ETV Bharat / state

ಸಮಾಜ ಕಲ್ಯಾಣ ಇಲಾಖೆಯಿಂದ ಹೊರ ರಾಜ್ಯಗಳ ಕಾರ್ಮಿಕರಿಗೆ ರೇಷನ್ ಕಿಟ್ ವಿತರಣೆ

ಈಟಿವಿ ಭಾರತ ವರದಿಯಿಂದ ಎಚ್ಚೆತ್ತುಕೊಂಡ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಎನ್.ರಾಜಪ್ಪ, ಲಾರಿ ಟ್ರಾನ್ಸ್ ಪೋರ್ಟ್​ವೊಂದರಲ್ಲಿದ್ದ ಲಾರಿ ಚಾಲಕರು ಹಾಗೂ ಕ್ಲೀನರ್​ಗಳನ್ನು ಭೇಟಿಯಾಗಿ ರೇಷನ್ ಕಿಟ್ ವಿತರಿಸಿದರು.

Distribution of ration kit
ರೇಷನ್ ಕಿಟ್ ವಿತರಣೆ
author img

By

Published : Apr 11, 2020, 9:46 AM IST

ಬಳ್ಳಾರಿ: ಲಾಕ್‌ಡೌನ್‌ನಿಂದಾಗಿ ನೆರೆಹೊರೆಯ ರಾಜ್ಯಗಳಿಂದ ಬಂದು ಗಣಿನಗರಿಯ ಹೊರವಲಯದ ಹಲಕುಂದಿಯ ನಿರ್ಜನ ಪ್ರದೇಶವೊಂದರಲ್ಲಿ ಲಾರಿಯಲ್ಲೇ ದಿನ ದೂಡುತ್ತಿರುವ ಹೊರ ರಾಜ್ಯಗಳ ಕಾರ್ಮಿಕರಿಗೆ ಸಮಾಜ ಕಲ್ಯಾಣ ಇಲಾಖೆ ನೆರವಿಗೆ ಬಂದಿದೆ. ಲಾರಿ ಚಾಲಕರು ಮತ್ತು ಕ್ಲೀನರುಗಳ ಸಂಕಷ್ಟದ ಬಗ್ಗೆ 'ಲಾಕ್​​​ಡೌನ್​ ಎಫೆಕ್ಟ್​​​, ಬಳ್ಳಾರಿಯಲ್ಲಿ ಲಾರಿಯಲ್ಲೇ ದಿನ ದೂಡುತ್ತಿರುವ ಬೇರೆ ರಾಜ್ಯಗಳ ಕಾರ್ಮಿಕರು!' ಎಂಬ ಶೀರ್ಷಿಕೆಯಡಿ ಈಟಿವಿ ಭಾರತ ವರದಿ ಪ್ರಕಟಿಸಿತ್ತು.

ಈ ವರದಿಗೆ ಸ್ಪಂದಿಸಿದ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಎನ್.ರಾಜಪ್ಪನವರು ತಮ್ಮ ಸಿಬ್ಬಂದಿಗೆ ರೇಷನ್ ಕಿಟ್‌ ವಿತರಿಸುವಂತೆ ಸೂಚನೆ ನೀಡಿದ್ದರು.

ಮಹಾರಾಷ್ಟ್ರ ಮೂಲದ ಈ ಸಾಯಿ ಟ್ರಾನ್ಸ್‌ಪೋರ್ಟ್ ಮಾಲೀಕರು ಲಾಕ್‌ಡೌನ್ ಆದಾಗ ಕೇವಲ ಸ್ವಲ್ಪ ಹಣವನ್ನು ಮಾತ್ರ ಖರ್ಚಿಗೆಂದು ನೀಡಿದ್ದರು. ಆ ಹಣ ಖರ್ಚಾಗಿದ್ದು ನಮ್ಮಲ್ಲಿ ರೇಷನ್ ಖರೀದಿಗೂ ಹಣವಿಲ್ಲ. ನಮಗೆ ಕರ್ನಾಟಕ ಸರ್ಕಾರ ಯಾವುದೇ ನೆರವು ನೀಡಿಲ್ಲ ಎಂಬ ಅಳಲನ್ನು ಈಟಿವಿ ಭಾರತ ಜೊತೆಗೆ ಚಾಲಕ ಭೇದಿ ಪಂಡಿತ್ ತೋಡಿಕೊಂಡಿದ್ದರು.‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.