ಬಳ್ಳಾರಿ: ಸಮಾಜದಲ್ಲಿನ ಜನರ ಸಮಸ್ಯೆಗಳಿಗೆ ಸಂಬಂಧಿತ ಸುದ್ದಿಗಳನ್ನು ಹೆಚ್ಚಾಗಿ ವರದಿ ಮಾಡುವ ಮೂಲಕ ಜನರಿಗೆ ಅನುಕೂಲಕರವಾದ ಕೆಲಸಗಳನ್ನು ಮಾಡಿ ಎಂದು ವರ್ಗಾವಣೆಗೊಂಡ ಪತ್ರಕರ್ತರಿಗೆ ಹಿರಿಯ ಪತ್ರಕರ್ತರಾದ ಅಹಿರಾಜ್ ಸಲಹೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿನ ಪತ್ರಿಕಾ ಭವನದಲ್ಲಿ ಇಂದು ಸಂಜೆ ವರ್ಗಾವಣೆಗೊಂಡ ಮೂವರು ಪತ್ರಕರ್ತರಿಗೆ ಜಿಲ್ಲಾ ಬಳ್ಳಾರಿ ಪತ್ರಕರ್ತರು ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಪತ್ರಕರ್ತರು ಉತ್ತಮವಾಗಿ ಸಂಪರ್ಕ ಹೊಂದಿರಬೇಕು ಮತ್ತು ಸಮಾಜದಲ್ಲಿನ ಜನರ ಸಮಸ್ಯೆಗಳಿಗೆ ಸಂಬಂಧಿಸಿದ ಹೆಚ್ಚಿನ ಸುದ್ದಿಗಳನ್ನು ವರದಿ ಮಾಡುವಂತೆ ಸಲಹೆ ನೀಡಿದರು.
ಜಿಲ್ಲೆಯಲ್ಲಿ ವಿವಿಧ ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸಿದ ನೂರುಲ್ಲಾ, ವೀರೇಶ್ ದಾನಿ, ಸುಭಾಷ್ ಚಂದ್ರ ಅವರಿಗೆ ಹಿರಿಯ ಪರ್ತಕರ್ತರು ಬೀಳ್ಕೊಟ್ಟರು. ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ವೀರಭದ್ರಗೌಡ, ಅಹೀರಾಜ್, ಕೆ.ಎಂ ಮಂಜುನಾಥ, ಸುರೇಶ್ ಚವ್ಹಾಣ್, ಪುರುಷೋತ್ತಮ ಹಂದ್ಯಾಲ್, ನರಸಿಂಹ ಮೂರ್ತಿ ಕುಲಕರ್ಣಿ, ಶ್ರೀನಿವಾಸ್, ದುರ್ಗೇಶ್, ಚಂದ್ರಶೇಖರ್ ಗೌಡ, ಕಿನ್ನೋರೇಶ್ವರ, ದಿವಾಕರ್ ರೆಡ್ಡಿ ಉಪಸ್ಥಿತರಿದ್ದರು.