ETV Bharat / state

ಕೊರೊನಾ ವಾರಿಯರ್ಸ್​ಗೆ ಹಣ್ಣು ವಿತರಿಸಿ ಹುಟ್ಟುಹಬ್ಬ ಆಚರಣೆ

ಲಾಕ್​​ಡೌನ್​ನಲ್ಲಿ ಸುಡು ಬಿಸಿಲನ್ನೂ ಲೆಕ್ಕಿಸದೆ ತಮ್ಮ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿ, ಗೃಹರಕ್ಷಕ ದಳ, ವೈದ್ಯಕೀಯ ಸಿಬ್ಬಂದಿಗೆ ತನ್ನ ಮಗನ ಹುಟ್ಟುಹಬ್ಬದಂದು ಹಣ್ಣು ವಿತರಿಸಿ ವ್ಯಕ್ತಿಯೊಬ್ಬರು ಮಾದರಿಯಾಗಿದ್ದಾರೆ.

author img

By

Published : Apr 22, 2020, 6:32 PM IST

Free fruit delivered to Corona Warriors on boy birthday in Bellary
ಹುಟ್ಟು ಹಬ್ಬದಂದು ಕೊರೊನಾ ವಾರಿಯರ್ಸ್​ಗೆ ಉಚಿತ ಹಣ್ಣು ವಿತರಣೆ

ಬಳ್ಳಾರಿ: ಕೊರೊನಾ ವೈರಸ್ ಹರಡದಂತೆ ತಡೆಯಲು ಹೋರಾಡುತ್ತಿರುವ ಪೊಲೀಸರು, ವೈದ್ಯಕೀಯ ಸಿಬ್ಬಂದಿ ಹಾಗೂ ಎಲ್ಲಾ ಕಾರ್ಯಕರ್ತರಿಗೆ ದೇಶವ್ಯಾಪಿ ಶ್ಲಾಘನೆ ವ್ಯಕ್ತವಾಗ್ತಿದೆ. ಲಾಕ್​ಡೌನ್ ನಡುವೆಯೂ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಲಾಗುತ್ತಿದೆ.

ಈ ನಡುವೆ ಬಳ್ಳಾರಿಯ ಗಾಂಧಿ ನಗರದ ಡಿ.ಶಿವಪ್ರಸಾದ್ ಎಂಬುವವರು ತಮ್ಮ ಮಗನ ಹುಟ್ಟುಹಬ್ಬವನ್ನು ವಿಭಿನ್ನ ರೀತಿಯಲ್ಲಿ ಆಚರಿಸಿ ಮಾದರಿಯಾಗಿದ್ದಾರೆ. ಇಲ್ಲಿನ ಕ್ಲಾಸಿಕ್ ಭವನದ ಮಾಲೀಕರಾದ ಶಿವಪ್ರಸಾದ್​ ತಮ್ಮ ಮಗ ಕೌಶಿಕ್​ ಹುಟ್ಟುಹಬ್ಬದಂದು ಲಾಕ್​ಡೌನ್​ ವೇಳೆ ಸೇವೆ ಸಲ್ಲಿಸುತ್ತಿರುವ ಪೊಲೀಸರು, ಗೃಹರಕ್ಷಕ ದಳ, ವೈದ್ಯಕೀಯ ಸಿಬ್ಬಂದಿ, ಮಾಧ್ಯಮದವರಿಗೆ ಹಣ್ಣು, ನೀರು ವಿತರಿಸಿ ಮಾದರಿಯಾಗಿದ್ದಾರೆ.

ಹುಟ್ಟುಹಬ್ಬದಂದು ಕೊರೊನಾ ವಾರಿಯರ್ಸ್​ಗೆ ಉಚಿತ ಹಣ್ಣು ವಿತರಣೆ

ನಗರದ ಎಸ್.ಪಿ ಸರ್ಕಲ್, ದುರ್ಗಮ್ಮ ಗುಡಿ, ರಾಯಲ್ ವೃತ್ತ, ಮೋತಿ ವೃತ್ತ, ಸಂಗಮ್ ಸರ್ಕಲ್​ಗಳಲ್ಲಿ ಕಾರ್ಯನಿರ್ವಹಿಸುವ ಪೊಲೀಸರು, ಗೃಹರಕ್ಷಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಉಚಿತವಾಗಿ ಹಣ್ಣು ವಿತರಣೆ ಮಾಡಿದರು. ಈ ಸಮಯದಲ್ಲಿ ಈಟಿವಿ ಭಾರತದೊಂದಿಗೆ ಸನ್ಮಾರ್ಗ ಗೆಳೆಯರ ಬಳಗದ ಖಜಾಂಚಿ ಕಪ್ಪಗಲ್ಲು ಚಂದ್ರಶೇಖರ್ ಆಚಾರ್​​ ಮಾತನಾಡಿ, ಉಚಿತವಾಗಿ ಪೊಲೀಸರಿಗೆ, ಮಾಧ್ಯಮದವರಿಗೆ, ವೈದ್ಯಕೀಯ ಸಿಬ್ಬಂದಿಗೆ ಅವರು ಕೆಲಸ ಮಾಡುವ ಸ್ಥಳಗಳಿಗೆ ಹೋಗಿ ಹಣ್ಣುಗಳನ್ನು ವಿತರಣೆ ಮಾಡಿದ್ದು ವಿಶೇಷವಾಗಿದೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.