ETV Bharat / state

ಹಂಪಿ ಕನ್ನಡ ವಿವಿ 30ನೇ ನುಡಿಹಬ್ಬ: ಮೂವರಿಗೆ ನಾಡೋಜ ಗೌರವ - Nadoja honorary degree conferred to 3 people

ಹಂಪಿ ಕನ್ನಡ ವಿಶ್ವವಿದ್ಯಾಲಯದ 30ನೇ ನುಡಿಹಬ್ಬದಲ್ಲಿ ಚನ್ನಬಸಪ್ಪ, ಡಾ. ಭಾಷ್ಯಂ ಸ್ವಾಮಿ, ಪ್ರೊ. ಟಿ.ವಿ. ವೆಂಕಟಾಚಲ ಶಾಸ್ತ್ರಿ ಅವರಿಗೆ ನಾಡೋಜ ಗೌರವ ಪದವಿ ಪ್ರದಾನ ಮಾಡಲಾಯಿತು.

Hampi Kannada University's 30th Nudihabba
ಹಂಪಿ ಕನ್ನಡ ವಿಶ್ವವಿದ್ಯಾಲಯದ 30ನೇ ನುಡಿಹಬ್ಬ
author img

By

Published : Apr 12, 2022, 9:32 PM IST

ವಿಜಯನಗರ: ಹಂಪಿ ಕನ್ನಡ ವಿಶ್ವವಿದ್ಯಾಲಯದ 30ನೇ ನುಡಿಹಬ್ಬದಲ್ಲಿ ಮೂವರು ಗಣ್ಯರಿಗೆ ನಾಡೋಜ ಗೌರವ ಪದವಿ ಹಾಗು ನಾಲ್ವರಿಗೆ ಡಿ.ಲಿಟ್ ಪದವಿ ನೀಡಲಾಯಿತು. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿ ಈ ಕಾರ್ಯಕ್ರಮ ನಡೆದಿದೆ.

ಚನ್ನಬಸಪ್ಪ, ಡಾ.ಭಾಷ್ಯಂ ಸ್ವಾಮಿ ಹಾಗು ಪ್ರೊ.ಟಿ.ವಿ.ವೆಂಕಟಾಚಲ ಶಾಸ್ತ್ರಿ ಅವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನಾಡೋಜ ಗೌರವ ಪ್ರದಾನ ಮಾಡಿದರು. ಚಿತ್ರದುರ್ಗದ ಮುರುಘಾ ಶರಣರು, ಪರಿಸರ ಬಗ್ಗೆ ಕಾಳಜಿಯುಳ್ಳ ಪುಟ್ಟಸ್ವಾಮಿ ಬಿ.ಎಸ್.ಕಲ್ಕುಳಿ ವಿಠ್ಠಲ ಹೆಗಡೆ, ಪತ್ರಿಕಾ ರಂಗದಲ್ಲಿ ಪದ್ಮರಾಜ್ ದಂಡಾವತಿ ಅವರಿಗೆ ಡಿ.ಲಿಟ್ ಪದವಿ ಪ್ರದಾನ ಮಾಡಲಾಯಿತು. ನಾನಾ ವಿಷಯಗಳ ಮೇಲೆ ಸಂಶೋಧನೆ ಮಾಡಿದ 100 ವಿದ್ಯಾರ್ಥಿಗಳಿಗೆ ಪಿಎಚ್​​ಡಿ ಪದವಿ ಪ್ರದಾನ ಮಾಡಲಾಯಿತು.

ಇದನ್ನೂ ಓದಿ: ಯುಪಿ ಸಿಎಂ ಯೋಗಿ ಹಲವು ಹೆಸರುಗಳನ್ನ ಬದಲಾಯಿಸಿ ರಾಮರಾಜ್ಯ ಮಾಡಿದ್ದಾರೆ.. ಋಷಿಕುಮಾರ ಸ್ವಾಮೀಜಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.