ಬಳ್ಳಾರಿ: ಅಂಗನವಾಡಿ ಅಡುಗೆ ಕೇಂದ್ರದಲ್ಲಿ ನೀರು ಕುಡಿಯಲು ಹೋಗಿದ್ದ ಬಾಲಕಿ ಆಯ ತಪ್ಪಿ ಬಿಸಿ ಅನ್ನದ ಗಂಜಿಗೆ ಬಿದ್ದಿರುವ ಘಟನೆ ಹೊಸಪೇಟೆಯಲ್ಲಿ ನಡೆದಿದೆ.

ಇಲ್ಲಿನ ಹೊಸಪೇಟೆ ನಗರದ ಚಿತ್ತವಾಡಗಿ ಸಂತೆಬೈಲು ಪ್ರದೇಶದ ಅಂಗನವಾಡಿ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಬಿಸಿ ಗಂಜಿಯಾಗಿದ್ದರಿಂದ ದೀಕ್ಷಾ(3) ಎಂಬ ಬಾಲಕಿಗೆ ಬೆನ್ನು ಹಾಗೂ ಎಡಗೈ ಸುಟ್ಟಿದೆ.
ತಕ್ಷಣ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಪ್ರಭಾರಿ ಸಿಡಿಪಿಒ ಸುದೀಪ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಂಗನವಾಡಿ ಶಿಕ್ಷಕಿ ಅನಿತಾ ಹಾಗೂ ಸಹಾಯಕಿ ಕಮಲಮ್ಮ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದಿವ್ಯಾ ಪೋಷಕರು ಆರೋಪಿಸಿದ್ದಾರೆ.