ETV Bharat / state

ಗಿಡಮೂಲಿಕೆ ಔಷಧಿಗಳ ಕೊರತೆಯಿದ್ರೂ ಆಯುಷ್‌ ಚಿಕಿತ್ಸಾಲಯಗಳಲ್ಲಿ ಕೊರೊನಾ ವೈರಸ್ ಜಾಗೃತಿ..

ಜಿಲ್ಲೆಯ ಪ್ರತಿ ಚಿಕಿತ್ಸಾಲಯಗಳಲ್ಲೂ ಕೂಡ ಅಗತ್ಯ ವೈದ್ಯರು, ಸ್ಟಾಫ್ ನರ್ಸ್, ಫಾರ್ಮಾ ಸಿಸ್ಟರ್ಸ್​​​​​ ಹಾಗೂ ಡಿ ಗ್ರೂಪ್ ನೌಕರರಿದ್ದಾರೆ. ಪ್ರತಿದಿನವೂ ಒಂದೊಂದು ಚಿಕಿತ್ಸಾಲಯಗಳಿಗೆ ಸರಿಸುಮಾರು 30 ರಿಂದ 50 ರೋಗಿಗಳು ಬರುತ್ತಿದ್ದಾರೆ..

author img

By

Published : Jul 4, 2020, 7:49 PM IST

free-distribution-of-immune-pills-in-ballary
ಆಯುಷ್​​ ಇಲಾಖೆ ಚಿಕಿತ್ಸಾಲಯ

ಬಳ್ಳಾರಿ : ಜಿಲ್ಲೆಯಾದ್ಯಂತ ಅಂದಾಜು 82 ಆಯುಷ್ ಇಲಾಖೆಯ ಚಿಕಿತ್ಸಾಲಯಗಳಿವೆ. ಅವುಗಳಲ್ಲಿ ಕೋವಿಡ್ ವೈರಸ್​​ನ ಜಾಗೃತಿ ಮೂಡಿಸುವ ಮುಖೇನ ರೋಗ ನಿರೋಧಕ ಮಾತ್ರೆಗಳನ್ನ ಉಚಿತ ವಿತರಣೆ ಕಾರ್ಯ ಮಾಡಲಾಗ್ತಿದೆ.

ಜಿಲ್ಲೆಯಲ್ಲಿ ಸುಮಾರು 76 ಆರ್ಯುವೇದ ಪದ್ಧತಿಯ ಆಸ್ಪತ್ರೆ/ಚಿಕಿತ್ಸಾಲಯಗಳು, ನಾಲ್ಕು ಹೋಮಿಯೋಪತಿ ಆಸ್ಪತ್ರೆ/ಚಿಕಿತ್ಸಾಲಯಗಳು, ಎರಡು ಯುನಾನಿ ಚಿಕಿತ್ಸಾಲಯಗಳಿವೆ. ಈ ಕೋವಿಡ್ ಸಂದರ್ಭದಲ್ಲಿ ಚಿಕಿತ್ಸಾಲಯ ಹಾಗೂ ಆಸ್ಪತ್ರೆಗಳಿಗೆ ಪ್ರತಿದಿನವೂ ನೂರಾರು ರೋಗಿಗಳು ಭೇಟಿ ಕೊಡುತ್ತಿದ್ದಾರೆ.

ರೋಗ ನಿರೋಧಕ ಮಾತ್ರೆಗಳು ಸೇರಿ ಇನ್ನಿತರೆ ಔಷಧಿಗಳನ್ನ ಉಚಿತವಾಗಿ ವಿತರಣೆ ಮಾಡಲಾಗುತ್ತಿವೆ. ಆದರೆ, ಸಕಾಲದಲ್ಲಿ ಗಿಡಮೂಲಿಕೆ ಔಷಧಿಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೂರೈಕೆ ಮಾಡುವಲ್ಲಿ ವಿಫಲವಾಗಿವೆ ಎಂಬ ಕೂಗು ಕೇಳಿ ಬಂದಿದೆ. ಲಾಕ್​​ಡೌನ್ ಮುಂಚೆಯೇ ಆಯುಷ್ ಇಲಾಖೆಯು ಸಂಗ್ರಹಿಸಿಟ್ಟುಕೊಂಡ ಗಿಡಮೂಲಿಕೆ ಔಷಧಿಗಳನ್ನು ಈಗಲೂ ವಿತರಿಸಲಾಗುತ್ತಿದೆ. ಕೋವಿಡ್ ವೈರಾಣು ತಡೆಗಟ್ಟಲು ಆಯುಷ್ ಇಲಾಖೆ ಪಾತ್ರವೂ ಕೂಡ ಬಹುಮುಖ್ಯವಾಗಿದೆ.

ಉಚಿತವಾಗಿ ರೋಗ ನಿರೋಧಕ ಮಾತ್ರೆಗಳ ವಿತರಣೆ

ಜಿಲ್ಲೆಯ ಪ್ರತಿ ಚಿಕಿತ್ಸಾಲಯಗಳಲ್ಲೂ ಕೂಡ ಅಗತ್ಯ ವೈದ್ಯರು, ಸ್ಟಾಫ್ ನರ್ಸ್, ಫಾರ್ಮಾ ಸಿಸ್ಟರ್ಸ್​​​​​ ಹಾಗೂ ಡಿ ಗ್ರೂಪ್ ನೌಕರರಿದ್ದಾರೆ. ಪ್ರತಿದಿನವೂ ಒಂದೊಂದು ಚಿಕಿತ್ಸಾಲಯಗಳಿಗೆ ಸರಿಸುಮಾರು 30 ರಿಂದ 50 ರೋಗಿಗಳು ಬರುತ್ತಿದ್ದಾರೆ.

ಎಲ್ಲೆಲ್ಲಿ ಚಿಕಿತ್ಸಾಲಯಗಳಿವೆ?: ಬಳ್ಳಾರಿ ತಾಲೂಕಿನಲ್ಲಿ-13, ಕುರುಗೋಡು ತಾಲೂಕಿನಲ್ಲಿ-2, ಹಡಗಲಿ-11, ಹಗರಿಬೊಮ್ಮನಹಳ್ಳಿ-7, ಹೊಸಪೇಟೆ-11, ಕಂಪ್ಲಿ-9, ಕೂಡ್ಲಿಗಿ-4, ಕೊಟ್ಟೂರು-2, ಹರಪನಹಳ್ಳಿ-7, ಸಂಡೂರು-6, ಸಿರುಗುಪ್ಪ-10 ಚಿಕಿತ್ಸಾಲಯಗಳಿವೆ.

ಈಟಿವಿ ಭಾರತದೊಂದಿಗೆ ಮಾತನಾಡಿದ ಜಿಲ್ಲಾ ಆಯುಷ್ ಇಲಾಖೆಯ ಜಿಲ್ಲಾಧಿಕಾರಿ ಡಾ.ವರಪ್ರಸಾದ್​​​​ ಅವರು, ಕೋವಿಡ್ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಆಯುಷ್ ಇಲಾಖೆಯ ಬಹುಮುಖ್ಯ ಜವಾಬ್ದಾರಿ. ಹೀಗಾಗಿ, ಚಿಕಿತ್ಸಾಲಯಗಳಿಗೆ ಭೇಟಿ ಕೊಡುವ ಪ್ರತಿಯೊಬ್ಬರಿಗೂ ಕೂಡ ಅರ್ಸೆನಿಕ್ ಅಲ್ಬಾ ಮಾತ್ರೆಗಳನ್ನ ಉಚಿತವಾಗಿ ವಿತರಿಸಲಾಗುತ್ತಿದೆ. ಆರ್​​ಕೆ ಅಜೀಬಾ, ಸಂಶಮನ ವಟಿ ಅಮೃತ ಬಳ್ಳಿಯಿಂದ ತಯಾರಿಸಿದ ಔಷಧಿಯನ್ನ ಬಳಕೆ ಮಾಡಿದ್ರೆ ಮಹಾಮಾರಿ ಕೋವಿಡ್ ವೈರಾಣು ದೂರಾಗಲಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.