ETV Bharat / state

ಬಳ್ಳಾರಿಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ವೇಳಾಪಟ್ಟಿ‌ ಮರು ನಿಗದಿ.. - corona effect in Karnataka

ಈ ಮುಂಚೆ ಸಂಜೆ 5 ರಿಂದ 7ರವರೆಗೆ ಖರೀದಿಗೆ ಅವಕಾಶ ನೀಡಲಾಗಿದ್ದ ಆದೇಶವನ್ನು ರದ್ದುಪಡಿಸಲಾಗಿದೆ. ಬೆಳಗ್ಗೆಯಷ್ಟೇ ಖರೀದಿ ಮಾಡಬೇಕು ಎಂದು ಆದೇಶ ಹೊರಡಿಸಿದ್ದಾರೆ.

Do not reschedule the purchase of essential items in Bellary
ಬಳ್ಳಾರಿಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ವೇಳಾಪಟ್ಟಿ‌ ಮರುನಿಗದಿ
author img

By

Published : Apr 2, 2020, 9:54 AM IST

ಬಳ್ಳಾರಿ : ಅಗತ್ಯ ವಸ್ತುಗಳ ಖರೀದಿಗೆ ಅತ್ಯಂತ ಅವಶ್ಯಕತೆ ಇದ್ದರೇ ಬೆಳಗ್ಗೆ 7 ರಿಂದ 11ರವರೆಗೆ ಮಾತ್ರ ಹೊರಬಂದು ಖರೀದಿಸಿ. ಇಲ್ಲದಿದ್ರೆ ಮನೆಯಲ್ಲಿಯೇ ಕ್ಷೇಮವಾಗಿರಿ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ಆದೇಶ ಹೊರಡಿಸಿದ್ದಾರೆ.

ಈ ಮುಂಚೆ ಸಂಜೆ 5 ರಿಂದ 7ರವರೆಗೆ ಖರೀದಿಗೆ ಅವಕಾಶ ನೀಡಲಾಗಿದ್ದ ಆದೇಶವನ್ನು ರದ್ದುಪಡಿಸಲಾಗಿದೆ. ಬೆಳಗ್ಗೆಯಷ್ಟೇ ಖರೀದಿ ಮಾಡಬೇಕು ಎಂದು ಆದೇಶ ಹೊರಡಿಸಿದ್ದಾರೆ. ಜಿಲ್ಲೆಯ ಹೊಸಪೇಟೆಯಲ್ಲಿ ಎರಡು ದಿನಗಳ ಹಿಂದೆ ಮೂರು ಪಾಸಿಟಿವ್ ಪ್ರಕರಣ ಕಂಡು ಬಂದ ಹಿನ್ನೆಲೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಈ ಸಮಯವನ್ನು ಮರುನಿಗದಿಪಡಿಸಲಾಗಿದೆ.

ಸರ್ಕಾರದ ಆದೇಶದಂತೆ ಅಗತ್ಯ ವಸ್ತುಗಳಾದ ತರಕಾರಿ, ಹಣ್ಣು, ದಿನಸಿ ವಸ್ತುಗಳು, ಮಾಂಸ, ಮೀನು ಇವುಗಳನ್ನು ಮರುನಿಗದಿಪಡಿಸಿದ ಸಮಯದಲ್ಲಿ ಮಾತ್ರ ಖರೀದಿ ಮತ್ತು ವ್ಯಾಪಾರ ಮಾಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಈ ಆದೇಶವು ಎ.2 ರಿಂದ ಜಾರಿಯಲ್ಲಿರುತ್ತದೆ. ವಾಹನಗಳಿಗೆ ನೀಡಲಾದ ವಿನಾಯಿತಿ ಪಾಸ್‌ಗಳೂ ಮುಂದುವರಿಯಲಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Do not reschedule the purchase of essential items in Bellary
ಬಳ್ಳಾರಿಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ವೇಳಾಪಟ್ಟಿ‌ ಮರುನಿಗದಿ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.