ETV Bharat / state

ವಿಜಯನಗರ ಜಿಲ್ಲೆ ರಚನೆ ಬೆಂಬಲಿಸಿ‌ ಪತ್ರ ಚಳುವಳಿ

author img

By

Published : Dec 17, 2020, 6:21 PM IST

ಬಳ್ಳಾರಿ ವಲಯಲ್ಲಿ ಅಖಂಡ ಬಳ್ಳಾರಿ ವಿಭಜಿಸಿರುವುದನ್ನು‌ ಖಂಡಿಸಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುತ್ತಿದೆ. ವಿಜಯನಗರ ಜಿಲ್ಲೆಗೆ ಪರ ಮತ್ತು ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವುದು ಕುತೂಹಲ ಮೂಡಿಸಿದೆ.

Vijayanagar
ವಿಜಯನಗರ

ಹೊಸಪೇಟೆ: ವಿಜಯನಗರ ಜಿಲ್ಲೆ ರಚನೆ ಬೆಂಬಲಿಸಿ‌ ಪತ್ರ ಚಳುವಳಿ ನಡೆಸಲು ಜಿಲ್ಲಾ ಹೋರಾಟ ಸಮಿತಿ ನಿರ್ಧರಿಸಿದೆ. ಈಗಾಗಲೇ ಹೋರಾಟಗಾರರು ಸಭೆ ನಡೆಸಿ ನೂತನ ಜಿಲ್ಲೆಗೆ ಬೆಂಬಲಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಬಳ್ಳಾರಿ ವಲಯಲ್ಲಿ ಅಖಂಡ ಬಳ್ಳಾರಿ ವಿಭಜಿಸಿರುವುದನ್ನು‌ ಖಂಡಿಸಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುತ್ತಿದೆ. ವಿಜಯನಗರ ಜಿಲ್ಲೆಗೆ ಪರ ಮತ್ತು ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವುದು ಕುತೂಹಲ ಮೂಡಿಸಿದೆ. ಈಗಾಗಲೇ ರಾಜ್ಯ ಸರ್ಕಾರ ಡಿ. 14ರಂದು ವಿಜಯನಗರ ಜಿಲ್ಲೆಯ ಕುರಿತು ಅಧಿಸೂಚನೆ ಹೊರಡಿಸಿದೆ. ಆ ಅಧಿಸೂಚನೆಯಲ್ಲಿ ಜನಸಂಖ್ಯೆ, ಪ್ರದೇಶ, ಭೂ ಕಂದಾಯ, ಸಾರ್ವಜನಿಕ, ಬೇಡಿಕೆ ಹಾಗೂ ಆಡಳಿತಾತ್ಮಕ ಅನುಕೂಲತೆಗಳನ್ನು ಗಣನೆಗೆ ತಗೆದುಕೊಂಡು ಬಳ್ಳಾರಿ ಜಿಲ್ಲೆಯ ಸರಹದ್ದನ್ನು ವಿಭಜಿಸಿ ಹೊಸಪೇಟೆ ಪಟ್ಟಣವನ್ನು ವಿಜಯನಗರ ಹೊಸ ಜಿಲ್ಲೆಯಾಗಿ ರಚಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಲಾಗಿದೆ. ಅಲ್ಲದೆ ಆಕ್ಷೇಪಣೆ ಅಥವಾ ಸಲಹೆ ನೀಡಲು ಒಂದು ತಿಂಗಳ‌‌ ಕಾಲ ಅವಕಾಶ ಕಲ್ಪಿಸಲಾಗಿದೆ.

ವಿಜಯನಗರ ಜಿಲ್ಲೆ ಬೆಂಬಲಿಸಿ ಪತ್ರ ಚಳುವಳಿ

ಪತ್ರ ಚಳುವಳಿ: ಪಶ್ಚಿಮ ತಾಲೂಕುಗಳಾದ ಹೊಸಪೇಟೆ, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹೂವಿನಹಡಗಲಿ, ಹರಪನಹಳ್ಳಿ ಗ್ರಾಮಗಳ ಮೂಲಕ‌ ಪತ್ರ ಚಳುವಳಿ ನಡೆಸಲು ನಿರ್ಧರಿಸಲಾಗಿದೆ. ಇದರ ಪ್ರಮುಖ ಉದ್ದೇಶ ವಿಜಯನಗರ ಜಿಲ್ಲೆ ರಚನೆ ಅತ್ಯವಶ್ಯಕತೆ ಏನು ಎಂಬುದನ್ನು ತಿಳಿಸಲು ಈ ಚಳುವಳಿ ಹಮ್ಮಿಕೊಳ್ಳಲಾಗುತ್ತಿದೆ ಎಂಬುದು ಹೋರಾಟಗಾರರ ಅಭಿಪ್ರಾಯವಾಗಿದೆ.

ಬೆಂಬಲಿಸಲು ಸಾಮಾಜಿಕ ಜಾಲತಾಣ ಬಳಕೆ: ವಿಜಯನಗರ ಜಿಲ್ಲೆ ರಚನೆ ಬೆಂಬಲಿಸಿ‌ ಅಭಿಯಾನ ಸಾಮಾಜಿಕ ಜಾಲತಾಣ ಮೂಲಕ ಪ್ರಾರಂಭಿಸಲಾಗಿದೆ.‌ ಪಶ್ಚಿಮ ತಾಲೂಕುಗಳ ಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿಯಿಂದ ಹೊಸಪೇಟೆಯನ್ನು ಜಿಲ್ಲಾ ಕೇಂದ್ರವನ್ನಾಗಿಸಿ ವಿಜಯನಗರ ಜಿಲ್ಲೆಗಾಗಿ 2 ದಶಕಗಳಿಂದ ನಡೆದ ಹೋರಾಟದ ಫಲವಾಗಿ ಕರ್ನಾಟಕ ಸರ್ಕಾರ ರಾಜ್ಯದ 31ನೇ ಜಿಲ್ಲೆಯನ್ನಾಗಿ ಘೋಷಿಸಿರುವುದು ಎಲ್ಲರ ಹೋರಾಟಕ್ಕೆ ಸಂದ ಜಯವಾಗಿದೆ ಎನ್ನುತ್ತಾರೆ ಹೋರಾಟಗಾರರು.

ವ್ಯಾಪಕ ಪ್ರಚಾರ; ಈಗ ಈ ವಿಷಯವಾಗಿ ಬೆಂಬಲ ಸೂಚಿಸಿ ಪಶ್ಚಿಮ ತಾಲೂಕುಗಳ ಎಲ್ಲಾ ಸಂಘ ಸಂಸ್ಥೆಗಳು, ರಾಜಕೀಯ ಮುಖಂಡರು, ರೈತ ಮುಖಂಡರು, ಬುದ್ಧಿಜೀವಿಗಳು ಯುವ ವಿದ್ಯಾರ್ಥಿಗಳು, ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು, ವಿಜಯನಗರ ಜಿಲ್ಲೆಯ ಎಲ್ಲಾ ಅಭಿಮಾನಿಗಳು ತಮ್ಮ ಬೆಂಬಲವನ್ನು ಪತ್ರದ ಮೂಲಕ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆ, ಕೊಠಡಿ ಸಂಖ್ಯೆ-505, ಬಹುಮಹಡಿಗಳ ಕಟ್ಟಡ, ಡಾ. ಬಿ.ಆರ್.ಅಂಬೇಡ್ಕರ್ ಬೀದಿ, ಬೆಂಗಳೂರ-560001 ಈ ವಿಳಾಸಕ್ಕೆ ಲಿಖಿತ ರೂಪದಲ್ಲಿ ಸಲ್ಲಿಸಬೇಕು ಎಂದು ಸಾಮಾಜಿಕ ಜಾಲತಾಣದ ಮೂಲಕ ಪ್ರಚಾರ ಮಾಡಲಾಗುತ್ತಿದೆ.‌

ಓದಿ: ಬಗೆದಷ್ಟು ಬಯಲಾಗುತ್ತಿದೆ ಯುವರಾಜನ ಮೋಸದ ಜಾಲ: ಹೆಚ್ಚಿನ ವಿಚಾರಣೆಗೆ 5 ದಿನಗಳ ಕಾಲ ವಶಕ್ಕೆ ಪಡೆದ ಸಿಸಿಬಿ

ಈಟಿವಿ ಭಾರತ್​ನೊಂದಿಗೆ ವಿಜಯನಗರ ಜಿಲ್ಲೆ ಹೋರಾಟ ಸಮಿತಿಯ ಸದಸ್ಯ ಗುಜ್ಜಲ್ ನಾಗರಾಜ ಮಾತನಾಡಿ, ವಿಜಯನಗರ ಜಿಲ್ಲೆಗಾಗಿ ಎರಡು ದಶಕಗಳಿಂದ ಹೋರಾಟ ಮಾಡಲಾಗುತ್ತಿದೆ. ಸಚಿವ ಆನಂದ್​ ಸಿಂಗ್ ವಿಜಯನಗರ ಜಿಲ್ಲೆಗೆ ಬೆಂಬಲಿಸಿದ್ದಾರೆ. ರಾಜ್ಯ ಸರ್ಕಾರ ಈಗಾಗಲೇ ಅಧಿಸೂಚನೆ ಹೊರಡಿಸಿದೆ. ಇದಕ್ಕೆ ಬೆಂಬಲಿಸಿ ಪಶ್ಚಿಮ ತಾಲೂಕುಗಳ ಗ್ರಾಮಗಳಲ್ಲಿ ಪತ್ರ ಚಳುವಳಿಯನ್ನು ನಡೆಸಲಾಗುವುದು ಎಂದರು.

ವಿಜಯನಗರ ಜಿಲ್ಲೆ ಹೋರಾಟ ಸಮಿತಿಯ ಸದಸ್ಯ ನಿಂಬಗಲ ರಾಮಕೃಷ್ಣ ಮಾತನಾಡಿ, ಈಗಾಗಲೇ ರಾಜ್ಯ ಸರ್ಕಾರ ವಿಜಯನಗರ ಜಿಲ್ಲೆ ರಚಿಸಿರುವುದಕ್ಕೆ ಅಧಿಸೂಚನೆ ಹೊರಡಿಸಿದೆ. ಆಕ್ಷೇಪಣೆ ಹಾಗೂ ಸಲಹೆಗಾಗಿ ಒಂದು ತಿಂಗಳ ಕಾಲ ಅವಕಾಶ ನೀಡಿದೆ. ಅಧಿಸೂಚನೆಯನ್ನು ಹೊರಡಿಸಿದ ನಂತರ ಪಶ್ಚಿಮ ತಾಲೂಕುಗಳ ಜನರೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.