ಬಳ್ಳಾರಿ: ಉತ್ತರ ಕರ್ನಾಟಕದಲ್ಲಿ ಪ್ರವಾಹ ಹಿನ್ನೆಲೆ ಬಳ್ಳಾರಿ ವಲಯ ಐಜಿಪಿ ನಂಜುಂಡಸ್ವಾಮಿ ಜನರಲ್ಲಿ ವಿಶೇಷ ಮನವಿ ಮಾಡಿಕೊಂಡಿದ್ದಾರೆ.
ಹೌದು, ಪ್ರವಾಹ ಪೀಡಿತ ಪ್ರದೇಶಗಳು, ಪ್ರವಾಸ ಕೇಂದ್ರಗಳಲ್ಲ. ದಯಮಾಡಿ ಆ ಪ್ರದೇಶಗಳಿಗೆ ಕಾರಣವಿಲ್ಲದೇ ಹೋಗಬೇಡಿ. ಆ ಮೂಲಕ ನಿಮ್ಮಿಂದ ರಕ್ಷಣಾ ಕೆಲಸಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಐಜಿಪಿ ನಂಜುಂಡಸ್ವಾಮಿ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.