ಹೊಸಪೇಟೆ: ಐತಿಹಾಸಿಕ ಹಂಪಿ ಚಕ್ರತೀರ್ಥ ಕೋದಂಡರಾಮ ದೇವಸ್ಥಾನ ಹುಂಡಿ ಎಣಿಕೆ ಕಾರ್ಯ ಇಂದು ನಡೆದಿದ್ದು, 48 ಸಾವಿರ ರೂ. ಸಂಗ್ರಹವಾಗಿದೆ.
ಹುಂಡಿಯನ್ನು 2019 ಡಿಸೆಂಬರ್ 13 ರಂದು ಅಳವಡಿಸಲಾಗಿತ್ತು. ತುಂಗಭದ್ರಾ ನದಿಯಲ್ಲಿ ಹೆಚ್ಚಿನ ಪ್ರಮಾಣದ ನೀರನ್ನು ಹರಿಸಲಾಗುತ್ತಿದ್ದು, ಹಾಗಾಗಿ ಹುಂಡಿಯನ್ನು ಎಣಿಕೆ ಮಾಡಲಾಗಿದೆ ಎಂದು ವಿರುಪಾಕ್ಷೇಶ್ವರ ದೇವಸ್ಥಾನದ ಇಒ ಎಂ.ಎಚ್.ಪ್ರಕಾಶರಾವ್ ತಿಳಿಸಿದ್ದಾರೆ.
ಕುಸಿದ ಆದಾಯ:
ಏಪ್ರಿಲ್ ನಿಂದ ಲಾಕ್ ಡೌನ್ ಘೋಷಣೆ ಮಾಡಿದ್ದರಿಂದ ದೇವಸ್ಥಾನಕ್ಕೆ ಭಕ್ತರು ಬಂದಿಲ್ಲ. ಹಾಗಾಗಿ ಈ ಬಾರಿ ಕೇವಲ 48 ಸಾವಿರ ರೂ. ಮಾತ್ರ ಸಂಗ್ರಹವಾಗಿದೆ. ಕೊರೊನಾದಿಂದ ಸಾಕಷ್ಟು ನಷ್ಟವಾಗಿದೆ ಎನ್ನಲಾಗುತ್ತಿದೆ.
ಎಣಿಕೆ ಕಾರ್ಯದಲ್ಲಿ ವಿದ್ಯಾರಣ್ಯ ಭಾರತಿ ಸ್ವಾಮೀಜಿ, ಕೆನರಾ ಬ್ಯಾಂಕ್ ವಿಜಯ ನಾರಾಯಣ ಸೇರಿದಂತೆ ಇನ್ನಿತರಿದ್ದರು.