ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ ಇಂದು 18ನೇ ವಾರ್ಡ್ಗೆ ಬಿಜೆಪಿ ಅಭ್ಯರ್ಥಿಯಾಗಿ ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಅವರ ಪುತ್ರ ಗಾಲಿ ಶ್ರವಣಕುಮಾರ ರೆಡ್ಡಿ ನಾಮಪತ್ರ ಸಲ್ಲಿಸಿದ್ದಾರೆ.
![gali shravana kumara reddy filed nomination for ballay palike election](https://etvbharatimages.akamaized.net/etvbharat/prod-images/11410549_gfhtnh.jpg)
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಬಳ್ಳಾರಿಯ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿಂದು ಶಾಸಕ ಗಾಲಿ ಸೋಮಶೇಖರರೆಡ್ಡಿ ಹಾಗೂ ಅಭ್ಯರ್ಥಿ ಗಾಲಿ ಶ್ರವಣಕುಮಾರ ರೆಡ್ಡಿಯವರೊಂದಿಗೆ ಕಾರ್ಯಕರ್ತ ಮುಖಂಡರುಗಳು ಬೈಕ್ ಮೆರವಣಿಗೆ ಮುಖೇನ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಬಳ್ಳಾರಿ ಪಾಲಿಕೆ ಚುನಾವಣೆಯಲ್ಲಿ ಜಣ ಜಣ ಕಾಂಚಾಣದ ಸದ್ದು.. ಕೋಟಿ ರೂಪಾಯಿಗೆ ಸೇಲ್ ಆಗ್ತಿದೆಯಂತೆ ಪಕ್ಷಗಳ ಟಿಕೆಟ್
ಈ ವೇಳೆ, ಶಾಸಕ ಗಾಲಿ ಸೋಮಶೇಖರ ರೆಡ್ಡಿಯವರ ಧರ್ಮಪತ್ನಿ ಗಾಲಿ ವಿಜಯಮ್ಮ, ಗಾಲಿ ರಾಜ ಸಂದೀಪ್ ರೆಡ್ಡಿ, ಎರ್ರಂಗಳಿಗಿ ತಿಮ್ಮಾರೆಡ್ಡಿ, ಮಾಜಿ ಮೇಯರ್ ಬಸವರಾಜ, ವೀರಶೇಖರ ರೆಡ್ಡಿ, ಶ್ರೀನಿವಾಸ ಮೋತ್ಕರ್, ಗಣಪಾಲ ಐನಾಥರೆಡ್ಡಿ ಇದ್ದರು.