ETV Bharat / state

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅತಿಥಿ ಉಪನ್ಯಾಸಕರಿಂದ ಪ್ರತಿಭಟನೆ.. - ಹೊಸಪೇಟೆ ನಗರ ಅಥಿತಿ ಉಪನ್ಯಾಸಕರು

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಹ್ರಹಿಸಿ ಹೊಸಪೇಟೆ ನಗರದಲ್ಲಿ ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸಿದ್ದಾರೆ.

ಅತಿಥಿ ಉಪನ್ಯಾಸಕರಿಂದ ಪ್ರತಿಭಟನೆ
author img

By

Published : Oct 14, 2019, 4:59 PM IST

ಹೊಸಪೇಟೆ/ಬಳ್ಳಾರಿ: ಕನಿಷ್ಟ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಹ್ರಹಿಸಿ ಹೊಸಪೇಟೆ ನಗರದಲ್ಲಿ ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸಿ, ತಹಶೀಲ್ದಾರ್​ಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ನಗರದ ತಾಲೂಕ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಿದ ಅತಿಥಿ ಉಪನ್ಯಾಸಕರು, ಸರ್ಕಾರದ ವಿರುದ್ಧ ಷೋಷಣೆ ಕೂಗಿದರು. ಸರ್ಕಾರಿ ಪದವಿ ಕಾಲೇಜುಗಳಲ್ಲಿ ಎರಡು ದಶಕಗಳಿಂದ ಅಲ್ಪ ವೇತನದಲ್ಲಿಯೇ ತಮ್ಮ ಉಪನ್ಯಾಸದ ಜೀವನ ನಡೆಸುತ್ತಿದ್ದಾರೆ. ಪ್ರತಿ ತಿಂಗಳು ವೇತನ ಸರಿಯಾಗಿ ನೀಡುತ್ತಿಲ್ಲ. ಎರಡು ದಶಕಗಳಿಂದ ನಮ್ಮ ಬೇಡಿಕೆಗಳನ್ನು ಈಡೇರಿಸಿ ಎಂದು ಎಲ್ಲಾ ಸರ್ಕಾರಗಳಿಗೂ ಮನವಿ ಪತ್ರವನ್ನು ನೀಡುತ್ತಾ ಬಂದಿದ್ದೇವೆ. ಆದರೆ, ಯಾರೂ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅತಿಥಿ ಉಪನ್ಯಾಸಕರಿಂದ ಪ್ರತಿಭಟನೆ..

ಉಪನ್ಯಾಸಕರ ಕುಟುಂಬಗಳು ಜೀವನ ನಡೆಸದೆ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಇಂದು ರಾಜ್ಯದ ಎಲ್ಲಾ ಸರ್ಕಾರಿ ಪದವಿ ಕಾಲೇಜಗಳು ಚೆನ್ನಾಗಿ ನಡೆಯುತ್ತಿವೆ ಎಂದರೆ ಅದು ಅತಿಥಿ ಉಪನ್ಯಾಸಕರಿಂದ ಎನ್ನುವುದು ಸರ್ಕಾರಕ್ಕೆ ನೆನಪಿಸುತ್ತಿದ್ದೇವೆ ಎಂದರು. ಸರ್ಕಾರವು ನಮ್ಮ ವೇತನ ಹಾಗೂ ಬೇಡಿಕೆಗಳ ವಿಷಯದ ಬಗ್ಗೆ ನಿರ್ಲಕ್ಷ್ಯ ತೋರಿದರೆ ರಾಜ್ಯದ ಎಲ್ಲಾ ಕಾಲೇಜಗಳನ್ನು ಮುಚ್ಚಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಉಪನ್ಯಾಸಕರ ಬೇಡಿಕೆಗಳು:

  • ರಾಜ್ಯದ ಎಲ್ಲಾ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಬೇಕು.
  • ಪ್ರಸಕ್ತ ಸಾಲಿನ ಮೊದಲನೆ ತಿಂಗಳಿನಿಂದ 5 ಸಾವಿರ ರೂ. ವೇತನ ಹೆಚ್ಚಿಸಬೇಕು.
  • ಪ್ರತಿ ತಿಂಗಳು‌ ಸರಿಯಾದ ಸಮಯಕ್ಕೆ ವೇತನ ಪಾವತಿಯಾಗುವಂತೆ ಕ್ರಮ ಜರುಗಿಸಬೇಕು.
  • ಯುಜಿಸಿ ನಿಯಮಾನುಸಾರ ಅತಿಥಿ ಉಪನ್ಯಾಸಕರಿಗೆ ವೇತನ ಮಂಜೂರು ಮಾಡಬೇಕು.
  • ಪದವಿ ಕಾಲೇಜುಗಳಿಲ್ಲಿ ನಡೆಯುವ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಅತಿಥಿ ಉಪನ್ಯಾಸಕರಿಗೆ ಮೊದಲ ಆದ್ಯತೆ ನೀಡಬೇಕು.

Intro: ಅಥಿತಿ ಉಪನ್ಯಾಸಕರ ಬೇಡಿಕೆಯನ್ನು ಪೂರೈಸಿ ಬದ್ರತೆಯನ್ನು ಒದಗಿಸಿ: ಹೊಸಪೇಟೆ ಪ್ರಾಧ್ಯಾಪಕರ ಧರಣಿ
ಹೊಸಪೇಟೆ : ವಿದ್ಯೆ, ಬುದ್ದಿಯನ್ನು ಹೇಳುವ ಉಪನ್ಯಾಸಕರು ಶಾಲಾ, ಕಾಲೇಜುಗಳಲ್ಲಿ ಪಾಠವನ್ನು ಮಾಡಬೇಕು. ನಮ್ಮನ್ನು ಆಳುವ ಸರ್ಕಾರಗಳು ರಸ್ತೆಗೆ ಇಳಿದು ಹೋರಾಟ ಮಾಡುವಂತಹ ಸಂದರ್ಭಗಳನ್ನು ಸೃಷ್ಟಿ ಮಾಡಿವೆ.ಮಕ್ಕಳಿಗೆ ನಮ್ಮ ವಿದ್ಯಯನ್ನು ಕಲಿಸುತ್ತೇವೆ. ಅಂತಹ ಶಿಕ್ಷಕ ಮತ್ತು ಉಪನ್ಯಾಸಕರಿಗೆ ಕನಿಷ್ಟ ವೇತನ ಸಿಗುತ್ತಿಲ್ಲ. ಸರಕಾರವು ಎಲ್ಲರ ಬೇಡಿಕೆಯನ್ನು ಪೂರೈಸುತ್ತದೆ. ಆದರೆ ಉಪನ್ಯಾಸಕರನ್ನು ಆಟಕ್ಕುಂಟು ಲೆಕ್ಕಿಲ್ಲ ಎನ್ನುವಂತೆ ಮಾಡುತ್ತಿದ್ದಾರೆ,ಎಂದು ಆರ್.ಬಿ. ರಮೇಶ ತಾಲ್ಲೂಕ ಅತಿಥಿ ಉಪನ್ಯಾಸಕರ ಅಧ್ಯಕ್ಷ ಮಾತನಾಡಿದರು.

Body: ನಗರದ ತಾಲೂಕ ಕಾರ್ಯಲಯದಮುಂದೆ ಸರ್ಕಾರದ ವಿರುದ್ಧವಾಗಿ ಷೋಷಣೆಗಳನ್ನು ಕೂಗಿದರು. ಸರಕಾರಿ ಪದವಿ ಕಾಲೇಜುಗಳಲ್ಲಿ ಎರೆಡು ದಶಕಗಳಿಂದ ಅಲ್ಪವೇತನದಲ್ಲಿಯೇ ತಮ್ಮ ಉಪನ್ಯಾಸದ ಜೀವನವನ್ನು ನಡೆಸುತ್ತಿದ್ದಾರೆ. ಪ್ರತಿ ತಿಂಗಳುವು ವೇತನ ಸರಿಯಾಗಿ ಹಾಕುವುದಿಲ್ಲ. ಎರಡು ದಶಕಗಳಿಂದ ನಮ್ಮ ಬೇಡಿಕೆಗಳನ್ನು ಇಡೇರಿಸಿ ಎಂದು ಎಲ್ಲಾ ಸರ್ಕಾರಗಳಿಗೂ ಮನವಿ ಪತ್ರವನ್ನು ನೀಡುತ್ತಾ ಬಂದಿದ್ದೇವೆ. ಆದರ ನಮ್ಮ ಬಗ್ಗ ಮತ್ತು ನಮ್ಮ ಕುಟುಂಬದ ಬಗ್ಗೆ ಯಾರು ಸರಿಯಾಗಿ ಸ್ಪಂದನೆ ನೀಡುತ್ತಿಲ್ಲ. ಇವಾಗ ನೀಡುವ ವೇತನದಲ್ಲಿ ಕೆಲಸವನ್ನು ಮಾಡಲು ಆಗುತ್ತಿಲ್ಲ. ರಾಜ್ಯದ ಎಲ್ಲಾ ಕಾಲೇಜಿನಲ್ಲಿ ಉಪನ್ಯಾಸ ಮಾಡುವವರನ್ನು ಸರಕಾರಿ ಉಪನ್ಯಾಸಕರಾಗಿ ನೇಮಕ ಮಾಡಿಕೊಳ್ಳಿ.ನಮಗೆ ಬದ್ರತೆಯನ್ನು ನೀಡಬೇಕು ಎಂದು ತಿಳಿಸಿದರು.
ಉಪನ್ಯಾಸಕರ ಕುಟುಂಬಗಳು ಜೀವನವನ್ನು ನಡೆಸದೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಸಮಯ ಬಂದಿದೆ. ಇವತ್ತು ರಾಜ್ಯದ ಎಲ್ಲಾ ಸರಕಾರಿ ಪದವಿ ಕಾಲೇಜಗಳು ಚನ್ನಾಗಿ ನಡೆಯುತ್ತಿದೆ ಎಂದರೆ ಅದು ಅತಿಥಿ ಉಪನ್ಯಾಸಕರಿಂದ ಎನ್ನುವುದು ಸರಕಾರಕ್ಕೆ ನೆನಪಿಸುತ್ತಿದ್ದೇವೆ ಎಂದರು. ಸರಕಾರವು ನಮ್ಮ ವೇತನ ಹಾಗೂ ಬೇಡಿಕೆಗಳ ವಿಷಯದ ಬಗ್ಗೆ ನಿರ್ಲಕ್ಷ್ಯ ತೋರಿದರೆ, ರಾಜ್ಯದ ಎಲ್ಲಾ ಕಾಲೇಜಗಳನ್ನು ಮುಚ್ಚಿ ಉಗ್ರವಾದ ಹೋರಾಟವನ್ನು ಮಾಡಲಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
ಉಪನ್ಯಾಸಕರ ಬೇಡಿಕೆಗಳು
ರಾಜ್ಯದ ಎಲ್ಲಾಅತಿಥಿ ಉಪನ್ಯಾಸಕರಿಗೆ ಸೇವಾ ಬದ್ರತೆಯನ್ನು ಒದಗಿಸಬೇಕು. ಪ್ರಸಕ್ತ ಸಾಲಿನ ಮೊದಲನೆ ತಿಂಗಳಿನಿಂದ 5 ಸಾವಿರ ರೂ.ಗಳನ್ನು ಹೆಚ್ಚಿಸಬೇಕು.ಪ್ರತಿ ತಿಂಗಳು‌ ಸರಿಯಾದ ಸಮಯಕ್ಕೆ ವೇತನ ಪಾವತಿಯಾಗುವಂತೆ ಕ್ರಮವನ್ನು ಜರುಗಿಸಬೇಕು. ಯು.ಜಿ.ಸಿ. ನಿಯಮನುಸಾರ ಅತಿಥಿ ಉಪನ್ಯಾಸಕರಿಗೆ ವೇತನ ಮಂಜೂರು ಮಾಡಬೇಕು. ಪದವಿ ಕಾಲೇಜುಗಳಿಲ್ಲಿ ನಡೆಯುವ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಅತಿಥಿ ಉಪನ್ಯಾಸಕರಿಗೆ ಮೊದಲ ಆಧ್ಯತೆಯನ್ನು‌ ನೀಡಬೇಕು. ಹಾಗೂ ನಮ್ಮೆಲ್ಲ ವಿವಿಧ ಬೇಡಿಕೆಗಳನ್ನು ಇಡೇರಸಬೇಕೆಂದು ತಹಶಿಲ್ದಾರ ಡಿ.ಜಿ ಹೆಗಡೆ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.

Conclusion:KN_HPT_5_GUEST FACULTY STRIKE IN FRONT OF TAHASHIL OFFICE VISUAL_KA10028
bite: ಮಲ್ಲಿಕಾರ್ಜುನ ಅಕ್ಕಿ ತಾಲೂಕ ಅತಿಥಿ ಉಪನ್ಯಾಸಕರ ಕಾರ್ಯದರ್ಶಿ:
ಅತಿಥಿ ಉಪನ್ಯಾಸಕರಿಗೆ ಸರಿಯಾಗಿ ವೇತನವನ್ನು ನೀಡಬೇಕು. ಕಳೆದ ಎರಡು ದಶಕಗಳಿಂದ ನಾವು ನಮ್ಮ ಬೇಡಿಕೆಗಳನ್ನು ಪೂರೈಸಲು ಮನವಿಯನ್ನು ಮಾಡುತ್ತಾ ಬಂದಿದ್ದೇವ ಸರಕಾರವು ಯಾವೂದೇ ರೀತಿಯಾಗಿ ಸ್ಪಂದಿಸಿತ್ತಿಲ್ಲ. ಹಿಗೆ ಮುಂದುವರೆದರೆ ಉಗ್ರವಾದ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಮಾತನಾಡಿದರು.
2) ನಾಗವೇಣಿ ಕನ್ನಡ ಉಪನ್ಯಾಸಕಿ
ಪದವಿ ಕಾಲೇಜುಗಳಲ್ಲಿ ಉಪನ್ಯಾಸ‌ಮಾಡುವಂತಹ ಎಲ್ಲಾ ಉಪನ್ಯಾಸಕರು ಸ್ಪರ್ಧಾತ್ಮಕ ಪರೀಕ್ಷೆಗಳಾದ ಸ್ಲೇಟ್,ನೆಟ್ ಹಾಗೂ ಪಿ.ಎಚ್. ಡಿಯನ್ನು ಮಾಡಿಕೊಂಡ ಬಂದಿದ್ದಾರೆ. ಆದರ ಇವತ್ತು ಇವರು ಅಭ್ಯಾಸ ‌ಮಾಡಿದ್ದಕ್ಕೆ ಬೆಲೆ ಇಲ್ಲದಂತಾಗಿದೆ. ಅವರ ವಿದ್ಯಾರ್ಹತೆಗೆ ತಕ್ಕ ವೇತನ ಸಿಗದಂತಾಗಿದೆ ಎಂದು ಹೇಳಿದರು.
3) ಶಾಲಿನಿ ವಿದ್ಯಾರ್ಥಿನಿ ಆನಂದ ಸಿಂಗ್ ಪ್ರಥಮ ದರ್ಜೆಯ ಕಾಲೇಜ್
ಸರಕಾರವು ಎಲ್ಲಾ ಉಪನ್ಯಾಸಕರಿಗೆ ಸರಿಯಾಗಿ ವೇತನ ಹಾಗೂ ಅವರ ಬೇಡಿಕೆಗಳನ್ನು ಬೇಗನೆ ಇಡೇರಿಸಲಿ. ಯಾಕೆಂದರೆ ಇವತ್ತು ತರಗತಿಗಳು ನಡೆಯುತ್ತಿರುವು ಅತಿಥಿ ಉಪನ್ಯಾಸಕರಿಂದ. ಅವರು ತರಗತಿಗೆ ಬರಲಿಲ್ಲ ಎಂದರೆ ವಿದ್ಯಾರ್ಥಿಗಳು ಜೀವನದ ಮೇಲೆ ತುಂಬ ಸಮಯವ ಹಾಳಾಗುತ್ತಿದೆ. ಗಂಡ ಹೆಂಡತಿ ನಡುವೆ ಕೂಸು‌ ಬಡವಾಗಿದೆ ಎನ್ನುವ ಸ್ಥಿತಿ ತಲುಪಿದ್ದೇವೆ. ಇವರ ಬೇಡಿಕೆ ಒಂದು‌ ಪೂರೈಸಿಲ್ಲ ಎಂದು ಹೋರಾಟವನ್ನು ಮಾಡಿದರೆ ತರಗತಗಳು ಖಾಲಿ ಖಾಲಿ ಇರುತ್ತವೆ.ಅದಕ್ಕಾಗಿ ನಮ್ಮ ಜೀವನವನ್ನು ಹಾಳು ಮಾಡದೆ ಪರಿಹಾರವನ್ನು ನೀಡಿ ಎಂದು ಮಾತನಾಡಿದಳು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.