ETV Bharat / state

ದೇಶದಲ್ಲಿ ಹೊಸ ತಳಿಯ ಜಿಗಣೆ-ಜಿರಳೆಗಳು ಜನಸಾಮಾನ್ಯರ ರಕ್ತ ಹೀರುತ್ತಿವೆ: ಉಗ್ರಪ್ಪ

author img

By

Published : Feb 26, 2021, 3:38 PM IST

ದೇಶದಲ್ಲಿ ಹೊಸ ತಳಿಯ ಜಿಗಣೆ-ಜಿರಳೆಗಳು ಇಂಧನ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯರ ರಕ್ತ ಹೀರುತ್ತಿವೆ ಎಂದು ವಿ.ಎಸ್.ಉಗ್ರಪ್ಪ ಕಿಡಿಕಾರಿದರು.

EX MP VS Ugarappa Press meet at Bellary
ಮಾಜಿ ಸಂಸದ ವಿ.ಎಸ್.ಉಗ್ರಪ್ಪ

ಬಳ್ಳಾರಿ: ಈ ದೇಶದಲ್ಲಿ ಹೊಸ ತಳಿಯ ಜಿಗಣೆ-ಜಿರಳೆಗಳು ಹುಟ್ಟಿಕೊಂಡಿವೆ. ಅವುಗಳು ಸಾರ್ವಜನಿಕರ ರಕ್ತ ಹೀರುತ್ತಿವೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ನಗರದ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಹೊಸ ತಳಿಯ ಜಿಗಣೆ-ಜಿರಳೆಗಳು ಇಂಧನ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯರ ರಕ್ತ ಹೀರುತ್ತಿವೆ. ಅವುಗಳನ್ನು ಅವಸಾನದ ಅಂಚಿನತ್ತ ಕೊಂಡೊಯ್ಯದಿದ್ದರೆ ದೇಶದ ಪ್ರಜಾ ತಾಂತ್ರಿಕ ವ್ಯವಸ್ಥೆಗೆ ಉಳಿಗಾಲವಿಲ್ಲ ಎಂದರು.

ಮಾಜಿ ಸಂಸದ ವಿ.ಎಸ್.ಉಗ್ರಪ್ಪ

ಓದಿ : ಕರ್ನಾಟಕದಲ್ಲಿ ಬಿಜೆಪಿಗೆ ಲೈಫ್ ಕೊಟ್ಟಿದ್ದು ನಾನೇ: ಕುಮಾರಸ್ವಾಮಿ

ರಾಜ್ಯದಿಂದ 2,500 ಲಕ್ಷ ಕೋಟಿ ರೂ.ಗಳ ಆದಾಯ ಕೇಂದ್ರ ಸರ್ಕಾರಕ್ಕೆ ಹೋಗುತ್ತದೆ. ಆದರೆ, ಕೇಂದ್ರ ಸರ್ಕಾರ ಮಾತ್ರ ಕೇವಲ 31 ಸಾವಿರ ಕೋಟಿ ರೂ. ರಾಜ್ಯಕ್ಕೆ ನೀಡುತ್ತಿದೆ. ತೈಲ, ಅನಿಲದಿಂದಲೇ 31 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹವಾಗುತ್ತಿದೆ. ಆದಾಯ ತೆರಿಗೆಯಿಂದ ಅಂದಾಜು ಸಾವಿರ ಕೋಟಿಗೂ ಅಧಿಕ ತೆರಿಗೆ ಸಂಗ್ರಹವಾಗುತ್ತಿದೆ.‌ ಆದರೆ, ಕೇಂದ್ರ ಸರ್ಕಾರ ಮಾತ್ರ ಕಡಿಮೆ ಅನುದಾನ ನೀಡಿ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ದೂರಿದರು.

ಮೋದಿಯಿಂದ ಸ್ವಾತಂತ್ರ್ಯ ಸೇನಾನಿಗೆ ಅವಮಾನ: ಅಹಮದಾಬಾದ್​ ಕ್ರೀಡಾಂಗಣದಿಂದ ಸರ್ದಾರ್ ವಲ್ಲಭಭಾಯ್​​ ಪಟೇಲರ ಹೆಸರು ತೆಗೆದು, ತಮ್ಮ ಹೆಸರಿಡುವ ಮೂಲಕ ಸ್ವಾತಂತ್ರ್ಯ ಚಳವಳಿಯ ಮುಂಚೂಣಿ ನಾಯಕನಿಗೆ ಮೋದಿ ಅವಮಾನ ಮಾಡಿದ್ದಾರೆ. ಕೂಡಲೇ ಪಟೇಲರ ಹೆಸರನ್ನು ಕ್ರೀಡಾಂಗಣಕ್ಕೆ ಮರು ನಾಮಕರಣ ಮಾಡಬೇಕು. ಇಲ್ಲದಿದ್ದರೆ ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ರೈತರಿಂದ ಎರಡನೇ ಸ್ವಾತಂತ್ರ್ಯ ಸಮರ: ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಮೊದಲನೇ ಸ್ವಾತಂತ್ರ್ಯ ಸಂಗ್ರಾಮ ಹೇಗೆ ನಡೆಯಿತೋ ಅದೇ ಮಾದರಿಯಲ್ಲಿ ದೇಶದ ನಿಜ ಸೇನಾನಿಗಳಾದ ರೈತಾಪಿ ವರ್ಗ ಕೇಂದ್ರ ಸರ್ಕಾರದ ವಿರುದ್ಧ ಎರಡನೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ನಾಂದಿ ಹಾಡುವ ಕಾಲ ಸನ್ನಿಹಿತವಾಗಿದೆ ಎಂದು ಉಗ್ರಪ್ಪ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.