ಬಳ್ಳಾರಿ: ಪೌರತ್ವ ಕಾಯಿದೆ ತಿದ್ದುಪಡಿ ವಿರೋಧಿಸಿ ಜಿಲ್ಲಾ ನಾಗರಿಕರ ಸಮಿತಿಯು ಕೈಗೊಂಡಿದ್ದ ಪ್ರತಿಭಟನೆಯಲ್ಲಿ ಪೊಲೀಸ್ ಮತ್ತು ಕಾರ್ಯಕರ್ತರ ನಡುವೆ ವಾಗ್ವಾದ ತಾರಕ್ಕೇರುವುದನ್ನು ಸೂಕ್ಷ್ಮವಾಗಿ ಗಮನಿಸಿದ ಎಸ್ಪಿ ಸಿ.ಕೆ. ಬಾಬಾ ಅವರು ಬಹಳ ಸಾವಧಾನವಾಗಿ ನಿಭಾಯಿಸಿದ ಪ್ರಸಂಗ ನಡೆಯಿತು.
ಬಳ್ಳಾರಿಯ ಮೋತಿ ವೃತ್ತದ ಬಳಿ ನಿನ್ನೆ ದಿನ ನಡೆದ ಬೃಹತ್ ಪ್ರತಿಭಟನಾ ಮೆರವಣಿಗೆ ನಿಮಿತ್ತ ಪೊಲೀಸರ ಹಾಗೂ ಕಾರ್ಯ ಕರ್ತರ ನಡುವೆ ವಾಗ್ವಾದ ನಡೆದಿತ್ತು. ಅಲ್ಲೇ ಇದ್ದ ಎಸ್ಪಿ ಬಾಬಾ ಅವರು, ಅದನ್ನ ಸೂಕ್ಷ್ಮವಾಗಿ ಗಮನಿಸಿ ವಾಗ್ವಾದವನ್ನು ತಹಬದಿಗೆ ತರುವಲ್ಲಿ ಯಶಸ್ವಿಯಾದರು.
ಜಿಲ್ಲೆಯ ಪೊಲೀಸರಿಗೆ ಬಳ್ಳಾರಿ ಎಸ್ಪಿ ಮುಂದೆಯೇ ಪೊಲೀಸ್ ಚೋರ್ ಹೈ ಎಂದು ಕೆಲ ಕಿಡಿಗೇಡಿಗಳು ಘೋಷಣೆ ಕೂಗಿದರು.ಪೊಲೀಸ್ ವಾಲಾ ಬಡ್ವಾ ಹೈ, ಪೊಲೀಸ್ ಬಡ್ವಾ ಹೈ ಅಂತಾ ಎಸ್ಪಿ ಮುಂದೆ ಪ್ರತಿಭಟನಾಕಾರರು ಚೀರಾಡಿದರು. ಕೂಡಲೇ ಅಲ್ಲಿಗೆ ಆಗಮಿಸಿದ ಎಸ್ಪಿ ಸಿ.ಕೆ ಬಾಬಾ ವಾರ್ನಿಂಗ್ ಮಾಡಿದ್ದು, ಪರಿಸ್ಥಿತಿ ತಿಳಿ ಮಾಡಿದರು.