ETV Bharat / state

ಜೆಡಿಎಸ್​ ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಸುದೀರ್ಘವಾದ ಚರ್ಚೆ ಆಗಬೇಕು: ಬಸವರಾಜ ಬೊಮ್ಮಾಯಿ

ಬಿಜೆಪಿ - ಜೆಡಿಎಸ್​ ಮೈತ್ರಿ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಮುಂಬರು ದಿನಗಳಲ್ಲಿ ಆಗುವ ಸಾಧ್ಯತೆ ಇದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

former-cm-basavaraja-bommai-reaction-on-bjp-and-jds-alliance
ಜೆಡಿಎಸ್​ ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಸುದೀರ್ಘವಾದ ಚರ್ಚೆ ಆಗಬೇಕು: ಬಸವರಾಜ ಬೊಮ್ಮಾಯಿ
author img

By ETV Bharat Karnataka Team

Published : Sep 10, 2023, 10:30 PM IST

Updated : Sep 10, 2023, 10:44 PM IST

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ಬಳ್ಳಾರಿ: ಕರ್ನಾಟಕದಲ್ಲಿ 4 ತಿಂಗಳ ಆಡಳಿತ ನೋಡಿದಾಗ ಎಲ್ಲರೂ ಸೇರಿ ಜನರ ಪರವಾಗಿ ಮತ್ತು ರಾಜಕೀಯವಾಗಿ ಸರ್ಕಾರವನ್ನು ವಿರೋಧ ಮಾಡುವ ಅವಶ್ಯಕತೆ ಇದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ನಗರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈತ್ರಿ ಕುರಿತಂತೆ ಮಾಜಿ ಸಿಎಂ ಬಿ ಎಸ್​ ಯಡಿಯೂರಪ್ಪ ಏನು ಹೇಳಿಕೆ ನೀಡಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ. ಮೈತ್ರಿ ಮಾಡಿಕೊಳ್ಳುವ ಬಗ್ಗೆ ಸುದೀರ್ಘವಾದ ಚರ್ಚೆ ಎಲ್ಲಾ ಹಂತದಲ್ಲೂ ಆಗಬೇಕು ಎಂದರು.

ಶನಿವಾರ ಕುಮಾರಸ್ವಾಮಿ ಹೇಳಿರುವುದನ್ನು ನೋಡಿದಾಗ ಮೈತ್ರಿ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಮುಂಬರುವ ದಿನಗಳಲ್ಲಿ ಆಗುವ ಸಾಧ್ಯತೆ ಇದೆ ಎಂದರು. ಕಾಂಗ್ರೆಸ್​ ನಾಯಕ ಬಿ ಕೆ ಹರಿಪ್ರಸಾದ್​ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ಸಿದ್ದರಾಮಯ್ಯ ಒನ್​ ಹಾಗೂ ಸಿದ್ದರಾಮಯ್ಯ ಟೂ. 2013ರ ರಿಂದ 2018ರ ವರೆಗೆ ಇದ್ದ ಸಿದ್ದರಾಮಯ್ಯರಿಗೂ, ಈಗಿನ ಸಿದ್ದರಾಮಯ್ಯರಿಗೂ ಬಹಳ ವ್ಯತ್ಯಾಸ ಇದೆ. ಈ ವ್ಯತ್ಯಾಸ ಅವರ ಆಡಳಿತದ ಮೇಲೂ ಇದೆ, ರಾಜಕೀಯದ ಮೇಲೂ ಇದೆ. ಬಹಳಷ್ಟು ಜನರಿಗೆ ಇದರ ಬಗ್ಗೆ ಗೊತ್ತಾಗಿ ಬೇಗುದಿ ಇದೆ. ಅದರ ಒಂದು ಭಾಗ ಹರಿಪ್ರಸಾದ್​ ಅವರು ಮಾತನಾಡಿರುವುದು ಎಂದರು.

ಹರಿಪ್ರಸಾದ್ ಸಂಪೂರ್ಣವಾಗಿ ಮಾತನಾಡಿದರು ಕೂಡ ಅದಕ್ಕೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿಲ್ಲ ಎಂದರೆ ಬಿ.ಕೆ ಹರಿಪ್ರಸಾದ್​ ಅವರು ಪಕ್ಷದಲ್ಲಿ ಪ್ರಬಲವಾಗಿದ್ದಾರೆ ಎಂದು ಸಾಬೀತಾಗುತ್ತದೆ. ಹಿಂದೆ ಸಿದ್ದರಾಮಯ್ಯ ಅವರು ಅಧಿಕಾರಿದಲ್ಲಿದ್ದಾಗ ಸ್ವತಂತ್ರವಾಗಿ ಆಡಳಿತ ಮಾಡಿದ್ದರು. ಈಗ ಅವರಿಗೆ ಸ್ವಾತಂತ್ರ್ಯ ಇಲ್ಲ, ಬಹಳ ಒತ್ತಡದಲ್ಲಿ ಆಡಳಿತ ಮಾಡುತ್ತಿದ್ದಾರೆ ಮತ್ತು ಆಂತರಿಕವಾಗಿ ಬಹಳಷ್ಟು ಅಡೆತಡೆಗಳಿವೆ. ಅವರ ಆರ್ಥಿಕ ನಿರ್ವಹಣೆ ನಿಯಂತ್ರಣ ಕಳೆದುಕೊಂಡಿದೆ ಎಂದು ಬೊಮ್ಮಾಯಿ ಹೇಳಿದರು.

ಮಾಜಿ ಸಚಿವ ಕೆ ಎಸ್ ಈಶ್ವರಪ್ಪ

ರಾಜ್ಯದ ಜನತೆಗೆ ಹಾಗೂ ಬಿಜೆಪಿಗೆ ಒಂದು ಶುಭ ಸಂದೇಶ: ಮತ್ತೊಂದೆಡೆ, ಬಳ್ಳಾರಿಯಲ್ಲಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಮಾತನಾಡಿ, ನಮ್ಮ ಕುಟುಂಬದ ಆರಾಧ್ಯ ದೇವರ ಪೂಜೆ ಇಂದು ಬಳ್ಳಾರಿಯಲ್ಲಿ ನಡೆಯುತ್ತಿದೆ. ಮಲ್ಲೇಶ್ವರ ಹಾಗು ಚೌಡೇಶ್ವರಿಗೆ ವಿಶೇಷ ಹೋಮ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಒಂದು ಶುಭ ಸುದ್ದಿ ಬಂದಿದೆ. ಈಗಷ್ಟೇ ಜೆಡಿಎಸ್​ನ ಕುಮಾರಸ್ವಾಮಿ ಅವರು ಕರೆ ಮಾಡಿ ಮಾತನಾಡಿದ್ದಾರೆ. ಇದು ಮುಂದಿನ ಚುನಾವಣೆಗೆ ಶುಭ ಸಂದೇಶ ಇದ್ದಹಾಗೆ. ಹೋಮ ಮಾಡುವಾಗ ಕರೆ ಮಾಡಿದ್ದು, ಶುಭ ಸುದ್ದಿ ಎಂದು ನಾವು ನಂಬುತ್ತೇವೆ. ರಾಜ್ಯದ ಜನತೆಗೆ ಹಾಗೂ ಬಿಜೆಪಿಗೆ ಒಂದು ಶುಭ ಸಂದೇಶ ಎಂದು ಬಣ್ಣಿಸಿದರು.

ಕುಮಾರಸ್ವಾಮಿ ಮಾತನಾಡಿ ರಾಜಕೀಯದಲ್ಲಿ ಇಷ್ಟು ಬೆಳವಣಿಗೆ ಆಗಿದೆ, ಯಾಕೆ ನೀವು ಕರೆ ಮಾಡಿಲ್ಲ ಎಂದು ಕೇಳಿದರು. ಅದಕ್ಕೆ ಎರಡು ದಿನ ಬಿಟ್ಟು ಬೆಂಗಳೂರಿಗೆ ಬಂದು ಮಾತನಾಡುವೆ ಎಂದಿರುವೆ. ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಹೊಸದಾಗಿ ಮೈತ್ರಿ ಆಗಿಲ್ಲ. ಈ ಹಿಂದೆ ಕೂಡಾ ಒಂದಾಗಿದ್ದೆವು, ಮೈತ್ರಿ ಮಾಡಿಕೊಂಡು ರಾಜ್ಯದಲ್ಲಿ ಒಳ್ಳೆಯ ಸರ್ಕಾರ ನೀಡಿದ್ದೇವೆ. ಕಾಂಗ್ರೆಸ್ ದೂರ ಇಡಬೇಕು ಎನ್ನುವ ಕಾರಣಕ್ಕಾಗಿ ನಾವು ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ದೂರ ಇಟಿದ್ದೇವೆ. ದೇಶದಲ್ಲಿ ಕಾಂಗ್ರೆಸ್ ದೂರ ಇಟ್ಟು ಎಲ್ಲರೂ ಒಂದಾಗಬೇಕು. ಸ್ವಾತಂತ್ರ್ಯ ಬಂದಾಗಿನಿಂದ ಕಾಂಗ್ರೆಸ್ ದೇಶವನ್ನು ಲೂಟಿ ಮಾಡಿದೆ. ದೇಶದಲ್ಲಿ ನಡೆದ ಬಹುತೇಕ ಭ್ರಷ್ಟಾಚಾರದ ಜನಕರು ಕಾಂಗ್ರೆಸ್ ನವರು ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಸಿಎಂ ಆಗಲು ದೆಹಲಿಯಲ್ಲಿ ಮೂರು ದಿನ ಚರ್ಚೆಯಾಗಿಲ್ಲ. ಡಿ ಕೆ ಶಿವಕುಮಾರ್​ ಎರಡು ದಿನ ತಡವಾಗಿ ದೆಹಲಿಗೆ ಹೋದರು. ಸಿದ್ದರಾಮಯ್ಯ ಬೇಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಮಾಡುವುದಕ್ಕೆ ಹೇಳಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಒಳಗೊಳಗೆ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಭಿನ್ನಾಭಿಪ್ರಾಯ ಇದೆ. ಸಿಎಂ ಅಂತಾ ಘೋಷಣೆಯಾದ ಬಳಿಕ ಒಂದೊಂದೇ ಹೊರ ಬರುತ್ತಿವೆ. ಬಿ.ಕೆ. ಹರಿಪ್ರಸಾದ್ ಹೇಳಿಕೆ ನೋಡಿ ನಂಗೆ ಆಶ್ಚರ್ಯ ಆಯ್ತು. ಸಿದ್ದರಾಮಯ್ಯ ಪಂಚೆ ಒಳಗೆ ಖಾಕಿ ಚಡ್ಡಿ ಹಾಕಿದ್ದಾರೆ ಅಂತಾರೇ. ಸಿದ್ದರಾಮಯ್ಯ ಬಗ್ಗೆ ಮಾತಾಡಿ, ಆದರೆ ಖಾಕಿ ಚಡ್ಡಿ ಬಗ್ಗೆ ಬೇಡ. ಖಾಕಿ ಚಡ್ಡಿ ರಾಷ್ಟ್ರ ಭಕ್ತರನ್ನು ರೆಡಿ ಮಾಡಿದಂತ ದೇಶ ಭಕ್ತ ಸಂಘಟನೆ ಎಂದು ಈಶ್ವರಪ್ಪ ಹೇಳಿದರು.

ಇದನ್ನೂ ಓದಿ: BJP and JDS alliance: ಬಿಬಿಎಂಪಿ, ಜಿಪಂ, ತಾಪಂ ಚುನಾವಣೆಯಲ್ಲಿಯೂ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ - ಜಿ ಟಿ ದೇವೇಗೌಡ

Last Updated : Sep 10, 2023, 10:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.