ETV Bharat / state

ಬಳ್ಳಾರಿಯಲ್ಲಿ ಜಿಲ್ಲಾ ಮಟ್ಟದ ಶ್ವಾನ ಪ್ರದರ್ಶನ ಮೇಳ..! - ಶ್ವಾನ ಪ್ರದರ್ಶನ

ಬಳ್ಳಾರಿಯಲ್ಲಿ ಶ್ವಾನ ಪ್ರದರ್ಶನ ಮೇಳ ಆಯೋಜಿಸಲಾಗಿದ್ದು, ಸೈಬೀರಿಯನ್ ಹಸ್ಕಿ, ಗ್ರೇಟ್ ಡೇನ್, ಸೇಂಟ್ ಬರ್ನಾರ್ಡ್, ಪಗ್, ಅಕಿಟಾ, ರಾಟ್ ವೀಲರ್, ಗೋಲ್ಡನ್ ರಿಟ್ರೈವರ್, ಡ್ಯಾಶ್ ಹೌಂಡ್, ಡಾಬರ್ ಮನ್ ಸೇರಿದಂತೆ 21 ತಳಿಯ ಶ್ವಾನಗಳು ಭಾಗಿಯಾಗಿದ್ದವು.

bellary
ಬಳ್ಳಾರಿಯಲ್ಲಿ ಜಿಲ್ಲಾ ಮಟ್ಟದ ಶ್ವಾನ ಪ್ರದರ್ಶನ ಮೇಳ..!
author img

By

Published : Feb 27, 2021, 2:42 PM IST

ಬಳ್ಳಾರಿ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಶ್ವಾನ ಪ್ರದರ್ಶನ ಮೇಳವನ್ನು ಆಯೋಜಿಸಲಾಗಿತ್ತು. ಜಿಲ್ಲಾ ಪಂಚಾಯಿತಿ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಹಾಗೂ ಕರ್ನಾಟಕ ಪಶು ವೈದ್ಯಕೀಯ ಸಂಘದ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಬಳ್ಳಾರಿಯಲ್ಲಿ ಜಿಲ್ಲಾ ಮಟ್ಟದ ಶ್ವಾನ ಪ್ರದರ್ಶನ ಮೇಳ..!

ಶ್ವಾನ ಪ್ರದರ್ಶನದಲ್ಲಿ ದೇಶಿಯ- ವಿದೇಶಿ ತಳಿಯ ನೂರಾರು ಶ್ವಾನಗಳು ಭಾಗಿಯಾಗಿವೆ. ಸೈಬೀರಿಯನ್ ಹಸ್ಕಿ, ಗ್ರೇಟ್ ಡೇನ್, ಸೇಂಟ್ ಬರ್ನಾರ್ಡ್, ಪಗ್, ಅಕಿಟಾ, ರಾಟ್ ವೀಲರ್, ಗೋಲ್ಡನ್ ರಿಟ್ರೈವರ್, ಡ್ಯಾಶ್ ಹೌಂಡ್, ಡಾಬರ್ ಮನ್ ಸೇರಿದಂತೆ 21 ತಳಿಯ ಶ್ವಾನಗಳು ಈ ಮೇಳದಲ್ಲಿ ಪಾಲ್ಗೊಂಡಿದ್ದವು.

2017 ರಲ್ಲೂ ಹಂಪಿ ಉತ್ಸವದ ನಿಮಿತ್ತ ಹೊಸಪೇಟೆಯಲ್ಲಿ ರಾಜ್ಯಮಟ್ಟದ ಶ್ವಾನ ಪ್ರದರ್ಶನ ಮೇಳ ಆಯೋಜಿಸಲಾಗಿತ್ತು. ‌ಅದರಲ್ಲಿ ರಾಜ್ಯದ ನಾನಾ ತಳಿಯ 175 ಕ್ಕೂ ಅಧಿಕ ಶ್ವಾನಗಳು ಪಾಲ್ಗೊಂಡಿದ್ದವು. ಚಾಂಪಿಯನ್ ಶಿಪ್ ಆಫ್ ದಿ ಡಾಗ್ ಬಹುಮಾನವನ್ನೂ ನೀಡಲಾಗಿತ್ತು.

ಆದರೆ, ಈ ಬಾರಿ ಪ್ರದರ್ಶನವನ್ನು ಕೇವಲ ಗಣಿನಾಡು ಬಳ್ಳಾರಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಈ ಬಾರಿ ಪ್ರಥಮ 7,000 ರೂ., ದ್ವಿತೀಯ- 5,000 ರೂ., ಹಾಗೂ ತೃತೀಯ- 2,500 ರೂ.ಗಳ ನಗದು ಬಹುಮಾನ ನೀಡಿ ಚಾಂಪಿಯನ್ ಶಿಪ್ ಆಫ್ ದಿ ಡಾಗ್ ಎಂಬ ಪದಕ ನೀಡಲಾಗುತ್ತದೆ. ಎಲ್ಲ ತಳಿಯ ಶ್ವಾನಗಳಿಗೆ ಪ್ರಶಸ್ತಿ ಪತ್ರಗಳನ್ನ ನೀಡಿ ಗೌರವಿಸಲಾಗುತ್ತದೆ. ಶ್ವಾನ ಪ್ರೇಮಿಗಳನ್ನ‌‌‌ ಪ್ರೋತ್ಸಾಹಿಸೋದು ಇದರ ಉದ್ದೇಶ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಬಿ.ಎಲ್. ಪರಮೇಶ್ವರ ನಾಯ್ಕ ತಿಳಿಸಿದ್ದಾರೆ.
ಜಿಲ್ಲಾ ಮಟ್ಟದ ಶ್ವಾನ ಪ್ರದರ್ಶನ ಮೇಳದಲ್ಲಿ ಅಂದಾಜು 56 ಶ್ವಾನಗಳು ಭಾಗಿಯಾಗಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.