ETV Bharat / state

ಒಂದು ದಿನದ ಮಟ್ಟಿಗೆ ಜಿಪಂ ಸಿಇಒ ಆದ ವಿದ್ಯಾರ್ಥಿನಿ! - ರಾಷ್ಟ್ರೀಯ ಹೆಣ್ಣುಮಕ್ಕಳ ದಿನ

ಬಳ್ಳಾರಿ ಜಿಪಂ ಕಚೇರಿಯ ಸಭಾಂಗಣದಲ್ಲಿಂದು ನಡೆದ ಮಹಿಳೆಯರ ಮತ್ತು ಮಕ್ಕಳ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾದ ಪುಷ್ಪಲತಾ, ಒಂದು ದಿನದ ಮಟ್ಟಿಗೆ ಜಿಪಂ ಸಿಇಒ ಆಗಿ ಅಧಿಕಾರ ವಹಿಸಿಕೊಂಡರು..

ceo
ceo
author img

By

Published : Jan 30, 2021, 5:19 PM IST

ಬಳ್ಳಾರಿ : ರಾಷ್ಟ್ರೀಯ ಹೆಣ್ಣುಮಕ್ಕಳ ದಿನದ ನಿಮಿತ್ತ ಬಳ್ಳಾರಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಗಿ ಒಂದು ದಿನದ ಮಟ್ಟಿಗೆ ವಿದ್ಯಾರ್ಥಿನಿ ಪುಷ್ಪಲತಾ ವಿಶೇಷ ಗಮನ ಸೆಳೆದಿದ್ದಾರೆ.

ಬಳ್ಳಾರಿ ಜಿಪಂ ಕಚೇರಿಯ ಸಭಾಂಗಣದಲ್ಲಿಂದು ನಡೆದ ಮಹಿಳೆಯರ ಮತ್ತು ಮಕ್ಕಳ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾದ ಏಕದಿನದ ಮಟ್ಟಿಗೆ ಜಿಪಂ ಸಿಇಒ ಆಗಿ ಅಧಿಕಾರ ವಹಿಸಿಕೊಂಡಿದ್ದ ಸಿರುಗುಪ್ಪ ತಾಲೂಕಿನ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ 8ನೇ ತರಗತಿ ವಿದ್ಯಾರ್ಥಿನಿ ಪುಷ್ಪಲತಾ, ಬಾಲ್ಯ ವಿವಾಹಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಸುಲಲಿತವಾಗಿ ಉತ್ತರಿಸಿದ್ರು.

ಮಹಿಳೆಯರ ಮತ್ತು ಮಕ್ಕಳ ಸಂವಾದ ಕಾರ್ಯಕ್ರಮ..

ಇದಲ್ಲದೇ, ವರದಕ್ಷಿಣೆ ಪಡೆಯೋದು ಎಷ್ಟು ಅಪರಾಧವೋ, ವರದಕ್ಷಿಣೆ ನೀಡೋದು ಕೂಡ ಅಷ್ಟೇ ಅಪರಾಧ ಎಂದು ತಿಳಿಸಿದರು. ನನಗೆ ಈ ಒಂದು ದಿನದ ಮಟ್ಟಿಗೆ ಜಿಪಂ ಸಿಇಒ ಆಗಿರೋದು ಬಹಳ ಖುಷಿ ಎನಿಸಿದೆ. ನಾನು ಮುಂದೊಂದು ದಿನ ಸಿಇಒ ಆಗಬೇಕೆಂಬ ಕನಸು ಹೊಂದಿದ್ದೇನೆ.‌ ನನಗೆ ಈ ಅವಕಾಶ ಮಾಡಿಕೊಟ್ಟ ಸಿಇಒ ನಂದಿನಿ ಮೇಡಂ ಅವರಿಗೆ ನಾನು ಅಭಾರಿಯಾಗಿರುವೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.