ಬಳ್ಳಾರಿ : ಬಾವಿಗೆ ಬಿದ್ದ ಕುರಿ ಮರಿಯನ್ನು ರಕ್ಷಿಸಲು ಹೋದ ಇಬ್ಬರು ಕುರಿಗಾಹಿಗಳು ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಸಿರುಗುಪ್ಪ ತಾಲೂಕಿನ ಮಣ್ಣೂರು ಸೂಗೂರು ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಿವಾಸಿಗಳಾದ ನೀಲಮ್ಮ (22) ಹಾಗೂ ಶಿವಾಜಿ (11) ಮೃತ ಕುರಿಗಾಹಿಗಳು. ಮಣ್ಣೂರು ಸೂಗೂರು ಗ್ರಾಮದ ಹೊರವಲಯದ ಬಾವಿ ಬಳಿ ನೀರು ಕುಡಿಯಲು ತೆರಳಿದ್ದ ಕುರಿ ಮರಿ ಕಾಲು ಜಾರಿ ಬಾವಿಗೆ ಬಿದ್ದಿತ್ತು. ಅದನ್ನು ರಕ್ಷಿಸಲು ಹೋದ ಇಬ್ಬರು ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಈ ಕುರಿತು ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.