ETV Bharat / state

ಜಿಂದಾಲ್​ಗೆ ಭೂಮಿ​​ ವಿಚಾರ ನೆಪವೊಡ್ಡಿ ಆನಂದ್​ ಸಿಂಗ್​​​ ರಾಜೀನಾಮೆ: ಬಸವರಾಜ ರಾಯರೆಡ್ಡಿ

ಜಿಂದಾಲ್​ಗೆ ಭೂಮಿ ಪರಾಭಾರೆ ಮಾಡುವುದಕ್ಕೂ ಶಾಸಕರ ರಾಜೀನಾಮೆಗೂ ಯಾವುದೇ ಸಂಬಂಧವಿಲ್ಲ. ಅದು ಒಂದು ನೆಪ ಮಾತ್ರ. 10 ವರ್ಷಗಳ ಹಿಂದೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಸತ್ಯ ಶೋಧನಾ ಸಮಿತಿ ಸದಸ್ಯ ಬಸವರಾಜ ರಾಯರೆಡ್ಡಿ ಹೇಳಿದರು.

ಬಿಜೆಪಿ ಆಪರೇಷನ್​ ಕಮಲಕ್ಕೆ ಮುಂದಾಗಿದೆ ಎಂದು ಬುಧವಾರ ಕಾಂಗ್ರೆಸ್​ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು,
author img

By

Published : Jul 9, 2019, 10:19 PM IST

ಬಳ್ಳಾರಿ: ಜಿಂದಾಲ್ ಸಮೂಹ ಸಂಸ್ಥೆಗೆ ಅಂದಾಜು‌ 3667 ಎಕರೆ ಭೂಮಿ ಪರಾಭಾರೆ ಮಾಡಲು ಹೊರಟಿರುವುದು ಸರಿ ಇದೆ. ಶಾಸಕ ಆನಂದ್​​ ಸಿಂಗ್ ವಿರೋಧ ಮಾಡುತ್ತಿರುವ ಕ್ರಮ ತಪ್ಪು ಎಂದು ಕೆಪಿಸಿಸಿ ಸತ್ಯ ಶೋಧನಾ ಸಮಿತಿ ಸದಸ್ಯ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

ಬಿಜೆಪಿ ವಿರುದ್ಧ ಕಾಂಗ್ರೆಸ್​ ಕಾರ್ಯಕರ್ತರಿಂದ ಪ್ರತಿಭಟನೆ

ರೋಟರಿ ವೃತ್ತದಲ್ಲಿ ಬುಧವಾರ ಬಿಜೆಪಿಯು ಆಪರೇಷನ್​ ಕಮಲಕ್ಕೆ ಕೈ ಹಾಕಿದೆ ಎಂದು ಆರೋಪಿಸಿ ಬಿಜೆಪಿ ವಿರುದ್ಧ ಘೋಷಣೆ ಕೂಗಿ, ಪ್ರತಿಭಟನೆ ನಡೆಸಲಾಯಿತು. ನಂತರ ಕೆಪಿಸಿಸಿ ಸತ್ಯ ಶೋಧನಾ ಸಮಿತಿ ಸದಸ್ಯರ ಸಭೆಯ ಬಳಿಕ‌ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ರಾಯರೆಡ್ಡಿ, ಶಾಸಕ ಆನಂದ್​​ ಸಿಂಗ್ ಅವರು ಜಿಂದಾಲ್​ಗೆ ಭೂಮಿ‌ ಪರಾಭಾರೆ ವಿಚಾರದ ನೆಪವೊಡ್ಡಿ ರಾಜೀನಾಮೆ ಸಲ್ಲಿಸಿದ್ದಾರೆ. 10 ವರ್ಷಗಳ ಹಿಂದೆ ಭೂಮಿ ಧಾರಣೆ ಪ್ರಕಾರ ಭೂಮಿಯನ್ನು ಪರಾಭಾರೆ ಮಾಡಲು ಸಚಿವ ಸಂಪುಟ ಸಭೆ ನಿರ್ಧರಿಸಿತ್ತು ಎಂದರು.

ಸ್ಥಳೀಯರಿಗೆ ಉದ್ಯೋಗ ಅವಕಾಶ ಕಲ್ಪಿಸಿ ಕೊಡದಿದ್ದರೆ ಸರ್ಕಾರ ಪರಿಶೀಲನೆ ಕೈಗೊಳ್ಳುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ ಎಂದು ತಮ್ಮ ವಾದವನ್ನು ಸಮರ್ಥಿಸಿಕೊಂಡರು. ಸತ್ಯಶೋಧನೆ ಸಮಿತಿಯು ವಿವಿಧ ಜಿಲ್ಲೆಗಳಲ್ಲಿ ಸಂಚರಿಸಿ ಲೋಕಸಭೆಯ ಸೋಲು, ಸಂಘಟಿತ ಹೋರಾಟಕ್ಕೆ ಮುನ್ನಡೆಯಲಿದೆ ಎಂದು ಹೇಳಿದರು.

Intro:ಜಿಂದಾಲ್ ಸಮೂಹ ಸಂಸ್ಥೆಗೆ ಭೂಮಿ ಪರಭಾರೆ‌ ವಿರೋಧ ಸರಿಯಲ್ಲ: ಬಸವರಾಜ ರಾಯರೆಡ್ಡಿ
ಬಳ್ಳಾರಿ: ಜಿಂದಾಲ್ ಸಮೂಹ ಸಂಸ್ಥೆಗೆ ಅಂದಾಜು‌ 3667 ಎಕರೆ ಭೂಮಿ ಪರಭಾರೆ ಮಾಡಿರೋದನ್ನ ಕಾಂಗ್ರೆಸ್ ನ‌ ವಿಜಯನಗರ ಕ್ಷೇತ್ರದ ಶಾಸಕ ಆನಂದಸಿಂಗ್ ವಿರೋಧ ಮಾಡುತ್ತಿರುವ ಕ್ರಮವು ತರವಲ್ಲ ಎಂದು ಕೆಪಿಸಿಸಿ ಸತ್ಯಶೋಧನಾ ಸಮಿತಿ ಸದಸ್ಯ ಬಸವ ರಾಜ ರಾಯರೆಡ್ಡಿ ಹೇಳಿದ್ದಾರೆ.
ಜಿಲ್ಲೆಯ ಹೊಸಪೇಟೆ ನಗರದ ಮುಖಂಡ ಎಚ್.ಎನ್.ಎಫ್. ನಿಯಾಜಿ ಪ್ಲಾಜಾದಲ್ಲಿಂದು ನಡೆದ ಕೆಪಿಸಿಸಿ ಸತ್ಯಶೋಧನಾ
ಸಮಿತಿ ಸದಸ್ಯರ ಸಭೆಯ ಬಳಿಕ‌ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಶಾಸಕ ಆನಂದಸಿಂಗ್ ಅವರು ಜಿಂದಾಲ್ ಗೆ ಭೂಮಿ‌ ಪರಭಾರೆ ಮಾಡಿರೋ ವಿಚಾರವನ್ನು ನೆಪವೊಡ್ಡಿ ರಾಜೀನಾಮೆ ಸಲ್ಲಿಸಿದ್ದಾರೆ. ಹತ್ತುವರ್ಷಗಳ ಹಿಂದಷ್ಟೇ ಭೂಮಿಧಾರಣೆ ಪ್ರಕಾರ ಭೂಮಿಯನ್ನು ಪರಭಾರೆ ಮಾಡಲು ಸಚಿವ ಸಂಪುಟದ ಸಭೆಯು ನಿರ್ಧರಿಸಿದೆ. ಶಾಸಕ ಆನಂದಸಿಂಗ್ ರಾಜೀನಾಮೆಗೆ ಅದು ಕಾರಣ ಅಲ್ಲ ಎಂದರು.
ಕಾನೂನಿನ ಪ್ರಕಾರ ಜಿಂದಾಲ್ ಸಮೂಹ ಸಂಸ್ಥೆಗೆ ಭೂಮಿಯನ್ನು ಪರಭಾರೆ ಮಾಡಲೇಬೇಕಿತ್ತು. ಆಗಾಗಿ, ಆ ಭೂಮಿಯನ್ನು ಪರ ಭಾರೆ ಮಾಡಲಾಗಿದೆ. ಸ್ಥಳೀಯರಿಗೆ ಉದ್ಯೋಗ ಅವಕಾಶ ಕಲ್ಪಿಸಿ ಕೊಡದಿದ್ದರೆ ಆ ಕುರಿತು ಪರಿಶೀಲನೆ ಮಾಡುವ ಅವಕಾಶ ರಾಜ್ಯ ಸರ್ಕಾರಕ್ಕಿದೆ ಎಂದರು.
ಭೂಮಿ ಪರಭಾರೆ ನೆಪವೊಡ್ಡಿ ರಾಜೀನಾಮೆ ನೀಡೋದಾದ್ರೆ, ರಾಜ್ಯಕ್ಕೆ ಕೈಗಾರಿಕೆಗಳೇ ಬಾರದಂತೆ ನೋಡಿಕೊಳ್ಳಿ. ನಮ್ಮದು
ಕೃಷಿ ಚಟುವಟಿಕೆಯಾಧರಿತ ರಾಜ್ಯವೆಂದು ಘೋಷಣೆಗೆ ಪಟ್ಟು ಹಿಡಿಯಲಿ ಎಂದು ಶಾಸಕ ಆನಂದ ಸಿಂಗ್ ಗೆ ರಾಯರೆಡ್ಡಿ ಕುಟುಕಿ ದ್ದಾರೆ.
ಎರಡು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋತಿದೆ. ಅದರ ಕಾರಣ ತಿಳಿದುಕೊಳ್ಳಲು
ಸತ್ಯ ಶೋಧನಾ ಸಮತಿಯನ್ನು ರಚಿಸಲಾಗಿದೆ. ಆ ನಿಟ್ಟಿನಲ್ಲಿ‌ ಕಾರ್ಯಕರ್ತರ ಅಭಿಪ್ರಾಯವನ್ನು ಸಂಗ್ರಹಿಸಲಾಗುತ್ತಿದೆ ಎಂದರು.
ರಾಜ್ಯದ ಬೀದರ, ಕಲ್ಬುರ್ಗಿ, ರಾಯಚೂರು, ಯಾದಗಿರಿ, ದಾವಣಗೆರೆ, ಚಿತ್ರದುರ್ಗ, ಬಾಗಲಕೋಟೆ, ಧಾರವಾಡ ಜಿಲ್ಲೆಗಳಲ್ಲಿ ಸಮಿತಿ ಓಡಾಡಲಿದೆ. ಜುಲೈ 24ರವರಗೆ 14 ಲೋಕಸಭಾ ಕ್ಷೇತ್ರ ಹಾಗೂ ಆಗಸ್ಟ್ 14ರವರಗೆ 14 ಲೋಕಸಭಾ ಕ್ಷೇತ್ರಗಳಲ್ಲಿ ಕಾರ್ಯಕರ್ತರ ಅಭಿಪ್ರಾಯವನ್ನು ಸಂಗ್ರಹಿಸಲಾಗುತ್ತದೆ. ಬಳಿಕ ಸೆಪ್ಟೆಂಬರ್ ತಿಂಗಳಿನಲ್ಲಿ ಆಯಾ ಜಿಲ್ಲೆಗಳ ಕಾರ್ಯಕರ್ತರ ಅಭಿಪ್ರಾಯಗಳನ್ನು ಕೆಪಿಸಿಸಿಗೆ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.
ರಾಮಲಿಂಗಾರೆಡ್ಡಿ ರಾಜೀನಾಮೆ ನೀಡಬಾರದಿತ್ತು: ಈ ಸರ್ಕಾರ ದಲ್ಲಿ ಎಲ್ಲರೂ ಮಂತ್ರಿಯಾಗಲು ಸಾಧ್ಯವಿಲ್ಲ. ಏಳು ಬಾರಿ ಗೆಲುವು ಸಾಧಿಸಿದ್ದೇನೆ. ನಾನು ಮಂತ್ರಿಯಾಗಲು ಸಾಧ್ಯವಾಗಿಲ್ಲ. ಹಿರಿಯ ಶಾಸಕ ರಾಮಲಿಂಗಾರೆಡ್ಡಿ ಅವರು ರಾಜೀನಾಮೆ‌ ನೀಡಬಾರದಿತ್ತು. ಸಣ್ಣ, ಪುಟ್ಟ ಭಿನ್ನಾಭಿಪ್ರಾಯಗಳು ಇರುತ್ತವೆ. ಅವುಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಿಜೆಪಿ ವಾಮಾಮಾರ್ಗ ಬಳಸಿಕೊಳ್ಳುತ್ತಿದೆ. ಕಾಂಗ್ರೆಸ್ ಶಾಸಕರನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳುತ್ತಿದೆ. ವೈಯಕ್ತಿಕವಾಗಿ ತೆಗೆದುಕೊಂಡರೆ ಯಾವ ಕಾರ್ಖಾನೆಗಳು ಬರುವುದಿಲ್ಲ. ರಾಜಕೀಯ ಚಟಕ್ಕಾಗಿ ಮಾತನಾಡಬಾರದು. 2018ರಲ್ಲಿ ರಾಜ್ಯದಲ್ಲಿ 47 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹಣೆವಾಗಿದೆ. ಅದೇ ಕೇರಳದಲ್ಲಿ 90 ಸಾವಿರ ಕೋಟಿ ರೂ.ತೆರಿಗೆ ಸಂಗ್ರಹವಾಗಿದ್ದು, ಅದು ಕಾರ್ಖಾನೆ ನೀಡುವ ತೆರಿಗೆಗಳಿಂದ. ಕಾರ್ಖಾನೆ ಇಲ್ಲದಿದ್ದರೇ ತೆರಿಗೆ ಸಂಗ್ರಹಣೆ ಪ್ರಮಾಣ ಕುಸಿಯಲಿದೆ. ಬಿಜೆಪಿಗೆ ತಾಕತ್ತು ಇದ್ದರೇ ಅಧಿಕಾರ ಬಂದ ಕೂಡಲೇ ಜಿಂದಾಲ್ ಸಂಸ್ಥೆಯನ್ನು ಸ್ಥಳಾಂತರ ಮಾಡಲಿ ಎಂದು ಸವಾಲೆಸೆದಿ ದ್ದಾರೆ.
ಸಮಿತಿ ಸದಸ್ಯ ಸುದರ್ಶನ ಮಾತನಾಡಿ, ಶಾಸಕರು ರಾಜೀನಾಮೆ ನೀಡಿರುವುದು ಜನರಿಗೆ ಆಕ್ರೋಶವಿದೆ. ರಾಜೀನಾಮೆಯನ್ನು ವಾಪಸ್‌ ತೆಗೆದುಕೊಳ್ಳಬೇಕು ಎಂದು ಅವರ ಅಪೇಕ್ಷೆಯಾಗಿದೆ. ಬಿಜೆಪಿ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಬೇಕು. ಆದರೆ, ಹತಾಶ ರಾಗಿ ಇತರನಾಗಿ ಮಾಡುತ್ತಿದೆ. ಕರ್ನಾಟಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Body:ರೋಟರಿ ವೃತ್ತದಲ್ಲಿ ಪ್ರತಿಭಟನೆ: ಬಿಜೆಪಿ ಅಪರೇಷನ್ ಕಮಲ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಹೊಸಪೇಟೆ ನಗರದ ರೋಟರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಸತ್ಯ ಶೋಧನಾ ಸಮಿತಿ ಸದಸ್ಯ ಧ್ರುವ ನಾರಾಯಣ, ಜಿಲ್ಲಾ ಕಾಂಗ್ರೆಸ್ ಗ್ರಾಮಾಂತರ ಸಮಿತಿ ಅಧ್ಯಕ್ಷ ಬಿ.ವಿ.ಶಿವಯೋಗಿ,
ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಜಿ.ಎಸ್.ಮಹಮ್ಮದ ರಫೀಕ, ಮುಖಂಡರಾದ ಅಮಾಜಿ ಹೇಮಣ್ಣ, ಟಿ.ರಫೀಕ, ಅಸುಂಡಿ ನಾಗರಾಜಗೌಡ, ಎಚ್.ಎನ್.ಎಫ್. ಇಮಾಮಾ ನಿಯಾಜಿ, ಗುಜ್ಜಲ್ ನಾಗರಾಜ, ನಿಂಬಗಲ್ ರಾಮಕೃಷ್ಣ ಇದ್ದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_04_HOSAPETE_CONGRESS_PRESS_MEET_7203310

KN_BLY_04_HOSAPETE_CONGRESS_PROTEST_7203310

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.