ETV Bharat / state

ಬಳ್ಳಾರಿಯಲ್ಲಿ ಕೊರೊನಾ ಸೋಂಕಿಗೆ ಒಂದೇ ದಿನ ನಾಲ್ವರು ಬಲಿ: ಸಾವಿನ ಸಂಖ್ಯೆ 14ಕ್ಕೇರಿಕೆ! - ಬಳ್ಳಾರಿ ಕೊರೊನಾ ಲೇಟೆಸ್ಟ್​ ನ್ಯೂಸ್​

ಗಣಿನಗರಿಯಲ್ಲಿ ಒಂದೇ ದಿನ ಮಹಾಮಾರಿ ಕೊರೊನಾ ಸೋಂಕಿಗೆ ನಾಲ್ವರು ಬಲಿಯಾಗಿದ್ದು, ಸಾವನ್ನಪ್ಪಿದವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.

Bellary
ಬಳ್ಳಾರಿಯಲ್ಲಿ ಕೊರೊನಾ ಸೋಂಕಿಗೆ ನಾಲ್ವರು ಬಲಿ
author img

By

Published : Jun 28, 2020, 4:49 PM IST

Updated : Jun 28, 2020, 4:55 PM IST

ಬಳ್ಳಾರಿ: ಜಿಲ್ಲೆಯಲ್ಲಿ ಇಂದು ಒಂದೇ ದಿನದಲ್ಲಿ ಮಹಾಮಾರಿ ಕೊರೊನಾ ಸೋಂಕಿಗೆ ನಾಲ್ವರು ಬಲಿಯಾಗಿದ್ದು, ಸಾವನ್ನಪ್ಪಿದವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.

ನೆರೆಯ ಆಂಧ್ರಪ್ರದೇಶ ಮೂಲದ 60 ವರ್ಷದ ವ್ಯಕ್ತಿ, ಬಳ್ಳಾರಿ ತಾಲೂಕಿನ ರೂಪನಗುಡಿ ಹೋಬಳಿಯ 65 ವರ್ಷದ ವೃದ್ಧ ಹಾಗೂ ಬಳ್ಳಾರಿಯ ಕೋಟೆ ಪ್ರದೇಶದ 63 ವರ್ಷದ ವೃದ್ಧೆ ಮತ್ತು ರಾಜೇಶ್ವರಿ ನಗರದ 58 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆಂದು ಜಿಲ್ಲಾಧಿಕಾರಿ ನಕುಲ್ ತಿಳಿಸಿದ್ದಾರೆ.

ತೀವ್ರ ಉಸಿರಾಟದ ತೊಂದರೆ, ಜ್ವರ ಮತ್ತು ಕೆಮ್ಮು- ನೆಗಡಿಯಿಂದ ಬಳಲುತ್ತಿದ್ದ ಈ ನಾಲ್ವರನ್ನು ಶನಿವಾರ ನಗರದ ವಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದ ವೇಳೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಇದಕ್ಕೂ ಮುನ್ನ ಕೋವಿಡ್ ಪರೀಕ್ಷೆಗೆ ಗಂಟಲು ದ್ರವವನ್ನು ಸಂಗ್ರಹಿಸಲಾಗಿತ್ತು. ನಂತರ ಕೊರೊನಾ ಸೋಂಕಿರೋದು ದೃಢಪಟ್ಟಿದ್ದು, ಎಸ್​ಒಪಿ ಪ್ರಕಾರ ಈ ನಾಲ್ವರ ಅಂತ್ಯಕ್ರಿಯೆಯನ್ನು ನಡೆಸಲಾಗುವುದೆಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಮಾಹಿತಿ ನೀಡಿದ್ದಾರೆ.

Last Updated : Jun 28, 2020, 4:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.