ಹೊಸಪೇಟೆ: ವಿಜಯನಗರದ ಹೂವಿನಹಡಗಲಿಯಲ್ಲಿ ಅಪಘಾತದಲ್ಲಿ ಮೃತಪಟ್ಟ ಪೊಲೀಸ್ ಕಾನ್ಸ್ಟೇಬಲ್ಗೆ ಗೌರವ ವಂದನೆ ಸಲ್ಲಿಸಲಾಯಿತು.
ನಿನ್ನೆ ತಡರಾತ್ರಿ ಬೈಕ್ ಅಪಘಾತದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಶಿವಕುಮಾರ್ ಸ್ವಾಮಿ ಮೃತಪಟ್ಟಿದ್ದರು. ಹೂವಿನಹಡಗಲಿ ಹೊಳಲು ಗ್ರಾಮದಲ್ಲಿಂದು ಗೌರವ ವಂದನೆ ಮೂಲಕ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಇದನ್ನೂ ಓದಿ: ನ್ಯಾಯಾಲಯದ ಅನುಮತಿ ಪಡೆದು ಜಿಲೆಟಿನ್ ಕಡ್ಡಿ ಸ್ಫೋಟಿಸಿದ ಪೊಲೀಸರು
ಹರಪನಹಳ್ಳಿ ಡಿವೈಎಸ್ಪಿ ಹಾಲಮೂರ್ತಿ ಸೇರಿದಂತೆ ಇತರರಿಂದ ಗೌರವ ಸಮರ್ಪಣೆ ಮಾಡಲಾಯಿತು. ಅಂತ್ಯಕ್ರಿಯೆ ವೇಳೆ ಸಾವಿರಾರು ಜನರು ಭಾಗವಹಿಸಿದ್ದರು.