ETV Bharat / state

ಬಳ್ಳಾರಿಯಲ್ಲಿ ಮೊದಲ ಖಾಸಗಿ ಕೊರೊನಾ ಪರೀಕ್ಷಾ ಕೇಂದ್ರ ಆರಂಭ!

ಬಳ್ಳಾರಿಯಲ್ಲಿ ಮೊದಲ ಬಾರಿಗೆ ಖಾಸಗಿ ಕೋವಿಡ್ ಪರೀಕ್ಷಾ ಕೇಂದ್ರವನ್ನು ಆರಂಭ ಮಾಡಲಾಗಿದೆ.

ಬಳ್ಳಾರಿ
ಬಳ್ಳಾರಿ
author img

By

Published : Jul 29, 2020, 3:30 PM IST

ಬಳ್ಳಾರಿ: ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕಿನ ಪರೀಕ್ಷೆ ನಡೆಸುವ ಅನುಮತಿಯನ್ನು ಖಾಸಗಿ ಪ್ರಯೋಗಾಲಯಕ್ಕೆ ನೀಡಲಾಗಿದೆ.

ಸರ್ಕಾರಿ ಹೊರತುಪಡಿಸಿ ಖಾಸಗಿ ಪರೀಕ್ಷಾ ಕೇಂದ್ರಗಳನ್ನು ಹೆಚ್ಚಿಸಲು ಕೇಂದ್ರ ಮುಂದಾಗಿದ್ದು, ಈ ನಿಟ್ಟಿನಲ್ಲಿ ಎನ್​​ಎಬಿಎಲ್(ನ್ಯಾಷನಲ್ ಎಕ್ರಡೇಷನ್ ಬೋರ್ಡ್ ಫಾರ್ ಟೆಸ್ಟಿಂಗ್ ಅಂಡ್​​ ಕ್ಯಾಲಿಬ್ರೇಷನ್ ಲ್ಯಾಬೋರೇಟರೀಸ್) ಖಾಸಗಿ ಲ್ಯಾಬೋರೇಟರಿಗಳು ಕೋವಿಡ್ ಮಾದರಿಯ ಪರೀಕ್ಷೆ ನಡೆಸಲು ಅನುಮತಿ ನೀಡಲಾಗಿದೆ.

ಈ ನಿಟ್ಟಿನಲ್ಲಿ ಬಳ್ಳಾರಿಯಲ್ಲಿ ಇಂದು ಸಂಜೀವಿನಿ ಡಯಾಗ್ನಾಸ್ಟಿಕ್ ಸೆಂಟರ್​​ಗೆ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ ಚಾಲನೆ ನೀಡಿದರು.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ದೇಶದಲ್ಲಿರುವ ಎಲ್ಲಾ ಖಾಸಗಿ ಕೊರೊನಾ ಸೋಂಕು ಪರೀಕ್ಷಾ ಕೇಂದ್ರಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಅದೇ ನಿಟ್ಟಿನಲ್ಲಿ ಪರೀಕ್ಷಾ ಶುಲ್ಕ 4000 ನಿಗದಿ ಮಾಡಲಾಗಿದೆ.

ಶ್ವಾಸಕೋಶ ಸಂಬಂಧಿ ಸಮಸ್ಯೆ, ಉಸಿರಾಟದ ತೊಂದರೆ, ಜ್ವರ, ಕೆಮ್ಮಿನಿಂದಾಗಿ ಆಸ್ಪತ್ರೆಗೆ ದಾಖಲಾದ ಎಲ್ಲಾ ರೋಗಿಗಳಿಗೆ ಕೊರೊನಾ ವೈರಸ್ (ಕೋವಿಡ್ -19) ರೋಗ ನಿರ್ಧರಣಾ ಪರೀಕ್ಷೆ ನಡೆಸಲಾಗುತ್ತದೆ.

ಕೇವಲ ಒಂದೇ ದಿನದಲ್ಲಿ ಇಲ್ಲಿ ಫಲಿತಾಂಶ ನೀಡಲಾಗುತ್ತದೆ. ಬೆಂಗಳೂರು ಹೊರತುಪಡಿಸಿ ಬಳ್ಳಾರಿಯಲ್ಲಿ ಮೊದಲ ಖಾಸಗಿ ಲ್ಯಾಬೋರೇಟರಿ ಇದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.