ETV Bharat / state

ಬಳ್ಳಾರಿಯಲ್ಲಿ ಮುಂದುವರಿದ ಪ್ರವಾಹ: ನೆರೆ ಪ್ರದೇಶಗಳಿಗೆ ಸಂಸದ ದೇವೇಂದ್ರಪ್ಪ ಭೇಟಿ - ತುಂಗಭದ್ರಾ ಜಲಾಶಯ

ಹೊಸಪೇಟೆ ತಾಲೂಕಿನ ತುಂಗಭದ್ರಾ ಜಲಾಶಯದ ಒಳ ಹರಿವಿನ ಪ್ರಮಾಣ ಹೆಚ್ಚಾಗಿದ್ದು, ಒಳ ಹರಿವನ್ನ ನೋಡಿಕೊಂಡು ನದಿಗೆ ನೀರು ಬಿಡಲಾಗುತ್ತಿದ್ದು, ನದಿಯಂಚಿನ ಜನರಿಗೆ ಜಾಗ್ರತೆ ವಹಿಸುವಂತೆ ಸೂಚನೆ ನೀಡಲಾಗಿದೆ.

ಬಳ್ಳಾರಿಯಲ್ಲಿ ಮುಂದುವರಿದ ಪ್ರವಾಹ
author img

By

Published : Aug 10, 2019, 3:14 PM IST

ಬಳ್ಳಾರಿ: ಜಿಲ್ಲೆಯ ಹಡಗಲಿ, ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ, ಹೊಸಪೇಟೆ, ಕಂಪ್ಲಿ, ಕುರುಗೋಡು ಹಾಗೂ ಸಿರಗುಪ್ಪ ಭಾಗದ ಜನರ ನೆರವಿಗಾಗಿ ಕಂಟ್ರೋಲ್ ರೂಮ್ ತೆರೆಯಲಾಗಿದ್ದು, ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲಿದೆ.

ಹೊಸಪೇಟೆ ತಾಲೂಕಿನ ತುಂಗಭದ್ರಾ ನದಿಗೆ 2,26,016 ಕ್ಯೂಸೆಕ್ ಒಳಹರಿವಿದೆ. ಸಂಜೆ 4ಕ್ಕೆ ತುಂಗಭದ್ರಾ ಅಣೆಕಟ್ಟಿನಿಂದ ನದಿಗೆ ನೀರು ಬಿಡುಗಡೆ ಮಾಡಲಾಗುತ್ತದೆ. ಆರಂಭಿಕ ಹಂತದಲ್ಲಿ 10 ಸಾವಿರ ಕ್ಯೂಸೆಕ್ ನೀರು ಹರಿಸುವ ಸಾಧ್ಯತೆ ಇದ್ದು, ಒಳಹರಿವಿನ ಪ್ರಮಾಣ ಆಧರಿಸಿ ನದಿಗೆ ಹೆಚ್ಚುವರಿ ನೀರು ಬಿಡುಗಡೆ ಮಾಡಲಾಗುತ್ತದೆ.

ಬಳ್ಳಾರಿಯಲ್ಲಿ ಮುಂದುವರಿದ ಪ್ರವಾಹ

ಹೊರ ಹರಿವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುವುದರಿಂದ, ನದಿ ಪಾತ್ರದಲ್ಲಿನ ನಗರ ಮತ್ತು ಪಟ್ಟಣದ ಜನರಿಗೆ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರವಾಗುವಂತೆ ಕರ್ನಾಟಕ ನೀರಾವರಿ ನಿಗಮ ನಿಯಮಿತ ತುಂಗಭದ್ರಾ ಯೋಜನಾ ವೃತ್ತದ‌ ಅಧೀಕ್ಷಕ ಎಂಜನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರವಾಹದಿಂದ ಹೂವಿನಹಡಗಲಿ ತಾಲೂಕಿನ ಮದಲಗಟ್ಟ ಆಂಜನೇಯಸ್ವಾಮಿ ದೇವಾಲಯ ಮುಳುಗಡೆಯಾಗಿದ್ದು, ಭಕ್ತರು ನೀರಿನಲ್ಲೆ ದೇವರ ದರ್ಶನ ಪಡೆಯುತ್ತಿದ್ದಾರೆ.

ಪ್ರವಾಹ ಪೀಡಿತ ಪ್ರದೇಶಗಳಿಗೆ ಸಂಸದ ದೇವೇಂದ್ರಪ್ಪ ಭೇಟಿ:
ಹಡಗಲಿ ತಾಲೂಕಿನ ಮಾಗಳ, ಅಂಗುರು, ಕೋಟಿಹಾಳ, ಮಕರಬ್ಬಿ, ಕಾಂತೆ ಬೆನ್ನೂರು, ಮೈಲಾರ, ಹರವಿ ಗ್ರಾಮಗಳಿಗೆ ಅಧಿಕಾರಿಗಳ ಜೊತೆಯಲ್ಲಿ ಸಂಸದ ದೇವೇಂದ್ರಪ್ಪ ಭೇಟಿ ನೀಡಿದರು. ಜನರೊಂದಿಗೆ ಚರ್ಚೆ ನಡೆಸಿ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ರು. ಬಳಿಕ ಕನ್ನಿಹಳ್ಳಿ ಮಠಕ್ಕೆ ತೆರಳಿ, ಜನರೊಂದಿಗೆ ಕುಳಿತು ಭಜನೆ ಮಾಡಿದ್ದು ವಿಶೇಷವಾಗಿತ್ತು. ‌

Intro:ತುಂಗಭದ್ರಾ ನದಿಯಲ್ಲಿ ಪ್ರವಾಹ ಭೀತಿ ಹಿನ್ನೆಲೆ.

ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂಟ್ರೋಲ್ ರೂಮ್ ಆರಂಭ.

Body:ಬಳ್ಳಾರಿ ಜಿಲ್ಲೆಯ ಹಡಗಲಿ, ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ, ಹೊಸಪೇಟೆ, ಕಂಪ್ಲಿ, ಕುರುಗೋಡು ಹಾಗೂ ಸಿರಗುಪ್ಪ ಭಾಗದ ಜನರ ನೆರವಿಗಾಗಿ ಕಂಟ್ರೋಲ್ ರೂಮ್ ಸ್ಥಾಪನೆ. ದಿನದ 24 ಗಂಟೆ ಕಾರ್ಯನಿರ್ವಹಿಸಲಿರುವ ಕಂಟ್ರೋಲ್ ರೂಮ್.

ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ತುಂಗಭದ್ರಾ ನದಿಗೆ 1.86 ಲಕ್ಷ ಕ್ಯೂಸೆಕ್ ಒಳಹರಿವಿದೆ. ಸಂಜೆ 4ಕ್ಕೆ ತುಂಗಭದ್ರಾ ಅಣೆಕಟ್ಟೆಯಿಂದ ನದಿಗೆ ನೀರು ಬಿಡುಗಡೆ. ಆರಂಭಿಕ ಹಂತದಲ್ಲಿ 10 ಸಾವಿರ ಕ್ಯೂಸೆಕ್ ನೀರು ಹರಿಸುವ ಸಾಧ್ಯತೆ. ಒಳಹರಿವಿನ ಪ್ರಮಾಣ ಆಧರಿಸಿ ನದಿಗೆ ಹೆಚ್ಚುವರಿ ನೀರು ಬಿಡುಗಡೆಯಾಗುತ್ತದೆ ಎಂದು ತಿಳಿದು ಬಂದಿದೆ. ಕಂಟ್ರೋಲ್ ರೂಮ್ ಸಂಖ್ಯೆ 08392-277209.

ಐತಿಹಾಸಿಕ ಮದಲಗಟ್ಟ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ನುಗ್ಗಿದ ನೀರು. ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಮದಲಗಟ್ಟ ಆಂಜನೇಯಸ್ವಾಮಿ ದೇವಸ್ಥಾನ.

ನೀರಿನಲ್ಲೆ ದೇವರ ದರ್ಶನ ಪಡೆಯುತ್ತಿರುವ ಭಕ್ತರು. ಶನಿವಾರವಾದ್ದರಿಂದ ಆಂಜನೇಯನ ದರ್ಶನಕ್ಕೆ ಆಮಿಸಿರುವ ಭಕ್ತರ ದಂಡು. ದೇವಸ್ಥಾನದ ಸುತ್ತ ನೀರು ಆವರಿಸಿದ್ದರೂ ನೀರಿನಲ್ಲೇ ದೇವಸ್ಥಾನಕ್ಕೆ ಹೋಗುತ್ತಿರುವ ಭಕ್ತರು.
Conclusion:ಒಟ್ಟಾರೆಯಾಗಿ ಪ್ರವಾಹ ಸಮಯದಲ್ಲಿ ನದಿಯ ಅಕ್ಕ ಪಕ್ಕದಲ್ಲಿನ ಜನರು ಜಾಗೃತರಾಗಿರಬೇಕು ಮತ್ತು ಕಂಟ್ರೋಲ್ ರೂಮ್ ದೂರವಾಣಿ ಮೂಲಕ ಸಹಾಯ ಪಡೆಯಬಹುದುದಾಗಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.