ಬಳ್ಳಾರಿ: ನಗರದ ಮೋತಿ ವೃತ್ತದ ಬಳಿ ಪೇಸಿಎಂ ಪೋಸ್ಟರ್ ಅಂಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಬಳ್ಳಾರಿ ಜಿಲ್ಲಾ ಎಸ್‍ಪಿ ಸೈದುಲು ಅಡಾವತ್ ಅವರು, ರೈಲ್ವೆ ಇಲಾಖೆಗೆ ಸೇರಿದ ಕಂಪೌಂಡ್ ಮೇಲೆ ಅನುಮತಿ ಇಲ್ಲದೇ ಪೋಸ್ಟರ್ ಅಂಟಿಸುವ ಮೂಲಕ ಯಾವುದೇ ಸಂದರ್ಭದಲ್ಲಿ ಶಾಂತಿ ಭಂಗವಾಗುವ ಸಂಭವವಿದ್ದು, ಪೊಲೀಸ್ ಇಲಾಖೆಯ ಅಥವಾ ಪಾಲಿಕೆಯ ಅನುಮತಿ ಪಡೆಯದೆ ಸಾರ್ವಜನಿಕ ಸ್ಥಳವಾದ ರೈಲ್ವೆ ಇಲಾಖೆಯ ಕಾಂಪೌಂಡ್‍ಗೆ ಭಿತ್ತಿ ಪತ್ರ ಅಂಟಿಸಿ ಸೌಂದರ್ಯ ಹಾಳು ಮಾಡಲಾದ ಹಿನ್ನೆಲೆಯಲ್ಲಿ ಅಪರಿಚಿತರ ವಿರುದ್ಧ ಗಾಂಧಿನಗರ ಠಾಣೆಯಲ್ಲಿ ಐಪಿಸಿ 133/22, 1860, (ಯು/ಎಸ್290), 1951 ಮತ್ತು 1981(ಯು/ಎಸ್3) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಎನ್ಐಎ ದಾಳಿ ವೇಳೆ ಪಿಎಫ್ಐ ಮುಖಂಡರನ್ನು ವಶಕ್ಕೆ ಪಡೆದ ಬೆನ್ನಲ್ಲೇ ಬಳ್ಳಾರಿ ನಗರದ ಗಡಿಗಿ ಚೆನ್ನಪ್ಪ ವೃತ್ತದಲ್ಲಿ ಕಾರ್ಯಕರ್ತರು ದಿಢೀರ್ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನನ್ನು ಪಿಎಫ್ಐ ಕಾರ್ಯಕರ್ತರು ಥಳಿಸುವ ಮೂಲಕ ಪುಂಡಾಡಿಕೆ ಮಾಡಿದ ವಿಡಿಯೋ ವೈರಲ್ ಆಗಿತ್ತು. ಆಗ ಕಾರ್ಯಕರ್ತರ ವರ್ತನೆಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.
ಇದನ್ನೂ ಓದಿ: PAYCM ಪೋಸ್ಟರ್ ಪ್ರಕರಣ: ಐವರು ಕಾಂಗ್ರೆಸ್ ಕಾರ್ಯಕರ್ತರ ಬಂಧನ