ETV Bharat / state

ಬಳ್ಳಾರಿಯಲ್ಲಿ ಆಲಿಕಲ್ಲು ಮಳೆ : ಸಾವಿರಕ್ಕೂ ಹೆಚ್ಚು ಕೋಳಿಗಳು ಸಾವು

ಬಳ್ಳಾರಿಯಲ್ಲಿ ಸುರಿದ ಭಾರಿ ಮಳೆಯ ಕಾರಣದಿಂದ ಕೋಳಿ ಫಾರಂಗೆ ನೀರು ನುಗ್ಗಿ ಸುಮಾರು ಸಾವಿರಕ್ಕೂ ಹೆಚ್ಚು ಕೋಳಿಗಳು ಸಾವನ್ನಪ್ಪಿದ್ದು, ಒಟ್ಟಾರೆ 50 ಲಕ್ಷಕ್ಕೂ ಹೆಚ್ಚು ರೂಪಾಯಿಯಷ್ಟು ಹಾನಿಯಾಗಿರುವುದಾಗಿ ಮಾಲೀಕರು ಅಳಲು ತೋಡಿಕೊಂಡಿದ್ದಾರೆ..

hailstone-rain-in-bellary-more-than-thousand-chickens-died
ಬಳ್ಳಾರಿಯಲ್ಲಿ ಆಲಿಕಲ್ಲು ಮಳೆ: ಸಾವಿರಕ್ಕೂ ಹೆಚ್ಚು ಕೋಳಿಗಳು ಸಾವು
author img

By

Published : Apr 22, 2022, 7:12 AM IST

ಬಳ್ಳಾರಿ : ಗುರುವಾರ ಸಂಜೆಯಿಂದ ಸುರಿದ ಭಾರಿ ಗಾಳಿ ಮತ್ತು ಆಲಿಕಲ್ಲು ಮಳೆಯಿಂದ ಕೋಳಿ ಫಾರಂಗೆ ನೀರು ನುಗ್ಗಿದ ಪರಿಣಾಮ ಸಾವಿರಾರು ಕೋಳಿಗಳು ಸಾವನ್ನಪ್ಪಿರುವ ಘಟನೆ ಕುರುಗೋಡು ತಾಲೂಕಿನ ಏಳುಬೆಂಚಿ‌ ಗ್ರಾಮದಲ್ಲಿ ನಡೆದಿದೆ. ದೇವರಮನಿ ಹೊನ್ನೂರು ಸ್ವಾಮಿ, ಭೋಗಪ್ಪ ಮತ್ತು ಜಡಪ್ಪ ಅವರಿಗೆ ಸೇರಿದ ಐದು ಕೋಳಿ ಫಾರಂನ ಪ್ರತ್ಯೇಕ ಶೆಡ್​​ಗಳಲ್ಲಿ ಹತ್ತು ಸಾವಿರಕ್ಕೂ ‌ಹೆಚ್ಚು‌ ಕೋಳಿಗಳು ಸಾಕಲಾಗಿತ್ತು.

ಸಂಜೆಯಿಂದ ಸುರಿದ ಆಲಿಕಲ್ಲು ಮಳೆಯಿಂದ ಶೆಡ್ಡಿನಲ್ಲಿದ್ದ ಸಾವಿರಾರು ಕೋಳಿಗಳು ಸಾವನ್ನಪ್ಪಿವೆ. ಅಲ್ಲದೇ, ಶೆಡ್ಡಿಗಳು ಸಂಪೂರ್ಣ ಹಾನಿಯಾಗಿದ್ದು, ಒಟ್ಟಾರೆ ಐವತ್ತು ಲಕ್ಷಕ್ಕೂ ಹೆಚ್ಚು ನಷ್ಟವಾಗಿರೋ ಬಗ್ಗೆ ಮಾಲೀಕರ‌ ಅಳಲು ತೋಡಿಕೊಂಡಿದ್ದಾರೆ. ಇದರಿಂದ ಕೋಳಿ ಸಾಕಾಣಿಕೆಯನ್ನೇ ನಂಬಿಕೊಂಡಿದ್ದವರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸಾವಿರಕ್ಕೂ ಹೆಚ್ಚು ಕೋಳಿಗಳು ಸಾವು

ಇದನ್ನೂ ಓದಿ: ರಾಜ್ಯದಲ್ಲಿ ಕೊರೊನಾ ಅಬ್ಬರ ಮತ್ತೆ ಶುರುವಾಯ್ತಾ?: ಗುರುವಾರ 100 ಜನರಲ್ಲಿ ಸೋಂಕು ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.