ETV Bharat / state

ಗಣಿನಾಡಿನ ಆದಿದೇವತೆಗೆ ಚಿನ್ನಾಭರಣದ ಅಲಂಕಾರ..! - kannada news

ನಾಡಿನಲ್ಲಿ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದ್ದು, ವಿಕಾರ ಸಂವತ್ಸರದ ಮೊದಲ ದಿನದಂದು ಬಳ್ಳಾರಿಯ ಕನಕದುರ್ಗಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ.

ಕನಕದುರ್ಗಮ್ಮ ದೇವಾಲಯದಲ್ಲಿ ಯುಗಾದಿ ಸಂಭ್ರಮ
author img

By

Published : Apr 6, 2019, 3:18 PM IST

ಬಳ್ಳಾರಿ: ಗಣಿನಾಡಿನ ಶಕ್ತಿ ಆದಿದೇವತೆ ಕನಕದುರ್ಗಮ್ಮ ದೇವಾಲಯದಲ್ಲಿ ಇಂದು ಬೆಳಗ್ಗೆಯಿಂದಲೆ ವಿಶೇಷವಾದ ಪೂಜೆ ಸಲ್ಲಿಸಲಾಗುತ್ತಿದ್ದು, ಅಪಾರ ಸಂಖ್ಯೆಯಲ್ಲಿ ಭಕ್ತರು ದೇವಿಯ ದರ್ಶನಕ್ಕೆ ಧಾವಿಸುತ್ತಿದ್ದಾರೆ.

ನಗರದ ಕನಕದುರ್ಗಮ್ಮ ದೇವಾಲಯದಲ್ಲಿ ಯುಗಾದಿ ಹಬ್ಬದ ನಿಮ್ಮಿತ್ತ ದುರ್ಗಾ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು, ಇಂದು ಬೆಳಗ್ಗೆಯಿಂದಲೇ 60 ಬಗೆಯ ಚಿನ್ನಾಭರಣದಿಂದ ಅಲಂಕಾರ ಮಾಡಲಾಗುತ್ತಿದ್ದು, ಸುಮಾರು 6 ರಿಂದ 7 ಕೆ.ಜಿಯಷ್ಟು ತೂಕವಿರುವ ಚಿನ್ನವನ್ನ ಘಳಿಗೆ ಒಂದರಂತೆ ದೇವಿಗೆ ಹಾಕಿ ಅಲಂಕಾರ ಮಾಡಲಾಗಿದೆ.

ವಿಕಾರ ಸಂವತ್ಸರ ಯುಗಾದಿಯ ವರ್ಷದ ಮೊದಲ ದಿನದಂದು ಪುರಾಣ ಪ್ರಸಿದ್ಧ ದೇವಾಲಯಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿದ್ದು, ದೇವಿಯ ದರ್ಶನ ಪಡೆಯುತ್ತಿದ್ದಾರೆ.

ಕನಕದುರ್ಗಮ್ಮ ದೇವಾಲಯದಲ್ಲಿ ಯುಗಾದಿ ಸಂಭ್ರಮ

ಹಬ್ಬದ ಸಂದರ್ಭ ದೇವಿಗೆ ವಿಶೇಷವಾಗಿ ಚಿನ್ನಾಭರಣ ಅಲಂಕಾರ ಮಾಡುವ ಸಲುವಾಗಿ ಎಪ್ಪತ್ತು ವಿವಿಧ ಚಿನ್ನಾಭರಣಗಳಿವೆ. ಆಯಾ ಸಂದರ್ಭಾನುಸಾರ ಚಿನ್ನಾಭರಣವನ್ನ ಅಲಂಕಾರ ಮಾಡಲಾಗಿದೆ. ಪ್ರತಿ ಸಾರಿ ಅಲಂಕಾರ ಮಾಡಿದಾಗ್ಲೂ ಕೂಡ ವಿಶೇಷತೆ ಇರುತ್ತದೆ.

ದೇವಿಮೂರ್ತಿಗೆ ವಿಶೇಷ ಅಲಂಕಾರ ಮಾಡಿ, ಸಾವಿರಾರು ಭಕ್ತರ ದರ್ಶನಕ್ಕೆ ಅನುಕೂಲ ಮಾಡಿಕೊಡಲಾಗಿದೆ. ವಿಕಾರಿ ನಾಮ ಸಂವತ್ಸರಕ್ಕೆ ಪಾದಾರ್ಪಣೆ ಮಾಡುವ ನಿಟ್ಟಿನಲ್ಲಿ ಈ ದಿನ ಸಂಜೆ ಪಂಚಾಂಗ ಶ್ರವಣ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕನಕದುರ್ಗಮ್ಮ ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ ಈ ಟಿವಿ ಭಾರತ್ ಗೆ ತಿಳಿಸಿದ್ದಾರೆ

Intro:ಗಣಿನಾಡಿನಲ್ಲಿ ಸಂಭ್ರಮದ ಯುಗಾದಿ ಹಬ್ಬ ಆಚರಣೆ
ಅದಿದೇವತೆ ಕನಕದುರ್ಗಮ್ಮ ದೇಗುಲದಲ್ಲಿ ಚಿನ್ನಾಭರಣ ಅಲಂಕಾರ..!
ಬಳ್ಳಾರಿ: ಗಣಿನಾಡಿನಲ್ಲಿ ಯುಗಾದಿ ಹಬ್ಬವನ್ನ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.
ಬೆಳಿಗ್ಗೆಯಿಂದಲೇ ಬೇವಿನ ಮರದಲ್ಲಿ ಬೆಳೆದ ಬಹೂವನ್ನ ಕಿತ್ತುಕೊಂಡು ಮನೆಗೆ ತೆರಳಿ, ಹರಳೆಣ್ಣೆ ಹಾಗೂ ಬೇವಿನ ಹೂವನ್ನ ತಲೆಗೆ ಸುರಿವಿಕೊಂಡು ಸ್ನಾನ ಮಾಡಿದರು.
ಯುಗಾದಿ ಹಬ್ಬದ ನಿಮಿತ್ತ ಗೃಹಿಣಿಯರು ನಿನ್ನೆಯ ದಿನ ತಡರಾತ್ರಿವರೆಗೂ ಪ್ರತಿಯೊಬ್ಬರ ಮನೆಯಂಗಳದಲ್ಲಿ ಸಗಣಿಯಿಂದ ಸಾರಿಸಿ, ವರ್ಣರಂಜಿತ ರಂಗೋಲಿಯ
ಚಿತ್ತಾರ ಬಿಡಿಸಿದರು.
ಮಾವಿನ ಎಲೆ ಖರೀದಿಗೆ ಮುಗಿಬಿದ್ದ ಜನ: ಯುಗಾದಿ ಹಬ್ಬದ ನಿಮಿತ್ತ ಮಾವಿನ ಎಲೆಯನ್ನ ಮನೆಯ ಬಾಗಿಲಿಗೆ ಕಟ್ಟುವ ಮುಖೇನ ವಿಶೇಷ ಅಲಂಕಾರ ಮಾಡಲಾಗುತ್ತೆ. ಆ ಮಾವಿನ ತೊಳೆ ಖರೀದಿ ಭರಾಟೆಯೂ ನಗರದೆಲ್ಲೆಡೆ ಜೋರಾಗಿತ್ತು. ಬೆಂಗಳೂರು ರಸ್ತೆಯಲ್ಲಂತೂ ಮಾವಿನ ತೊಳೆ ಖರೀದಿಗೆ ಸಾರ್ವಜನಿಕರು ಮುಗಿಬಿದ್ದರು. ತಾಮುಂದು...ನಾಮುಂದು ಎನ್ನುವಂತೆ ಮಾವಿನ ತೊಳೆ ಖರೀದಿಗೆ ಮುಗಿಬಿದ್ದಾಗ, ಕೆಲಕಾಲ ನೂಕುನುಗ್ಗಲು ಏರ್ಪಟ್ಟಿತ್ತು. ಗ್ರಾಮದಿಂದ ಮಾವಿನ ತೊಳೆ ಮಾರಾಟಕ್ಕೆಂದು ತಂದಿದ್ದ ವ್ಯಾಪಾರಿಯನ್ನೇ ಇಲ್ಲಿ ದೂರಕ್ಕೆ ತಳ್ಳಿ ಮಾವಿನ ತೊಳೆ ಖರೀದಿ ಜೋರಾಗಿ ನಡೆಯಿತು.

Body:ಅದಿದೇವತೆ ಕನಕದುರ್ಗಮ್ಮ ಮೂರ್ತಿಗೆ ಅರವತ್ತು ವಿವಿಧ ಚಿನ್ನಾಭರಣ ಅಲಂಕಾರ: ಯುಗಾದಿ ಹಬ್ಬದ ನಿಮಿತ್ತ ನಗರದ ಅದಿದೇವತೆ ಕನಕದುರ್ಗಮ್ಮ ಮೂರ್ತಿಗೆ ಅರವತ್ತು ವಿವಿಧ ಚಿನ್ನಾಭರಣದ ವಿಶೇಷ ಅಲಂಕಾರ ಮಾಡಲಾಗಿತ್ತು.
ಬೆಳಿಗ್ಗೆಯಿಂದಲೇ ಕನಕದುರ್ಗಮ್ಮ ಮೂರ್ತಿಗೆ ಅಂದಾಜು ಆರೇಳು ಕೆಜಿಯಷ್ಟು ಚಿನ್ನವನ್ನ ಈ ದಿನ ಅಲಂಕಾರ ಮಾಡ ಲಾಗಿದ್ದು, ಸಾವಿರಾರು ಭಕ್ತರು ದೇವಿಯ ದರುಶನ ಪಡೆದರು.
ಹಬ್ಬದ ಸಂದರ್ಭ ವಿಶೇಷವಾಗಿ ಚಿನ್ನಾಭರಣ ಅಲಂಕಾರ ಮಾಡುವ ಸಲುವಾಗಿ ಎಪ್ಪತ್ತು ವಿವಿಧ ಚಿನ್ನಾಭರಣಗಳಿವೆ. ಆಯಾ ಸಂದರ್ಭಾನುಸಾರ ಚಿನ್ನಾಭರಣವನ್ನ ಅಲಂಕಾರ ಮಾಡಲಾಗಿದೆ. ಪ್ರತಿಸಾರಿ ಅಲಂಕಾರ ಮಾಡಿದಾಗ್ಲೂ ಕೂಡ ವಿಶೇಷತೆ ಇರುತ್ತದೆ ಎಂದು ಕನಕದುರ್ಗಮ್ಮ ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ ಈ ಟಿವಿ
ಭಾರತ್ ಗೆ ತಿಳಿಸಿದ್ದಾರೆ.
ಯುಗಾದಿಯನ್ನ ಧಾರ್ಮಿಕ ಹಬ್ಬವೆಂದು ಭಾವಿಸಲಾಗಿದ್ದು, ದೇವಿಮೂರ್ತಿಗೆ ವಿಶೇಷ ಅಲಂಕಾರ ಮಾಡಿ, ಸಾವಿರಾರು ಭಕ್ತರ ದರುಶನಕ್ಕೆ ಅನುಕೂಲ ಮಾಡಿಕೊಡಲಾಗಿದೆ. ವಿಕಾರಿ ನಾಮ ಸಂವತ್ಸರಕ್ಕೆ ಪಾದಾರ್ಪಣೆ ಮಾಡುವ ನಿಟ್ಟಿನಲ್ಲಿ ಈ ದಿನ ಸಂಜೆ ಪಂಚಾಂಗ ಶ್ರವಣ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:ಪವರ್ ಡೈರೆಕ್ಟರ್ ನಲ್ಲಿ ವಿಡಿಯೊ ಕಳಿಸಿರುವೆ. ಗಮನಿಸಿರಿ.
R_KN_BEL_03_060419_UGADI_FESTIVAL_STORY_VEERESH GK
ETV Bharat Logo

Copyright © 2024 Ushodaya Enterprises Pvt. Ltd., All Rights Reserved.