ETV Bharat / state

ಬಾಲಕಿ ಗುದದ್ವಾರಕ್ಕೆ ಸುಡುವ ಗಂಜಿ ಸುರಿದ ಪಾಪಿ ತಂದೆ! - ಮಗಳ ಮೇಲೆ ತಂದೆಯಿಂದ ದೌರ್ಜನ್ಯ

ಪದೇ ಪದೆ ಮಲ ಮಾಡುತ್ತಾಳೆ ಎಂದು ಮಗಳ ಗುದದ್ವಾರಕ್ಕೆ ಪಾಪಿ ತಂದೆಯೊಬ್ಬ ಸುಡುವ ಗಂಜಿಯನ್ನು ಸುರಿದಿರುವ ಹೇಯ ಕೃತ್ಯ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ.

Father tortured his daughter
ಬಾಲಕಿ ಗುದದ್ವಾರಕ್ಕೆ ಸುಡುವ ಗಂಜಿ ಸುರಿದ ಪಾಪಿ ತಂದೆ
author img

By

Published : Jun 11, 2020, 5:39 PM IST

ಬಳ್ಳಾರಿ: ತಾಯಿ ಇಲ್ಲದ ತಬ್ಬಲಿಯಾಗಿರುವ ಬಾಲಕಿಯನ್ನ ಪೋಷಣೆ ಮಾಡಬೇಕಿದ್ದ ತಂದೆಯೇ, ಪದೇ ಪದೆ ಮಲ ಮಾಡುತ್ತಾಳೆ ಎಂದು ಮಗಳ ಗುದದ್ವಾರಕ್ಕೆ ಸುಡುವ ಗಂಜಿಯನ್ನು ಸುರಿದಿರುವ ಅಮಾನವೀಯ ಘಟನೆ ಜಿಲ್ಲೆಯ ಸಿರುಗುಪ್ಪ ಪಟ್ಟಣದಲ್ಲಿ ನಡೆದಿದೆ.

ಇತ್ತ ಪಕ್ಕದ ಮನೆಯ ಪಾಪಿಯೊಬ್ಬ ಇದೇ ಬಾಲಕಿಯ ಅಕ್ಕನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ತಾಯಿ ಇಲ್ಲದ ಈ ಇಬ್ಬರು ಬಾಲಕಿಯರ ಪಾಡು ದೇವರಿಗೆ ಪ್ರೀತಿ ಎಂಬಂತಾಗಿದೆ.

ಜಿಲ್ಲೆಯ ಸಿರುಗುಪ್ಪ ಪಟ್ಟಣದ ಡ್ರೈವರ್ ಕಾಲೋನಿಯಲ್ಲಿರುವ ಪಾಪಿಯೋರ್ವ ತಾಯಿ ಪ್ರೀತಿ ಕಾಣದ 3 ರಿಂದ 4 ವರ್ಷ ವಯೋಮಾನದ ಬಾಲಕಿಯರನ್ನು ರಕ್ಷಣೆ ಮಾಡೋದು ಬಿಟ್ಟು ಚಿತ್ರಹಿಂಸೆ ನೀಡಿದ್ದಾನೆ. ತನ್ನ ಕಿರಿಯ ಮಗಳು ಪದೇ ಪದೆ ಮಲ ವಿಸರ್ಜನೆ ಮಾಡುತ್ತಾಳೆ ಎಂದು ಸುಡುವ ಗಂಜಿಯನ್ನು ಗುದದ್ವಾರಕ್ಕೆ ಸುರಿದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬಾಲಕಿಯರಿಬ್ಬರಿಗೆ ರಕ್ಷಣೆ ಇಲ್ಲದಿರುವುದನ್ನು ಮನಗಂಡ ಪಕ್ಕದ ಮನೆಯ ನಿವಾಸಿ ಮೂರ್ತಿ ಎನ್ನುವ ವ್ಯಕ್ತಿ ಇದೇ ಬಾಲಕಿಯ ಅಕ್ಕನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ಕುರಿತು ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ಪ್ರಕರಣ ದಾಖಲಾಗಿವೆ.

ಬಾಲಕಿಯರಿಗೆ ಇಲ್ಲ ರಕ್ಷಣೆ:

ಈ ಎರಡು ಘಟನೆಗಳು ಲಾಕ್‌ಡೌನ್ ಸಂದರ್ಭದಲ್ಲೇ ಜರುಗಿವೆ. ಲಾಕ್​ಡೌನ್ ವೇಳೆ ಬಾಲ್ಯವಿವಾಹ ಪ್ರಕರಣಗಳ ಸಂಖ್ಯೆ ಅಧಿಕವಾಗಿತ್ತು. ಅದರ ಜತೆಗೆ ದೌರ್ಜನ್ಯ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗಿರುವ ಮಾಹಿತಿ ಹೊರಬಿದ್ದಿದೆ. ತಾಯಿ ಇಲ್ಲದ ಮಕ್ಕಳಿಗೆ ತಾಯಿಯಾಗಬೇಕಾದ ತಂದೆಯೇ ರಕ್ಷಣೆ ಒದಗಿಸದಿರುವುದು ನಾಗರೀಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.