ಬಳ್ಳಾರಿ: ಜಿಲ್ಲೆಯ ಕಂಪ್ಲಿ ಸಮೀಪದ ರಾಜು ಕ್ಯಾಂಪಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಗುರು ತಿಮ್ಮಣ್ಣರನ್ನು ಅಮಾನತು ಮಾಡಲಾಗಿದೆ. ಬಿಸಿ ಊಟದ ಹಣ ದುರುಪಯೋಗ ಆರೋಪದಡಿ ಕ್ರಮ ಕೈಗೊಳ್ಳಲಾಗಿದೆ. ಡಿಡಿಪಿಐ ಅಂದಾನಪ್ಪ ಎಂ ವಡಗೇರಿ ಆದೇಶ ಹೊರಡಿಸಿದ್ದಾರೆ.
ಶಾಲೆಯಲ್ಲಿ ಬಿಸಿಯೂಟ ನಿರ್ವಹಣೆಯ ಹಣಕಾಸಿನ ದುರುಪಯೋಗ ಮತ್ತು ಕರ್ತವ್ಯ ಲೋಪ ಎಸಗಿರುವ ಹಿನ್ನೆಲೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸಾರ್ವಜನಿಕ ಶಿಕ್ಷಣ ಇಲಾಖೆ ಪಶ್ಚಿಮ ವಲಯ ಕುರುಗೋಡು ಶಿಫಾರಸು ವರದಿಯ ಆಧಾರದ ಮೇರೆಗೆ ಅಮಾನತುಗೊಳಿಸಲಾಗಿದೆ. ತಿಮ್ಮಣ್ಣ ಅವರು ಶಾಲಾ ಬಿಸಿಯೂಟದ ಖಾತೆಯಲ್ಲಿ ರೂ. 15 ಸಾವಿರ ಡ್ರಾ ಮಾಡಿಕೊಂಡು ದುರುಪಯೋಗ ಪಡಿಸಿಕೊಂಡಿದ್ದಾರೆ ಎನ್ನಲಾಗ್ತಿದೆ.
ಇದನ್ನೂ ಓದಿ: ರೈತನ ಹಲ್ಲೆ.. ಅಮಾನತುಗೊಂಡ ಪಿಎಸ್‍ಐ ಮಣಿಕಂಠ ವಿರುದ್ಧ ಪ್ರಕರಣ ದಾಖಲು
ಇದರೊಂದಿಗೆ 12,300 ರೂವನ್ನು ಸೆಲ್ಫ್ ಡ್ರಾ ಮಾಡಿಕೊಂಡು ಓಚರ್‌ಗಳು, ಖರ್ಚು ವೆಚ್ಚದ ರಸೀದಿಗಳನ್ನು ನಿರ್ವಹಿಸದೇ ಕರ್ತವ್ಯ ಲೋಪ ಎಸಗಿದ್ದಾರೆ ಎಂಬ ಆರೋಪವೂ ಇದೆ. ಅಷ್ಟೇ ಅಲ್ಲದೇ ಇದನ್ನು ವಿಚಾರಿಸಲು ಹೋಗಿದ್ದ ಅಧಿಕಾರಿಗಳಿಗೆ ಏಕವಚನದಲ್ಲಿ ಮಾತನಾಡಿದ್ದಾರೆ. ಇದಕ್ಕಾಗಿ ಇಂತಹ ಗುರು ನಮಗೆ ಬೇಡ ಎಂದು ಮಕ್ಕಳು ಶಾಲೆಗೆ ಬೀಗ ಹಾಕಿ ಪ್ರತಿಭಟನೆ ಮಾಡಿದ್ದರು.