death](https://etvbharatimages.akamaized.net/etvbharat/prod-images/6148211_pallavi.jpg)
ಮೃತ ಪಲ್ಲವಿ ಸಚಿವ ಶ್ರೀರಾಮುಲು ಅವರ ಬಳ್ಳಾರಿ ನಗರದ ಅವಂಬಾವಿ ಪ್ರದೇಶದಲ್ಲಿರೊ ಗೃಹ ಕಚೇರಿಯಲ್ಲಿ ಟೈಪಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಹಿನ್ನೆಲೆ ಸಚಿವ ಶ್ರೀರಾಮುಲು ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಆಕೆಯ ಸಾವಿಗೆ ಸಂತಾಪ ಸೂಚಿಸಿದ್ದು, ವೈಯಕ್ತಿಕವಾಗಿ ನನಗೆ ಮಗಳಂತಿದ್ದ ಹಾಗೂ ಕಚೇರಿಯಲ್ಲಿ ನನ್ನ ಎಲ್ಲ ಸಿಬ್ಬಂದಿ ವರ್ಗದವರಿಗೆ ಸಹೋದರಿಯಾಗಿದ್ದ ಕುಮಾರಿ ಪಲ್ಲವಿಯ ನಿಧನ ಅತ್ಯಂತ ದುಃಖದ ಸಂಗತಿಯಾಗಿದೆ.
ಸಂತೋಷದಿಂದ ನೂರ್ಕಾಲ ಬಾಳು ಎಂದು ಹರಸಬೇಕಾದ ಹೆತ್ತ ಅಪ್ಪನೇ ಅವಳ ಬಾಳನ್ನು ಕೊನೆಗೊಳಿಸಿದ್ದು ಅತ್ಯಂತ ಹೇಯ. ಅವಳ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.