ETV Bharat / state

ಮನೆಗೆ ನುಗ್ಗಿದ ಒಳಚರಂಡಿ ನೀರು; ಸ್ಥಳದಲ್ಲೇ ಬೀಡುಬಿಟ್ಟು ಶಾಸಕ ರೆಡ್ಡಿ..!

ಶಾಸಕ ಜಿ.ಸೋಮಶೇಖರರೆಡ್ಡಿ ಸ್ಥಳೀಯರು ಮೆಚ್ಚುವಂತಹ ಕೆಲಸ ಮಾಡಿದ್ದಾರೆ. ಜಲಾವೃತಗೊಂಡಿರುವ ಸ್ಥಳಕ್ಕೆ ಬಂದ ಶಾಸಕರು ಶುಚಿಗೊಳಿಸಿ ಮಾದರಿಯಾಗಿದ್ದಾರೆ. ಅಲ್ಲದೆ ಇದೇ ವೇಳೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕ್ಲಾಸ್ ಸಹ ತೆಗೆದುಕೊಂಡಿದ್ದಾರೆ.

ಸ್ಥಳದಲ್ಲೇ ಬೀಡುಬಿಟ್ಟು ಶಾಸಕ
author img

By

Published : Sep 3, 2019, 2:33 PM IST

ಬಳ್ಳಾರಿ: ಇಲ್ಲಿನ ಗಣೇಶ ಕಾಲೋನಿಯ ಹತ್ತಾರು ಮನೆಗಳಲ್ಲಿ ಒಳಚರಂಡಿಯ ನೀರು ನುಗ್ಗಿರುವ ಮಾಹಿತಿ ಪಡೆದ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ, ಬೆಳ್ಳಂಬೆಳಗ್ಗೆಯೇ ಸ್ಥಳಕ್ಕಾಗಮಿಸಿ ಶುಚಿಗೊಳಿಸಿದ್ದಾರೆ. ಶಾಸಕರ ಕಾರ್ಯಕ್ಕೆ ಕಾಲೋನಿಯ ನಿವಾಸಿಗಳು ಮಚ್ಚುಗೆ ವ್ಯಕ್ತಪಡಿಸಿದ್ದಾರೆ.

ಒಳಚರಂಡಿಯ ಪೈಪ್​ಲೈನ್ ಒಡೆದು ಅಲ್ಲಿನ ತಗ್ಗು ಪ್ರದೇಶದ ಮನೆಗಳಲ್ಲಿ ಜಲಾವೃತಗೊಂಡಿತ್ತು. ಕೆಲವರು ಅದೇ ಬೀದಿಯಲ್ಲಿ ಓಡಾಡುತ್ತಿದ್ದರು. ಈ ದೃಶ್ಯವನ್ನು‌ ಕಂಡ ಶಾಸಕರು, ಮಮ್ಮಲ ಮರುಗಿದ್ದಾರೆ. ಅಲ್ಲದೆ ಕುಪಿತಗೊಂಡ ಶಾಸಕ ರೆಡ್ಡಿ, ಪಾಲಿಕೆ ಆಯುಕ್ತೆಗೆ ಕ್ಲಾಸ್ ಸಹ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತದೆ.

ಜಲಾವೃತ ಆದ ಮನೆಯ ಕಟ್ಟೆಯ ಮೇಲೆ ಕುಳಿತ ರೆಡ್ಡಿ:

ಒಳಚರಂಡಿ ಜಲಾವೃತಗೊಂಡ ಮನೆಯ ಮುಂಭಾಗದ ಕಟ್ಟೆಯ ಮೇಲೆ ಕುಳಿತಕೊಂಡ ಶಾಸಕ ರೆಡ್ಡಿ, ಪಾಲಿಕೆಯ ಅಧಿಕಾರಿ ಮತ್ತು ಸಿಬ್ಬಂದಿಯವರ ಶುಚಿತ್ವ ಕಾರ್ಯವನ್ನು ವೀಕ್ಷಣೆ ಮಾಡಿದ್ದಾರೆ. ಕ್ಲಾಸ್ ತೆಗೆದುಕೊಂಡ ಹಿನ್ನೆಲೆ ಆಯುಕ್ತೆ ತುಷಾರಮಣಿ ಸಹ ವಾಹನಗಳನ್ನು ತರಿಸಿ ಕ್ಲೀನ್ ಮಾಡಲು ಮುಂದಾದರು.

ಒಳಚರಂಡಿಯ ನೀರು ನುಗ್ಗಿರುವ ದೃಶ್ಯ

ಈ ವೇಳೆ ಮಾತನಾಡಿದ ಸೋಮಶೇಖರ ರೆಡ್ಡಿ, ಒಳಚರಂಡಿಯ ನೀರು ‌ಮನೆಗೆ‌ ನುಗ್ಗಲು ಪಾಲಿಕೆ ನಿರ್ಲಕ್ಷ್ಯವೇ ಕಾರಣ ಎಂದು ದೂರಿದ್ದಾರೆ.

ಒಳಚರಂಡಿ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. 1978ರಲ್ಲಿ ನಿರ್ಮಾಣ ಮಾಡಿದ ಒಳಚರಂಡಿ ವ್ಯವಸ್ಥೆ ಇದು. ಈವರೆಗೂ ಯಾವುದೇ ಅಪ್​ಗ್ರೇಡ್ ಮಾಡಿಲ್ಲ. ಜನಸಂಖ್ಯಾವಾರು ಒಳಚರಂಡಿ ವ್ಯವಸ್ಥೆ ಮಾಡುವಲ್ಲಿ ವಿಫಲವಾಗಿದ್ದಾರೆ. ಅಮೃತ ಯೋಜನೆ ಅಡಿಯಲ್ಲಿ ಹೆಚ್ಚುವರಿ ಅನುದಾನಕ್ಕೆ ಮನವಿ ಮಾಡುವೆ. ಮುಖ್ಯಮಂತ್ರಿಗಳಿಂದ ಹೆಚ್ಚುವರಿ ಅನುದಾನ ತರುವೆ. ಒಳಚರಂಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡಿಸುವೆ. ಚರಂಡಿ ನೀರನ್ನು ಸ್ವಚ್ಛ ಮಾಡಲಾಗುತ್ತಿದೆ. ಸಂಪೂರ್ಣ ‌ಕ್ಲೀನ್ ಆಗೋವರೆಗೂ ಸ್ಥಳ ಬಿಟ್ಟು ‌ಹೋಗೋಲ್ಲ ಎಂದಿದ್ದಾರೆ.

Intro:ಒಳಚರಂಡಿ ಮನೆಗಳಲ್ಲಿ ಜಲಾವೃತ: ಸ್ಥಳದಲ್ಲೇ ಬೀಡುಬಿಟ್ಟು ಚರಂಡಿ ನೀರನ್ನು ಶುಚಿತ್ವಗೊಳಿಸಿದ ಶಾಸಕ ರೆಡ್ಡಿ!
ಬಳ್ಳಾರಿ: ಇಲ್ಲಿನ ಗಣೇಶ ಕಾಲೊನಿಯ ಹತ್ತಾರು ಮನೆಗಳಲ್ಲಿ ಒಳಚರಂಡಿ ಜಲಾವೃತಗೊಂಡಿರುವ ಮಾಹಿತಿಯನ್ನು ಪಡೆದ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿಯವ್ರು ಬೆಳ್ಳಂ
ಬೆಳ್ಳಿಗೆಯೇ ಸ್ಥಳಕ್ಕಾಗಮಿಸಿ, ಶುಚಿತ್ವಗೊಳಿಸುವ ಕಾರ್ಯಕ್ಕೆ
ಶಾಸಕ ರೆಡ್ಡಿಯವರು ಆ ಕಾಲೊನಿಯ ನಿವಾಸಿಗಳ ವಿಶೇಷ
ಗಮನ ಸೆಳೆದಿದ್ದಾರೆ.
ಒಳಚರಂಡಿಯ ಪೈಪ್ ಲೈನ್ ಒಡೆದು ಅಲ್ಲಿನ ತಗ್ಗು ಪ್ರದೇಶದ ಮನೆಗಳಲ್ಲಿ ಜಲಾವೃತಗೊಂಡಿದ್ದು, ಅದರಿಂದ ಕೆಲವರು ಬೀದಿ ಯಲ್ಲೇ ಜೀವನ ಸಾಗಿಸುವ ದೃಶ್ಯವನ್ನು‌ ಕಂಡ ಶಾಸಕ ರೆಡ್ಡಿಯವರು ಮಮ್ಮಲ ಮರಗಿದ್ದಾರೆ. ಅದರಿಂದ ಕುಪಿತಗೊಂಡ ಶಾಸಕ ರೆಡ್ಡಿ, ಪಾಲಿಕೆ ಆಯುಕ್ತೆಗೆ ಭರ್ಜರಿ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತದೆ.
ಜಲಾವೃತ ಆದ ಮನೆಯ ಕಟ್ಟೆಯ ಮೇಲೆ ಕುಳಿತ ರೆಡ್ಡಿ: ಒಳಚರಂಡಿ ಜಲಾವೃತಗೊಂಡ ಮನೆಯ ಮುಂಭಾಗದ ಕಟ್ಟೆಯ ಮೇಲೆನೇ ಕುಳಿತಕೊಂಡ ಶಾಸಕ ರೆಡ್ಡಿಯವರು, ಪಾಲಿಕೆಯ ಅಧಿಕಾರಿ ಮತ್ತು ಸಿಬ್ಬಂದಿಯವ್ರ ಶುಚಿತ್ವಕಾರ್ಯವನ್ನು ವೀಕ್ಷಣೆ ಮಾಡಿದ್ದಾರೆ ಅವರು.
ನಗರದಲ್ಲಿ ಪದೇ, ಪದೇ, ಯುಜಿಡಿ ಸಮಸ್ಯೆ ಪರಿಹಾರಕ್ಕೆ ಒತ್ತಾಯ ಮಾಡಿ, ಕ್ಲಾಸ್ ತೆಗೆದುಕೊಂಡ ಹಿನ್ನೆಲೆ, ವಾಹನಗಳನ್ನು ತರಿಸಿ, ಕ್ಲೀನ್ ಮಾಡಲು ಮುಂದಾದ ಪಾಲಿಕೆ ಆಯುಕ್ತೆ ತುಷಾರಮಣಿ.
ಇನ್ನು ಈ ವೇಳೆ ಮಾತನಾಡಿದ ಶಾಸಕ ಸೋಮಶೇಖರರೆಡ್ಡಿ ಅವರು, ಒಳಚರಂಡಿಯ ನೀರು ‌ಮನೆಗೆ‌ ನುಗ್ಗಲು, ಪಾಲಿಕೆ ನಿರ್ಲಕ್ಷ್ಯವೇ ಕಾರಣವೆಂದು ದೂರಿದ್ದಾರೆ.
Body:ಒಳಚರಂಡಿ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದ್ದು, 1978ರಲ್ಲಿ ನಿರ್ಮಾಣ ಮಾಡಿದ ಒಳಚರಂಡಿ ವ್ಯವಸ್ಥೆ ಇದಾಗಿದೆ. ಈವರೆಗೂ ಯಾವುದೇ ಅಪ್ ಗ್ರೇಡ್ ಮಾಡಿಲ್ಲ. ಜನಸಂಖ್ಯಾವಾರು ಒಳಚರಂಡಿ ವ್ಯವಸ್ಥೆ ಮಾಡುವಲ್ಲಿ ವಿಫಲವಾಗಿದ್ದಾರೆ. ಅಮೃತ ಯೋಜನೆ ಅಡಿಯಲ್ಲಿ ಹೆಚ್ಚುವರಿ ಅನುದಾನಕ್ಕೆ ಮನವಿ ಮಾಡುವೆ. ಮುಖ್ಯಮಂತ್ರಿಗಳಿಂದ ಹೆಚ್ಚುವರಿ ಅನುದಾನ
ತರುವೆ. ಒಳಚರಂಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡಿಸುವೆ.
ಚರಂಡಿ ನೀರನ್ನು ಸ್ವಚ್ಛ ಮಾಡಲಾಗುತ್ತಿದೆ. ಸಂಪೂರ್ಣ ‌ಕ್ಲೀನ್ ಆಗೋವರೆಗೂ ಸ್ಥಳ ಬಿಟ್ಟು ‌ಹೋಗೋಲ್ಲ ಎಂದಿದ್ದಾರೆ ಶಾಸಕ ಸೋಮಶೇಖರ ರೆಡ್ಡಿ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_2_UNDER_DRINEGE_LIKEGE_MLA_REDY_VISIT_VISUALS_7203310

KN_BLY_2a_UNDER_DRINEGE_LIKEGE_MLA_REDY_VISIT_VISUALS_7203310

KN_BLY_2b_UNDER_DRINEGE_LIKEGE_MLA_REDY_VISIT_VISUALS_7203310

KN_BLY_2c_UNDER_DRINEGE_LIKEGE_MLA_REDY_VISIT_VISUALS_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.