ಬಳ್ಳಾರಿ : ಮತದಾನ ಮಾಡಲು ಮತಗಟ್ಟೆಗೆ ಬಂದ ಮತದಾರರು ಗೊಂದಲಕ್ಕೀಡಾದ ಘಟನೆ ಗಣಿಜಿಲ್ಲೆಯ ಹರಪನಹಳ್ಳಿ ತಾಲೂಕಿನ ಮತ್ತಿಹಳ್ಳಿ ಪಂಚಾಯತ್‌ನ 1 ಮತ್ತು 2ನೇ ವಾರ್ಡ್ನಲ್ಲಿ ನಡೆದಿದೆ.
ಮತ್ತಿಹಳ್ಳಿ ಪಂಚಾಯತ್‌ನ 1 ಮತ್ತು 2ನೇ ವಾರ್ಡ್ನಲ್ಲಿ ಅಭ್ಯರ್ಥಿಗಳ ಚಿಹ್ನೆ ಅದಲು-ಬದಲು ಆಗಿದ್ದು, ಒಂದನೇ ವಾರ್ಡ್ನ ಅಭ್ಯರ್ಥಿಯ ಗುರುತು 2ನೇ ವಾರ್ಡ್ಗೆ, 2ನೇ ವಾರ್ಡ್ನ ಅಭ್ಯರ್ಥಿ ಗುರುತು 1ನೇ ವಾರ್ಡ್ಗೆ ಶಿಫ್ಟ್ ಆಗಿದೆ.
ಇನ್ನು ಚಿಹ್ನೆ ಅದಲು -ಬದಲಾದ ಹಿನ್ನೆಲೆ ಎರಡು ವಾರ್ಡ್ಗಳಲ್ಲಿ ಮತದಾನ ಮಾಡದಿರಲು ಮತದಾರರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.