ಬಳ್ಳಾರಿ: ಸೀಮಿತ ಜಾತಿ ಸಮುದಾಯಕ್ಕೊಂದು ನಿಗಮ ಮಂಡಳಿ ಸ್ಥಾಪಿಸೋದು ಅನಗತ್ಯ. ಅದರ ಬದಲಿಗೆ ಬಡ, ಬಗ್ಗರ ಸೇವೆಯೇ ಬಹುಮುಖ್ಯ ಎಂದು ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ಬಳ್ಳಾರಿಯ ಮಿಲ್ಲರ್ ಪೇಟೆಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಅಂಧತ್ವ ಮುಕ್ತ ಬಳ್ಳಾರಿ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೀಮಿತ ಜಾತಿ ಸಮುದಾಯಕ್ಕೊಂದು ನಿಗಮ ಮಂಡಳಿ ಸ್ಥಾಪಿಸಿದ್ದರ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಎಲ್ಲಾ ಜಾತಿ ಸಮುದಾಯಕ್ಕೊಂದು ನಿಗಮ ಮಂಡಳಿ ಸ್ಥಾಪಿಸಿ ಎಲ್ಲರನ್ನೂ ಕೂಡ ಮಂಡಳಿ ಅಧ್ಯಕ್ಷರನ್ನಾಗಿಸಲಿ ಎಂದು ಕೈಮುಗಿದು ಮುನ್ನಡೆದರು.
ಈ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ನಿಗಮ ಮಂಡಳಿಗಳಿಂದ ಆಗಲ್ಲ. ಬದಲಿಗೆ ನಾವೆಲ್ಲರೂ ನಿಸ್ವಾರ್ಥ ಸೇವೆ ಗೈದರೇ ಮಾತ್ರ ಅಭಿವೃದ್ಧಿಯಾಗಲು ಕಷ್ಟಸಾಧ್ಯವಾಗಲಿದೆ ಎಂದರು.