ETV Bharat / state

ಸಿರಗುಪ್ಪ ಬಳಿ ಭೀಕರ ಅಪಘಾತ: ವಾಣಿಜ್ಯ ತೆರಿಗೆ ಇಲಾಖೆ ನಿರೀಕ್ಷಕ, ಪುತ್ರ ಸೇರಿ ನಾಲ್ವರ ದುರ್ಮರಣ - ಬಳ್ಳಾರಿಯಲ್ಲಿ ರಸ್ತೆ ಅಪಘಾತದಲ್ಲಿ ನಾಲ್ವರು ಸಾವು,

ಕೊರೊನಾ ಕರ್ಫ್ಯೂ ಜಾರಿ ಸಂಬಂಧ ಸ್ವಗ್ರಾಮಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಭೀಕರ ಅಪಘಾತ ಸಂಭವಿಸಿ ನಾಲ್ವರು ಸಾವನ್ನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನಲ್ಲಿ ನಡೆದಿದೆ.

four killed in road accident, four killed in road accident at Bellary, Bellary accident news, ರಸ್ತೆ ಅಪಘಾತದಲ್ಲಿ ನಾಲ್ವರು ಸಾವು, ಬಳ್ಳಾರಿಯಲ್ಲಿ ರಸ್ತೆ ಅಪಘಾತದಲ್ಲಿ ನಾಲ್ವರು ಸಾವು, ಬಳ್ಳಾರಿ ರಸ್ತೆ ಅಪಘಾತ ಸುದ್ದಿ,
ತಂದೆ-ಮಗ ಸೇರಿ ಸ್ಥಳದಲ್ಲೇ ಪ್ರಾಣಬಿಟ್ಟ ನಾಲ್ವರು
author img

By

Published : Apr 28, 2021, 10:53 AM IST

ಬಳ್ಳಾರಿ: ಕೋವಿಡ್ ನಿಯಂತ್ರಣ ಸಲುವಾಗಿ ರಾಜ್ಯ ಸರ್ಕಾರ ಜನತಾ ಕರ್ಫ್ಯೂ ಜಾರಿಗೊಳಿಸಿದೆ. ಈ ಹಿನ್ನೆಲೆಯಲ್ಲಿ ಸ್ವಗ್ರಾಮಕ್ಕೆ ತೆರಳುವಾಗ ಲಾರಿ ಮತ್ತು ಕಾರಿನ ಮಧ್ಯೆ ಅಪಘಾತ ನಡೆದಿದೆ. ಪರಿಣಾಮ, ನಾಲ್ವರು ಸಾವನ್ನಪ್ಪಿರುವ ಘಟನೆ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಬಳಿ ನಡೆದಿದೆ.

ನಸುಕಿನ ಜಾವ 1.45ರ ಸುಮಾರಿಗೆ ಅಪಘಾತ ಸಂಭವಿಸಿದೆ. ಮೃತರು ಚಿಂಚೋಳಿ ತಾಲೂಕಿನ ಚಿಮ್ಮಾ ಈದಲಾಯಿ ಮತ್ತು ಕೊರಡಂಪಳ್ಳಿ ಗ್ರಾಮದವರಾಗಿದ್ದಾರೆ.

ಬಳ್ಳಾರಿಯಲ್ಲಿ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಭೀಮರಾವ ಬೆಳ್ಳೂರು (52), ಅವರ ಮಗ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ಬಸವರಾಜ ಭೀಮರಾವ ಬೆಳ್ಳೂರು (30), ಖಾಸಗಿ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಬಿಇ ಪದವೀಧರ ಸುನೀಲ ಶಿವರಾಜ ಪಾಟೀಲ‌ (30), ಕಾರು ಚಾಲಕ ಕೊರಡಂಪಳ್ಳಿಯ ರೇವಣಸಿದ್ದ ಬಸವರಾಜ ಕೊರಡಂಪಳ್ಳಿ(30) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸುದ್ದಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.