ETV Bharat / state

ಡಿಎಂಎಫ್ ಅಡಿ ಪ್ರತಿ ವರ್ಷ 150 ಮಂದಿ ವಿದ್ಯಾರ್ಥಿಗಳಿಗೆ ಉಚಿತ ಐಎಎಸ್ ತರಬೇತಿ: ಡಿಸಿ ನಕುಲ್

ಉಚಿತವಾಗಿ ಐಎಎಸ್ ತರಬೇತಿ ನೀಡಲು ಜನವರಿ 3ರಂದು ಸರಳಾದೇವಿ ಕಾಲೇಜಿನಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಅದರಲ್ಲಿ ಉತ್ತಮ ಅಂಕ ಪಡೆದ 150 ಮಂದಿಯನ್ನು ಕೌನ್ಸೆಲಿಂಗ್ ಮೂಲಕ ಆಯ್ಕೆ ಮಾಡಿಕೊಂಡು ಅವರಿಗೆ ಉಚಿತವಾಗಿ ತರಬೇತಿ ನೀಡಲಾಗುವುದು ಎಂದು ಡಿಸಿ ಎಸ್.ಎಸ್.ನಕುಲ್ ಹೇಳಿದ್ದಾರೆ.

DC Nakul
ಡಿಸಿ ನಕುಲ್
author img

By

Published : Dec 26, 2020, 6:09 PM IST

ಬಳ್ಳಾರಿ:‌ ಜಿಲ್ಲಾ ಖನಿಜ ನಿಧಿಯನ್ನು ಬಳಸಿಕೊಂಡು ಪ್ರತಿ ವರ್ಷವೂ ಕೂಡ 150 ಮಂದಿ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡಲಾಗುವುದು ಎಂದು‌ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.

ಬಳ್ಳಾರಿ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ಐಎಎಸ್, ಐಪಿಎಸ್ ಮತ್ತು ಬ್ಯಾಂಕಿಂಗ್​ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇದರ ಮೊದಲ ಭಾಗವಾಗಿ ಜನವರಿ 3ರಂದು ಸರಳಾದೇವಿ ಕಾಲೇಜಿನಲ್ಲಿ ಪರೀಕ್ಷೆ ಮಾಡಲಾಗುತ್ತದೆ. ಅದರಲ್ಲಿ ಉತ್ತಮ ಅಂಕ ಪಡೆದ 150 ಮಂದಿಯನ್ನು ಕೌನ್ಸೆಲಿಂಗ್ ಮೂಲಕ ಆಯ್ಕೆ ಮಾಡಿಕೊಂಡು ಅವರಿಗೆ ಉಚಿತವಾಗಿ ತರಬೇತಿ ನೀಡಲಾಗುವುದು. ತರಬೇತಿ ಜೊತೆ ಜೊತೆಗೆ ತರಗತಿಗಳೂ ಕೂಡ ಜನವರಿ 15ರಿಂದಲೇ ಶುರುವಾಗಬಹುದು ಎಂದರು.

DC Nakul
ಜಿಲ್ಲಾಧಿಕಾರಿ ಎಸ್.ಎಸ್.ನಕುಲ್

ಈ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಬೇಕೆಂಬ ವಿದ್ಯಾರ್ಥಿಗಳಿಗೆ ಇದೊಂದು ಸದಾವಕಾಶ ಆಗಿದೆ. ಇದನ್ನು ಪ್ರತಿಯೊಬ್ಬರೂ ಸದ್ಬಳಕೆ‌‌‌ ಮಾಡಿಕೊಳ್ಳಬೇಕು. ಸತತ ಪ್ರಯತ್ನ ಹಾಗೂ ಮಾರ್ಗದರ್ಶನ ಸರಿಯಾಗಿದ್ದರೆ ಸಾಧನೆ ಮಾಡಲು ಸುಲಭವಾಗುತ್ತದೆ ಎಂದು ಹೇಳಿದರು.

ಇದೇ ವೇಳೆ ಎಸ್​ಪಿ ಸೈದುಲು ಅಡಾವತ್ ಮಾತನಾಡಿ, ನಾವು ಗ್ರಾಮೀಣ ಭಾಗದವರು, ನಮಗೆ ಇಂಗ್ಲಿಷ್​​ ಮಾತಾಡೋಕೆ ಬರಲ್ಲ. ಇನ್ನು ಐಎಎಸ್, ಐಪಿಎಸ್​​ನಂತಹ ಉನ್ನತ ಹುದ್ದೆಯನ್ನು ನಿರೀಕ್ಷಿಸಲು ಹೇಗೆ ಸಾಧ್ಯ ಎನ್ನುವ ನಿರುತ್ಸಾಹವನ್ನು ನಿಮ್ಮ ತಲೆಯಿಂದ ತೆಗೆದುಹಾಕಿ. ಜೀವನದಲ್ಲಿ ಏನಾದರೂ ಸಾಧನೆ ಮಾಡಲೇಬೇಕು. ನಾವು ಇತರರಿಗೆ ಮಾದರಿಯಾಗಬೇಕು ಎಂದುಕೊಂಡವರು ನಿರಂತರವಾಗಿ ಶ್ರಮ ವಹಿಸಿ, ಪ್ರತಿಕ್ಷಣ ನಿಮ್ಮ ಆ ಕನಸು ನನಸಾಗಲು ಕಷ್ಟಪಡಿ. ಆಗ ನಿಮ್ಮ ಗೆಲುವು ನಿಶ್ಚಯವಾಗುತ್ತದೆ ಎಂದು ವಿದ್ಯಾರ್ಥಿಗಳನ್ನ ಹುರಿದುಂಬಿಸಿದರು.

ಕಾರ್ಯಕ್ರಮದಲ್ಲಿ ಸರಳಾದೇವಿ ಕಾಲೇಜಿನ ಪ್ರಾಚಾರ್ಯ ಪ್ರೊ. ಹೇಮಣ್ಣ, ಉಪನ್ಯಾಸಕರಾದ ಪ್ರೊ. ಇಸ್ಮಾಯಿಲ್ ಮಕಾಂದರ, ಪ್ರೊ. ಟಿ.ವೀರಭದ್ರಪ್ಪ, ಪ್ರೊ. ಕೆ.ಬಸಪ್ಪ ಇದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.