ETV Bharat / state

'ಅವರಿಗೆ 19 ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಆಗ್ತಿಲ್ಲ': ಹೆಚ್​ಡಿಕೆಗೆ ಸಚಿವ ಬಿ.ನಾಗೇಂದ್ರ ಟಾಂಗ್​ - ​ ETV Bharat Karnataka

ಕೃತಕ ಅಭಾವ ಸೃಷ್ಟಿಸಿ ವಿದ್ಯುತ್ ಖರೀದಿ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್​ ವಿರುದ್ಧ ಹೆಚ್​.ಡಿ ಕುಮಾರಸ್ವಾಮಿ ಇತ್ತೀಚೆಗೆ ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡಿದ್ದರು.

ಸಚಿವ ಬಿ. ನಾಗೇಂದ್ರ
ಸಚಿವ ಬಿ. ನಾಗೇಂದ್ರ
author img

By ETV Bharat Karnataka Team

Published : Oct 25, 2023, 3:46 PM IST

ಸಚಿವ ಬಿ. ನಾಗೇಂದ್ರ ಹೇಳಿಕೆ

ಬಳ್ಳಾರಿ: ಅವರಿಗೆ ಜೆಡಿಎಸ್​ ಪಕ್ಷದಲ್ಲಿರುವ 19 ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಆಗುತ್ತಿಲ್ಲ. ಅವರಲ್ಲಿಯೇ ಸಾಕಷ್ಟು ಒಡಕುಗಳಿವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್​.ಡಿ.ಕುಮಾರಸ್ವಾಮಿ ವಿರುದ್ದ ಕ್ರೀಡಾ ಸಚಿವ ಬಿ.ನಾಗೇಂದ್ರ ವಾಗ್ದಾಳಿ ನಡೆಸಿದ್ದಾರೆ. ಕೃತಕ ಅಭಾವ ಸೃಷ್ಟಿಸುವ ಮೂಲಕ ಕರೆಂಟ್ ಖರೀದಿ ಮಾಡುತ್ತಿದ್ದಾರೆ ಎಂಬ ಹೆಚ್​ಡಿಕೆ ಹೇಳಿಕೆ ವಿಚಾರವಾಗಿ ಅವರು ಪ್ರತಿಕ್ರಿಯಿಸಿದರು.

ಕೃತಕ ಅಭಾವ ಸೃಷ್ಟಿ ಹೇಗೆ ಮಾಡ್ತಾರೆ?, ಕರೆಂಟ್ ಹಿಡಿದಿಟ್ಟುಕೊಳ್ಳವಷ್ಟು ಸಣ್ಣ ವಸ್ತುವೇ? ಜಲ, ಸೋಲಾರ್, ವಿಂಡ್ ಪವರ್ ಯಾವುದೇ ವಿದ್ಯುತ್ ಹಿಡಿದಿಟ್ಟುಕೊಳ್ಳಲು ಆಗುವುದಿಲ್ಲ. ಅದನ್ನು ಕೊಡಲೇಬೇಕು. ಅದನ್ನು ಒಂದು ಬಾಕ್ಸ್​ನಲ್ಲಿ ಇಟ್ಟುಕೊಂಡು ಅಭಾವ ಸೃಷ್ಟಿ ಮಾಡುವುದಕ್ಕೆ ಆಗದು. ಇದನ್ನು ಮಾಜಿ ಸಿಎಂ ಗಮನದಲ್ಲಿಟ್ಟುಕೊಂಡು ಮಾತನಾಡಬೇಕು ಎಂದರು.

ಎರಡು ಬಾರಿ ಮುಖ್ಯಮಂತ್ರಿ ಆಗಿರುವ ಹೆಚ್​.ಡಿ.ಕುಮಾರಸ್ವಾಮಿ ಅವರಿಗೆ ಸಾಕಷ್ಟು ರಾಜಕೀಯ ಅನುಭವಗಳಿವೆ. ವಿನಾಕಾರಣ ಸ್ಪೀಡಾಗಿ ನಡೆಯುತ್ತಿರುವ ನಮ್ಮ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಸ್ವಂತ ಪಕ್ಷ ಮತ್ತು ಇರುವ 19 ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಆಗುತ್ತಿಲ್ಲ. ಹಲವು ಸಮಸ್ಯೆಗಳು ಅವರಿಲ್ಲಿವೆ. ಹತಾಶರಾಗಿ ಈ ರೀತಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ನಾಗೇಂದ್ರ ಟೀಕಿಸಿದರು.

ನಮ್ಮದು ರೈತಪರ ಕಾಳಜಿ ಇರುವ ಸರ್ಕಾರ ಎಂಬುದನ್ನು ಸಾಬೀತು ಮಾಡಿದ್ದೇವೆ. 7 ತಾಸು ವಿದ್ಯುತ್​ ಕೊಡಬೇಕು ಎಂದು ಉತ್ತರ ಕರ್ನಾಟಕ ಭಾಗದ ರೈತರು ಬೇಡಿಕೆ ಇಟ್ಟಿದ್ದಾರೆ. ಭತ್ತ ಮತ್ತು ಕಬ್ಬು ಬೆಳೆಯುವ ಈ ಭಾಗಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್​ ಮತ್ತು ಇಂಧನ ಸಚಿವರು 5 ತಾಸಿನಿಂದ 7 ತಾಸು ವಿದ್ಯುತ್​ ಪೂರೈಕೆ ಮಾಡಲು ಆದೇಶ ಮಾಡಿದ್ದಾರೆ. ಇವತ್ತು ಸಭೆ ಮಾಡಿದ್ದು, ರೈತರಿಗೆ ಆತಂಕ ಬೇಡ. 7 ತಾಸು ವಿದ್ಯುತ್​ ಕೊಡುವಂತೆ ಮಾಡಿದ್ದೇವೆ. ಮೇಘಾಲಯ, ಹಿಮಾಚಲ ಪ್ರದೇಶದಿಂದ ವಿದ್ಯುತ್ ಖರೀದಿ ಮಾಡಿ ಜನರಿಗೆ ವಿದ್ಯುತ್ ಕೊಡುತ್ತೇವೆ. ಸಿದ್ದರಾಮಯ್ಯನವರು ವಿದ್ಯುತ್ ಖರೀದಿಗೆ ಮುಂದಾಗಿದ್ದಾರೆ ಎಂದು ತಿಳಿಸಿದರು.

ಕೃತಕ ಅಭಾವ ಸೃಷ್ಟಿ ಮಾಡಿ ವಿದ್ಯುತ್ ಖರೀದಿ- ಹೆಚ್‌ಡಿಕೆ: ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಹೆಚ್.​ಡಿ.ಕುಮಾರಸ್ವಾಮಿ, ಗ್ಯಾರಂಟಿಗಳ ಕಡೆ ಗಮನ ಕೊಟ್ಟ ಕಾಂಗ್ರೆಸ್​ನವರು ವಿದ್ಯುತ್​ ಉತ್ಪಾದನೆ ಮರೆತಿದ್ದಾರೆ. ಕಾಂಗ್ರೆಸ್ ಮುಖಂಡರಾದ ಕೆ.ಸಿ.ವೇಣುಗೋಪಾಲ ಮತ್ತು ಸುರ್ಜೇವಾಲಾಗೆ ಕಮಿಷನ್ ಕಳುಹಿಸುವುದಕ್ಕಾಗಿ ಕೃತಕ ಅಭಾವ ಸೃಷ್ಟಿಸಿ ವಿದ್ಯುತ್ ಖರೀದಿ ಹೆಸರಿನಲ್ಲಿ ಕಮಿಷನ್ ಕಬಳಿಸಲು ಮುಂದಾಗಿದೆ ಎಂದು ಆರೋಪಿಸಿದ್ದರು.

ಇದನ್ನೂ ಓದಿ: ಏಳು ಜನ್ಮ ಎತ್ತಿ ಬಂದರೂ ರಾಮನಗರ ಜಿಲ್ಲೆ ಛಿದ್ರ ಮಾಡಲು ಸಾಧ್ಯವಿಲ್ಲ, ಅದೇನು ಕಲ್ಲುಬಂಡೆಯೇ?: ಡಿಕೆಶಿಗೆ ಹೆಚ್​ಡಿಕೆ ತಿರುಗೇಟು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.