ETV Bharat / state

ಮುಂಗಾರು ಮಳೆಯ ನೀರಿನಲ್ಲಿ ರಾರಾಜಿಸಿದ ಹಂಪಿ ಗೋಪುರದ ಪ್ರತಿಬಿಂಬ.. - ಮುಂಗಾರು ಮಳೆ

ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಶುರುವಾಗಿದೆ. ಹಂಪಿಯ ಶ್ರೀ ವಿರೂಪಾಕ್ಷ ದೇವಾಲಯದ ಪ್ರತಿಬಿಂಬದ ಛಾಯೆಯು ಮಳೆಯ ನೀರಿನಲ್ಲಿ ರಾರಾಜಿಸುತ್ತಿದೆ.

hampi
author img

By

Published : Apr 8, 2020, 12:57 PM IST

ಹೊಸಪೇಟೆ : ವಿಶ್ವದ ಐತಿಹಾಸಿಕ ಪ್ರವಾಸಿ ತಾಣ ಹಂಪಿ ಈಗ ಕೊವಿಡ್-19 ಹಿನ್ನೆಲೆಯಲ್ಲಿ ಪ್ರವಾಸಿಗರು, ಜನರಿಲ್ಲದೇ ಬಣಗುಡುತ್ತಿದೆ. ಮುಂಗಾರು ಮಳೆಯಿಂದ ಹಂಪಿಯ ವಿರೂಪಾಕ್ಷ ದೇವಾಲಯದ ಗೋಪುರದ ಪ್ರತಿಬಿಂಬ ಮಳೆ ನೀರಿನಲ್ಲಿ‌ ಸುಂದರವಾಗಿ ಕಾಣುತ್ತಿದೆ. ಸಾರ್ವಜನಿಕರು‌ ಗೋಪುರದ ಪ್ರತಿಬಿಂಬದ ನೋಡಿ ಸಂತೋಷ ಪಡುತ್ತಿದ್ದಾರೆ. ಹಂಪಿ ವೀಕ್ಷಿಸಲು ದೇಶ-ವಿದೇಶದಿಂದ ಪ್ರವಾಸಿಗರು ಬರುತ್ತಿದ್ದರು.

ಆದರೆ, ಕೊವಿಡ್-19 ಹಿನ್ನೆಲೆಯಿಂದಾಗಿ ವಿಶ್ವ ಪರಂಪರೆಯ ಹಂಪಿಯಲ್ಲಿ ಯಾರೊಬ್ಬರು ಕಾಣಿಸ್ತಿಲ್ಲ. ವಿರೂಪಾಕ್ಷ ದೇವಾಲಯದ ಪ್ರತಿಬಿಂಬ ಮಳೆಯ ನೀರಿನಲ್ಲಿ ರಾರಾಜಿಸುತ್ತಿದೆ. ಜನ ಜಂಗುಳಿಯಿಂದ ಗಿಜಿ‌ಗಿಜಿ ಎನ್ನುವಂತಹ ಸ್ಥಳ ಪ್ರವಾಸಿಗರಿಲ್ಲದೆ ಬಡವಾಗಿದೆ. ಮಳೆಯ ನೀರಿನಲ್ಲಿರುವ ಪ್ರತಿಬಿಂಬದ ಫೋಟೋವನ್ನು ನೋಡಿ ಸಂತೋಷ ಪಡುವಂತಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.