ಬಳ್ಳಾರಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಬಳ್ಳಾರಿ ಸಂಸ್ಥೆಯವರಿಂದ ನಾಲ್ಕು ಹಳ್ಳಿಗಳಿಗಳಲ್ಲಿ ಕೊರೊನಾ ಜಾಗೃತಿ ಮೂಡಿಸಿ ಮಾಸ್ಕ್ಗಳನ್ನು ವಿತರಿಸಿದರು. ಜತೆಗೆ ಉಚಿತ ಆಹಾರವನ್ನು ಸಹ ನೀಡಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಪ್ರಧಾನ ಆಯುಕ್ತೆ ಪಿ.ಜಿ.ಆರ್. ಸಿಂಧ್ಯಾ ಮತ್ತು ಡಿಡಿಪಿಐ ಸಿ. ರಾಮಪ್ಪ ಬಳ್ಳಾರಿ ಅವರ ಮಾರ್ಗದರ್ಶನದಲ್ಲಿ ಕೋವಿಡ್-19 ರೋಗದ ಸಾಂಕ್ರಾಮಿಕ ಜಾಗೃತಿ ಮೂಡಿಸುವ ಮತ್ತು ಮಾಸ್ಕ್ ನೀಡುವ ಕಾರ್ಯಕ್ರಮವನ್ನು ಹಳ್ಳಿಗಳಲ್ಲಿ ನಡೆಸಿದರು.
ಹಳ್ಳಿಗಳಿಗೆ ಹೋಗಿ ಜಾಗೃತಿ:
ಬಳ್ಳಾರಿ ತಾಲೂಕಿನ ಕೊಳಗಲ್ಲು ಗ್ರಾಮ, ಕೃಷ್ಣ ನಗರ ಕ್ಯಾಂಪ್, ಯರಂಗಳಿ ಗ್ರಾಮಗಳಿಗೆ ಹೋಗಿ ಧ್ವನಿ ವರ್ಧಕಗಳ ಮೂಲಕ ಕೋವಿಡ್-19 ಸಾಂಕ್ರಾಮಿಕ ರೋಗದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ.
ಬಡ ಜನರಿಗೆ ನಿತ್ಯ 100 ಪ್ಯಾಕೆಟ್ ಊಟ, ನೀರು ವಿತರಣೆ:
ಕಳೆದ 20 ದಿನಗಳಿಂದ ನಗರದ ರಾಯಲ್, ಸಂಗಮ್ ಸರ್ಕಲ್, ಇನ್ನಿತರೆ ಪ್ರದೇಶದಲ್ಲಿ ಇರುವ ಬಡ ಜನರಿಗೆ ಉಚಿತ ಊಟ ಮತ್ತು ನೀರನ್ನು ವಿತರಿಸುತ್ತಿದ್ದಾರೆ.
ಇದನ್ನೂ ಓದಿ: ಕೋಲಾರದಲ್ಲಿ ಬೆಳ್ಳಂಬೆಳಗ್ಗೆ ಫೀಲ್ಡಿಗಿಳಿದ ಪೊಲೀಸರಿಂದ ವಾಹನ ಜಪ್ತಿ