ETV Bharat / state

ಗಣಿ ಜಿಲ್ಲೆಯಲ್ಲಿ ತಗ್ಗಿದ ಹೆಚ್​ಐವಿ ಸೋಂಕಿತ ಪ್ರಕರಣಗಳು,ಡಿಎಪಿಸಿಯು ವರದಿ - ಬಳ್ಳಾರಿ ಜಿಲ್ಲೆಯಲ್ಲಿ ಹೆಚ್​ಐವಿ ಸೋಂಕಿತ ಪ್ರಕರಣಗಳು

ಗಣಿನಗರಿ ಬಳ್ಳಾರಿ ಜಿಲ್ಲೆಯಾದ್ಯಂತ ಹೆಚ್​ಐವಿ ಸೋಂಕಿತ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ತಗ್ಗಿದೆ.

Decreased HIV-infected cases
ಜಿಲ್ಲೆಯಲ್ಲಿ ತಗ್ಗಿತು ಹೆಚ್​ಐವಿ ಪ್ರಕರಣಗಳು
author img

By

Published : Dec 10, 2019, 10:38 PM IST

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಹೆಚ್​ಐವಿ ಸೋಂಕಿತ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಶೇ 0.25ರಷ್ಟು ಇಳಿಕೆಯಾಗಿದೆ.

ಈ ಹಿಂದಿನ ಅಂಕಿ ಸಂಖ್ಯೆಗೂ ಈಗಿನ ಅಂಕಿ ಸಂಖ್ಯೆಗಳಿಗೆ ಹೋಲಿಕೆ ಮಾಡಿ ನೋಡಿದಾಗ ಈ ಬಾರಿ ಗಣನೀಯ ಪ್ರಮಾಣದಲ್ಲಿ ಹೆಚ್​​ಐವಿ ಸೋಂಕಿತ ಪ್ರಕರಣಗಳು ತಗ್ಗಿದೆ ಎಂಬ ಮಾಹಿತಿಯನ್ನು ಡಿಎಪಿಸಿಯು(ಏಡ್ಸ್​​ ತಡೆ ಮತ್ತು ನಿಯಂತ್ರಣ ಸಂಸ್ಥೆ) ವಿಭಾಗವು ಬಹಿರಂಗಪಡಿಸಿದೆ.

ಜಿಲ್ಲೆಯಲ್ಲಿ ತಗ್ಗಿತು ಹೆಚ್​ಐವಿ ಪ್ರಕರಣಗಳು

2002 ರಿಂದ ಅಕ್ಟೋಬರ್ 2019ರವರೆಗೆ ಅಂದಾಜು 14,59,203 ಮಂದಿಯನ್ನು ಹೆಚ್​ಐವಿ ಪರೀಕ್ಷೆಗೆ ಒಳಪಡಿಸಲಾಗಿದೆ. ಅಂದಾಜು 26,400 ಮಂದಿ ಹೆಚ್​ಐವಿ ಸೋಂಕಿತರೆಂದು ಗುರುತಿಸಲಾಗಿದ್ದು, ಸುಮಾರು 8,288 ಮಂದಿಗೆ ಎಆರ್​ಟಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ.

ಈವರೆಗೆ 5306 ಮಂದಿ ಹೆಚ್​ಐವಿ ಸೋಂಕಿತ ಕಾಯಿಲೆಯಿಂದ ಜಿಲ್ಲೆಯಲ್ಲಿ ಮರಣ ಹೊಂದಿದ್ದಾರೆ. ಹಾಗು 49 ತೃತೀಯ ಲಿಂಗಿಗಳು ಹಾಗೂ 609 ಮಕ್ಕಳು ಎಆರ್​ಟಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Intro:ಗಣಿಜಿಲ್ಲೆಯಲಿ ತಗ್ಗಿದ ಹೆಚ್ ಐವಿ ಸೋಂಕಿತ ಪ್ರಕರಣಗಳು
ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ ಐವಿ ಸೋಂಕಿತ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಶೇ.0.25ರಷ್ಟು ಇಳಿಕೆಯಾಗಿ ಅದೀಗ 21ನೇ ಸ್ಥಾನಕ್ಕೆ ಜಾರಿ ಕೊಂಡಿದೆ.
ಹೌದು, ಈ ಹಿಂದಿನ ಅಂಕಿ- ಸಂಖ್ಯೆಗೂ ಹೀಗಿನ ಅಂಕೆ - ಸಂಖ್ಯೆಗಳಿಗೆ ಹೋಲಿಕೆ ಮಾಡಿ ನೋಡಿದಾಗ ಈ ಬಾರಿ ಗಣನೀಯ ಪ್ರಮಾಣದಲ್ಲಿ ತಗ್ಗಿದೆ ಎಂಬ ಮಾಹಿತಿಯನ್ನು ಡ್ಯಾಪ್ ಕು ವಿಭಾಗವು ಬಹಿರಂಗಪಡಿಸಿದೆ.
ಹೆಚ್ ಐವಿ ಪ್ರಿವಲೆನ್ಸ್ ನ 2016 ರ ಸರ್ವೇಲೆನ್ಸ್ ಪ್ರಕಾರ ಶೇ. 0.25 ರಷ್ಟು ಕಡಿಮೆಯಾಗಿ, ಜಿಲ್ಲೆಯ 21ನೇ ಸ್ಥಾನಕ್ಕೆ ಜಾರಿ ಕೊಂಡಿರೋದು ಖುಷಿಯ ಸಂಗತಿಯೂ ಆಗಿದೆ. ಹೀಗಾಗಿ, ಜಿಲ್ಲೆಯ ಡ್ಯಾಪ್ ಕು‌ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಗೆ ಕೊಂಚಮಟ್ಟಿಗೆ‌ ನಿರಾಳವಾಗಿದೆ. ಆದರೆ, 0.25 ರಿಂದ ಶೂನ್ಯ ಸಾಧನೆ ಮಾಡಬೇಕೆಂಬ ಅಚಲವಾದ ನಿರ್ಧಾರದಿಂದ ಡ್ಯಾಪ್‌ ಕು ವಿಭಾಗ ಮಾತ್ರ‌ ಹಿಂದೆ ಸರಿದಿಲ್ಲ‌.
ಗರ್ಭೀಣಿಯರಲ್ಲಿ ಕಂಡು ಬರುವ ಹೆಚ್ ಐವಿ‌ ಸೋಂಕಿತರನ್ನು ಗುರುತಿಸಿ ಅಂಥವರಿಗೆ ಸಕಾಲದಲ್ಲಿ ಜಾಗೃತಿ ಮೂಡಿಸೋದು ಹಾಗೂ ರಕ್ತಪರೀಕ್ಷೆ ಸೇರಿದಂತೆ ‌ಇನ್ನಿತರೆ ಪ್ರಾಯೋಗಿಕವಾಗಿ ‌ಪರೀಕ್ಷೆಯನ್ನು ಮಾಡಿಸಿ ಹೆಚ್ ಐವಿ ಸೋಂಕಿತ‌ರಲ್ಲಿನ ಕಾಯಿಲೆಯನ್ನು ತಹಬದಿಗೆ ತರಲು ಶತಾಯಗತಾಯ
ಪ್ರಯತ್ನ ಮಾಡಲಾಗುತ್ತಿದೆ. ಅದರ ಪರಿಣಾಮವಾಗಿ
ಶೇ.0.05 ರಷ್ಟಿದ್ದ ಪ್ರಮಾಣವನ್ನು ಶೇ.0.04 ಗೆ ಇಳಿಸ
ಲಾಗಿದೆ. ಅಲ್ಲದೇ, ನಾಲ್ಕನೇ ಸ್ಥಾನದಲ್ಲಿ ಈ ಪಾಸಿಟಿವ್
ಕೇಸ್ ಗಳಿವೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಇಂದ್ರಾಣಿ ಅವರು ಈ‌ ಟಿವಿ ಭಾರತದೊಂದಿಗೆ ತಮ್ಮ ಅನಿಸಿಕೆಯನ್ನು ಈ‌ ರೀತಿಯಾಗಿ ಹಂಚಿಕೊಂಡಿದ್ದಾರೆ.
2002 ರಿಂದ ಅಕ್ಟೋಬರ್ 2019ರವರೆಗೆ ಅಂದಾಜು 1459203 ಮಂದಿಯನ್ನು ಹೆಚ್ ಐವಿ ಪರೀಕ್ಷೆಗೆ ಒಳ ಪಡಿಸಲಾಗಿದೆ. ಅಂದಾಜು 26400 ಮಂದಿಯನ್ನು
ಹೆಚ್ ಐವಿ ಸೋಂಕಿತರೆಂದು ಗುರುತಿಸಲಾಗಿದೆ.
ಸುಮಾರು 8288 ಮಂದಿಗೆ ಎಆರ್ ಟಿ ಚಿಕಿತ್ಸೆಯನ್ನು ನೀಡಲಾಗುತ್ತದೆ. 5306 ಮಂದಿ ಹೆಚ್ ಐವಿ ಸೋಂಕಿತ ಕಾಯಿಲೆಯಿಂದ ಮರಣ ಹೊಂದಿದ್ದಾರೆ. 49 ತೃತೀಯ ಲಿಂಗಿಗಳು ಹಾಗೂ 609 ಮಕ್ಕಳು ಎಆರ್ ಟಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದರು.

Body:2019- 20ನೇ ಸಾಲಿನಲ್ಲಿ ಅಂದಾಜು 63400 ಮಂದಿಗೆ ಈ ಹೆಚ್ ಐವಿ ಪರೀಕ್ಷೆಯನ್ನು ಮಾಡಲಾಗಿದೆ. ಆ ಪೈಕಿ 363 ಮಂದಿ ಗೆ ಹೆಚ್ಐವಿ ಸೋಂಕಿತ ಕಾಯಿಲೆ ಇರೋದು ಖಾತ್ರಿಯಾಗಿದೆ. 16 ಮಂದಿ ಗರ್ಭೀಣಿಯರಲ್ಲೂ ಶಂಕಿತ ಹೆಚ್ ಐವಿ ಸೋಂಕಿತ ಕಾಯಿಲೆ ಕಂಡುಬಂದಿದೆ ಎಂದರು.
ಸಾಮಾನ್ಯ ರೋಗಿಗಳಲ್ಲಿ ಕಂಡು ಬಂದಿರುವ ಹೆಚ್ ಐವಿ ಸೋಂಕಿತ ಕಾಯಿಲೆಯ‌ ಪ್ರಮಾಣ ಗಣನೀಯವಾಗಿ ಕಡಿಮೆ ಆಗಿದ್ದು, 2018- 19 ನೇಯ ಸಾಲಿನಲ್ಲಿ ಶೇ. 0.77ರಷ್ಟಿತ್ತು. ಅದೀಗ ಶೇ 0.57 ರಷ್ಟು ಇಳಿಕೆಯಾಗಿದೆ. ಬಳ್ಳಾರಿ ಜಿಲ್ಲೆಯು
11 ಸ್ಥಾನದಲ್ಲಿದೆ ಎಂದು ಡಾ.ಇಂದ್ರಾಣಿ ತಿಳಿಸಿದ್ದಾರೆ.

Conclusion:ಬೆಂಗಳೂರು ಐಇಸಿ ವಿಭಾಗದ ಜಂಟಿ‌ ನಿರ್ದೇಶಕ ಡಾ.ಸಂಜಯ ಪಾಟೀಲ ಅವರು ಮಾತನಾಡಿ, 2008
ರಿಂದ 2019ರವರೆಗೆ ಅಂದಾಜು 74 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಹೆಚ್ ಐವಿ ಸೋಂಕಿತ ನೆಗೆಟಿವ್ ಕಾಯಿಲೆಗೆ ತುತ್ತಾದ ಪರಿಣಾಮ ಇಂಥ ಸಾವು-ನೋವುಗಳು ಸಂಭವಿಸಿಯಾದ್ರೂ, ಪ್ರಸ್ತುತ ದಿನಮಾನಗಳಲ್ಲಿ ಸಾವಿನ ಪ್ರಕರಣಗಳು ಕಡಿಮೆಯಾಗಿವೆ.‌ 2020ನೇ ಇಸವಿಯೊಳಗೆ ಹೆಚ್ ಐವಿ ಸೋಂಕಿತ ಕಾಯಿಲೆಯನ್ನು ಶೂನ್ಯದಾಯಕ ಸ್ಥಿತಿಗೆ ತರಲು ರಾಜ್ಯ ಸರ್ಕಾರ ಗುರಿಯನ್ನು ಹೊಂದಿದೆ. ಆ ನಿಟ್ಟಿನಲ್ಲಿ ನಾವೆಲ್ಲ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತೇವೆ ಎಂದ್ರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

KN_BLY_2_HIV_STASTUS_STY_VSL_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.