ಬಳ್ಳಾರಿ: ಮಹಾಮಾರಿ ಕೊರೊನಾ ಎರಡನೇ ಅಲೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗಣಿನಾಡು ಬಳ್ಳಾರಿ - ವಿಜಯನಗರ ಜಿಲ್ಲೆಗಳಲ್ಲಿ ವೈದ್ಯರ ಕೊರತೆ ನೀಗಿಸುವಲ್ಲಿ ಜಿಲ್ಲಾಡಳಿತ ಶತಾಯಗತಾಯ ಪ್ರಯತ್ನ ನಡೆಸಿದೆಯಾದ್ರೂ ನುರಿತ ವೈದ್ಯರ ಸೇವೆ ಮಾತ್ರ ಅಲಭ್ಯವಾಗಿದೆ.
ಮಹಾಮಾರಿ ಕೋವಿಡ್ ಸೋಂಕು ನಿಯಂತ್ರಿಸಲು ಹೆಚ್ಚುವರಿ ವೈದ್ಯರ ಅಗತ್ಯತೆ ಇದೆ ಎಂಬ ಕಟು ಸತ್ಯವನ್ನ ಅರಿತಕೊಂಡ ಜಿಲ್ಲಾಡಳಿತ, ಮುಂದಿನ 11 ತಿಂಗಳ ಅವಧಿಗೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ನುರಿತ ವೈದ್ಯರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದೆ. ಈವರೆಗೂ ಕೇವಲ ಮುರ್ನಾಲ್ಕು ಮಂದಿ ವೈದ್ಯರು ಮಾತ್ರ ಈ ಸೇವೆಯಲ್ಲಿ ಮುಂದುವರೆಯಲು ಮುಂದೆ ಬಂದಿದ್ದಾರೆ. ಅರ್ಜಿ ಸಲ್ಲಿಸಲು ಈ ದಿನವೇ ಕೊನೆಯ ದಿನವಾಗಿದ್ದು, ಬೆರಳೆಣಿಕೆಯಷ್ಟು ವೈದ್ಯರು ಮುಂದೆ ಬಂದಿರೋದು ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಉಭಯ ಜಿಲ್ಲೆಗಳಲ್ಲಿ ಕೇವಲ 48 ಮಂದಿ ಮಾತ್ರ ನುರಿತ ವೈದ್ಯರು ಲಭ್ಯವಿರೋದು ಕೂಡ ಜಿಲ್ಲಾಡಳಿತಕ್ಕೆ ಕೋವಿಡ್ ವೇಗದ ಮಿತಿಗೆ ಬ್ರೇಕ್ ಹಾಕೋದು ಹೇಗೆ? ಎಂಬ ಪ್ರಶ್ನೆ ಉದ್ಭವಿಸಿದೆ. ಅಂದಾಜು 4 ಲಕ್ಷ ರೂ.ಗಳ ಮಾಸಿಕ ಪ್ಯಾಕೇಜ್ ಘೋಷಣೆ ಮಾಡಿದ್ರೂ ಕೂಡ ವೈದ್ಯರು ಎರಡನೇ ಅಲೆಯ ಕೋವಿಡ್ ಸೇವೆಗೆ ಮುಂದಾಗುತ್ತಿಲ್ಲ. ಇದು ಕೂಡ ಒಂದು ರೀತಿಯ ಭಯ ಹುಟ್ಟಿಸಿದೆ. ಹೀಗಾಗಿ ಈವರೆಗೂ ಕೇವಲ ನಾಲ್ಕೇ ಮಂದಿ ನುರಿತ ವೈದ್ಯರು ಹಾಗೂ ಆರೇಳು ಮಂದಿ ಎಂಬಿಬಿಎಸ್ ಪದವೀಧರರು ಮುಂದಾಗಿದ್ದಾರೆ. ಆ ಎಲ್ಲ ಅರ್ಜಿಗಳನ್ನ ಫೈನಲ್ ಮಾಡೋ ಹಂತಕ್ಕೆ ಜಿಲ್ಲಾಡಳಿತ ಬಂದಿದ್ದು, ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದ್ ಸಿಂಗ್ ವೈದ್ಯರ ಹುದ್ದೆಗಳ ನೇಮಕಾತಿಯಲ್ಲಿ ಬಂದಂತಹ ಅರ್ಜಿಗಳನ್ನ ಫೈನಲ್ ಮಾಡುವಂತೆ ಸೂಚಿಸಿದ್ದಾರೆ.
20 ಹುದ್ದೆಗಳು:
ಫಿಜಿಷಿಯನ್/ ಶ್ವಾಸಕೋಶ ತಜ್ಞರು (ಎಂಬಿಬಿಎಸ್ ಸ್ನಾತಕೋತ್ತರ ಪದವಿ/ ಡಿಪ್ಲೋಮಾ (ಜನರಲ್ ಮೆಡಿಸಿನ್ ಅಥವಾ ತಜ್ಞತೆಗೆ ಅನುಸಾರವಾಗಿ). ಮಾಸಿಕ ವೇತನ-4 ಲಕ್ಷ ರೂ., 15 ಹುದ್ದೆಗಳು- ಅರವಳಿಕೆ ತಜ್ಞರು ಎಂಬಿಬಿಎಸ್ /ಸ್ನಾತಕೋತ್ತರ ಪದವಿ ಅಥವಾ ಡಿಪ್ಲೋಮಾ ಇನ್ ಅನಸ್ತೇಷಿಯಾ (ತಜ್ಞತೆಗೆ ಅನುಸಾರ) ಮಾಸಿಕ ವೇತನ- 4 ಲಕ್ಷ ರೂ.
30 ಹುದ್ದೆಗಳು:
ವೈದ್ಯರು - ಎಂಬಿಬಿಎಸ್ ಪದವೀಧರರಾಗಿಬೇಕು. ಮಾಸಿಕ ವೇತನ- 75,000 ರೂ.
ಇದನ್ನೂ ಓದಿ:ಕೋವಿಡ್: ಆಸ್ಪತ್ರೆ ಆವರಣದಲ್ಲಿ ಸೋಂಕಿತರ ಸಂಬಂಧಿಕರ ಪರದಾಟ