ಬಳ್ಳಾರಿ: ನಗರದ ರಾಘವೇಂದ್ರ ಎಂಟರ್ ಪ್ರೈಸಸ್ ನ ಕಚೇರಿಯ ಹೊರಾಂಗಣದಲ್ಲಿಂದು ಟಚ್ ಫಾರ್ ಲೈಫ್ ಫೌಂಡೇಷನ್ ವತಿಯಿಂದ ನೂರಾರು ಪೌರಕಾರ್ಮಿಕರಿಗೆ ರೇಷನ್ ಕಿಟ್ ವಿತರಿಸಲಾಯಿತು.
ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಶಾಸಕ ಎನ್.ಸೂರ್ಯನಾರಾಯಣ ರೆಡ್ಡಿ ನೇತೃತ್ವದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯ ಅಂದಾಜು 600 ಕಾರ್ಮಿಕರಿಗೆ ರೇಷನ್ ಕಿಟ್ ಹಾಗೂ ಮಾಸ್ಕ್ ವಿತರಿಸಲಾಯಿತು.
ರೇಷನ್ ಕಿಟ್ ಪಡೆಯಲೆಂದು ವಿವಿದ ಕಡೆಯಿಂದ ಟ್ರ್ಯಾಕ್ಟರ್ ಮೂಲಕ ಆಗಮಿಸಿದ್ದ ಕಾರ್ಮಿಕರು, ರೇಷನ್ ಕಿಟ್ ಪಡೆದುಕೊಳ್ಳುವ ವೇಳೆ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದಾದರೂ, ರೇಷನ್ ಕಿಟ್ ದೊರೆತ ಬಳಿಕ ಮನೆಗೆ ತೆರಳುವ ಅವಸರದಲ್ಲಿ ಅಂತರದ ನಿಯಮ ಪಾಲಿಸುವಲ್ಲಿ ಎಡವಿದ್ದಾರೆ.